ಜಿಲ್ಲೆಯಲ್ಲೂ ಸಂಚಾರ ಆರಂಭಿಸಿದ ಪ್ರಕೃತಿ ಸ್ನೇಹಿ ಇ-ಆಟೋಗಳು
ಮಾಲಿನ್ಯ ತಡೆಗೆ ಸಹಕಾರಿ
Team Udayavani, Nov 14, 2019, 4:00 AM IST
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದ ಇ-ಆಟೋ ವೀಕ್ಷಣೆ.
ಕಾಸರಗೋಡು: ರಾಜ್ಯದಲ್ಲಿ ಈಗಾಗಲೇ ಕಡಿಮೆ ದರದಲ್ಲಿ ಸಂಚಾರ ಸೇವೆ ಒದಗಿಸುವ ಇ-ಆಟೋ ಜಿಲ್ಲೆಯಲ್ಲೂ ತನ್ನ ಸಂಚಾರಿ ಸೌಲಭ್ಯ ಆರಂಭಿಸಿದೆ. ಜಿಲ್ಲೆಯಲ್ಲಿ ಇ-ಆಟೋದ ಸೇವೆ ಪ್ರಾರಂಭ ವಾಗಿದೆ. 55 ನಿಮಿಷಗಳಲ್ಲಿ ಬ್ಯಾಟರಿಯನ್ನು ಪೂರ್ಣಪ್ರಮಾದಲ್ಲಿ ರೀಚಾರ್ಜ್ ನಡೆಸ ಬಹುದಾದ, ಒಮ್ಮೆ ಚಾರ್ಜ್ ನಡೆಸಿದರೆ 100 ಕಿ.ಮೀ. ನಿರಾಳವಾಗಿ ಸಂಚಾರ ನಡೆಸಬಹುದು. ಒಂದು ಕಿ.ಮೀ. ಗೆ ಕೇವಲ 50 ಪೈಸೆ ವೆಚ್ಚ ತಗುಲುವುದು. ಪೆಟ್ರೋಲ್, ಡೀಸೆಲ್ ಇಂಧನ ಬಳಸಿ ಸಂಚಾರ ನಡೆಸುವ ವಾಹನಗಳಿಂದುಂಟಾಗುವ ಪರಿಸರ ಮಾಲಿನ್ಯದ ಭೀತಿಯಿಲ್ಲ ಇತ್ಯಾದಿಗಳು ಗಮನಾರ್ಹವಾಗಿದ್ದು, ಇ-ಆಟೋವನ್ನು ಜನಜನಿತಗೊಳಿಸಲಾಗುತ್ತಿದೆ.
ಅತಿ ವೇಗದಲ್ಲಿ ಬೆಳೆಯುತ್ತಿರುವ ಜಿಲ್ಲೆಯ ಎಲ್ಲ ಪೇಟೆಗಳಿಗೆ ಇ-ಆಟೋಗಳು ಅನುಯೋಜ್ಯ ವಾಗಿವೆ. ಶೀಘ್ರದಲ್ಲೇ ಈ ಕಡೆಗಳಲ್ಲಿ ಇ-ಆಟೋಗಳು ಆಗಮಿಸಿ, ಸಂಚಾರ ನಡೆಸಲಿವೆ. ಪ್ರತಿದಿನ ಇಂಧನ ಬಳಸುವ ವಾಹನಗಳು ನೀಡುವ ಪರಿಸರ ಮಾಲಿನ್ಯದ ಅಡ್ಡಪರಿಣಾಮದ ಪರಿಹಾರಕ್ಕೆ ಶಾಶ್ವತ ಪರಿಹಾರ ಎಂಬಂತೆ ಪ್ರಕೃತಿ ಸ್ನೇಹಿ ವಾಹನವಾಗಿರುವ ಇ-ಆಟೋವನ್ನು ಎಲ್ಲರೂ ಎರಡೂ ಕೈಗಳಿಂದ ಸ್ವಾಗತಿಸುತ್ತಿದ್ದಾರೆ.
ಪ್ರಕೃತಿ ಸ್ನೇಹಿ ವಾಹನ
ರಾಜ್ಯ ಸರಕಾರದ ಇ-ವಾಹನ ನೀತಿಯ ಹಿನ್ನೆಲೆಯಲ್ಲಿ ಇ-ಆಟೋದ ನಿರ್ಮಾಣ ನಡೆದಿದೆ. ರಾಜ್ಯ ಸಾರ್ವಜನಿಕ ಸಂಸ್ಥೆ ಕೇರಳ ಅಟೋಮೊಬೈಲ್ಸ್ ನಿಗಮ (ಕೆ.ಎ.ಎಲ್.)ಇ-ಆಟೋವನ್ನು ನಿರ್ಮಿಸುತ್ತಿದೆ. ದೇಶದಲ್ಲೇ ಪ್ರಥಮ ಬಾರಿಗೆ ಸಾರ್ವಜನಿಕ ಸಂಸ್ಥೆಯೊಂದು ಇ-ಆಟೋದಂತಹ ವಾಹನ ನಿರ್ಮಾಣಕ್ಕೆ ಪರವಾನಗಿ ಪಡೆದಿದೆ ಎಂಬುದೂ ಗಮನಾರ್ಹ ವಿಚಾರ. ಈ ವಾಹನದ ಎಲ್ಲ ಬಿಡಿ ಭಾಗಗಳೂ ದೇಶದಲ್ಲೇ ನಿರ್ಮಾಣಗೊಳ್ಳುತ್ತಿವೆ. ನೇರನೋಟಕ್ಕೆ ಇತರ ಆಟೋರಿಕ್ಷಾಗಳಂತೆಯೇ ಕಾಣುವ ರೀತಿ ಇ-ಆಟೋಗಳನ್ನು ತಯಾರಿಸಲಾಗಿದೆ. ಶಬ್ದ ಕಡಿಮೆ ಮತ್ತು ಸುರಕ್ಷಿತ ಚಾಲನೆಯ ವ್ಯವಸ್ಥೆಯೂ ಈ ವಾಹನದ ವಿಶೇಷವಾಗಿದೆ. ಚಾಲಕನಲ್ಲದೆ, ಏಕಕಾಲಕ್ಕೆ ಮೂವರು ಪ್ರಯಾಣಿಕರು ಸಂಚರಿಸಬಹುದಾಗಿದೆ.
ಈ ವಾಹನದ ಬೆಲೆ 2.8 ಲಕ್ಷ ರೂ.ಇದೆ. ಆರಂಭದಲ್ಲಿ ನೀಂ ಜೀಂ ಆಟೋಗಳು ಕೆ.ಎ.ಎಲ್. ಸಂಸ್ಥೆಯ ಮೂಲಕ ನೇರವಾಗಿ ಮಾರಾಟಗೊಳ್ಳುತ್ತವೆ. ಮುಂದಿನ ಹಂತ ದಲ್ಲಿ ಉಳಿದ ಜಿಲ್ಲೆಗಳಲ್ಲಿ ಡೀಲರ್ ಶಿಪ್ ನೀಡಲಾಗುವುದು. ಇ-ಆಟೋಗೆ ರಾಜ್ಯ ಸರಕಾರದ ಸಬ್ಸಿಡಿ ಸೌಲಭ್ಯ ಲಭ್ಯ ವಾದರೆ ಬೆಲೆ ಯಲ್ಲಿ 30 ಸಾವಿರ ರೂ. ಕಡಿಮೆಯಾಗಲಿದೆ.
ಇ-ಆಟೋವನ್ನು ಬೆಂಬಲಿಸಿ : ಜಿಲ್ಲಾಧಿಕಾರಿ
ಇ-ಆಟೋವನ್ನು ನಾವೆಲ್ಲರೂ ಬೆಂಬಲಿಸ ಬೇಕು ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಆಗ್ರಹಿಸಿದ್ದಾರೆ. ವಿದ್ಯುನ್ಮಾನ ವಾಹನಗಳ ಬಗ್ಗೆ ನಾವು ತೋರುವ ಆಸಕ್ತಿಯ ಬಲುದೊಡ್ಡ ಹೆಜ್ಜೆಗಾರಿಕೆ ಇ-ಆಟೋಗಳಾಗಿವೆ. ಜಿಲ್ಲೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚುತ್ತಿರುವಂತೆಯೇ ಪರಿಸರ ಮಾಲಿನ್ಯವೂ ನಿಯಂತ್ರಣಾತೀತವಾಗಿ ವರ್ಧಿಸುತ್ತಿದೆ. ಸೌರಶಕ್ತಿ ಮೂಲಕದ ವಿದ್ಯುತ್ ಬಳಕೆಗೆ ಆದ್ಯತೆ ನೀಡುತ್ತಿರುವ ನಮ್ಮ ಮಟ್ಟಿಗೆ ಇ-ಆಟೋ ಮಹತ್ವ ಪಡೆಯುತ್ತದೆ. ಹೆಚ್ಚುವರಿ ಆಟೋಚಾಲಕರು ಇ-ಆಟೋಗಳ ಕಡೆಗೆ ವರ್ಗಾವಣೆ ಗೊಳ್ಳಬೇಕು ಎಂದವರು ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.