ಕುಸಿದು ಬೀಳುವ ಸ್ಥಿತಿಯಲ್ಲಿರುವ ನೀರ್ಚಾಲು ಬಸ್ ನಿಲ್ದಾಣ
Team Udayavani, Jul 29, 2018, 6:00 AM IST
ಬದಿಯಡ್ಕ: ಕುಂಬಳೆ- ಬದಿಯಡ್ಕ-ಮುಳ್ಳೇರಿಯ ರಸ್ತೆಯ ಮಧ್ಯೆ ಬೆಳೆಯುತ್ತಿರುವ ಪೇಟೆಗಳ ಪೈಕಿ ನೀರ್ಚಾಲು ಬಹುಮುಖ್ಯವಾಗಿದ್ದರೂ ಸೌಲಭ್ಯಗಳ ಕೊರತೆಯನ್ನು ಎದುರಿ ಸುತ್ತಿರುವುದು ಕಂಡುಬರುತ್ತದೆ.
ನೀರ್ಚಾಲು ಪೇಟೆ ಜನದಟ್ಟಣೆಯ ಕೇಂದ್ರವಾಗಿ ಗುರುತಿಸಿಕೊಂಡಿದೆ. ಆದರೆ ಮೂಲ ಸೌಕರ್ಯಗಳ ಕೊರತೆಯಿಂದ ತೀವ್ರ ಹೆ„ರಾಣಗೊಂಡು ನಲುಗುತ್ತಿರುವುದೂ ಸತ್ಯ.
ಕಾಸರಗೋಡಿನಿಂದ ವಿದ್ಯಾನಗರ ಮೂಲಕವಾಗಿ ಮಾನ್ಯ ನೀರ್ಚಾಲು, ಕಾಸರಗೋಡು ಮಧೂರು ನೀರ್ಚಾಲಿಗೆ ಅತಿ ನಿಕಟ ರಸ್ತೆ ಸೌಕರ್ಯ-ಬಸ್ ಸೌಲಭ್ಯ ಇದ್ದು, ನೀರ್ಚಾಲಿನಲ್ಲಿ ಒಂದನೇ ತರಗತಿಯಿಂದ ಪ್ಲಸ್ ಟು ವರೆಗಿನ ವಿದ್ಯಾಭ್ಯಾಸ ಸೌಕರ್ಯದ ಸುವ್ಯವಸ್ಥಿತ ಶಾಲೆ, ಕರ್ಣಾಟಕ ಬ್ಯಾಂಕ್ ಶಾಖೆ, ಸೇವಾ ಸಹಕಾರಿ ಬ್ಯಾಂಕ್, ಕ್ಯಾಂಪ್ಕೋ ಶಾಖೆ, ಹಾಲುತ್ಪಾದಕ ಸಹಕಾರಿ ಸಂಘ, ಕೇರಳ ಸರಕಾರದ ಅಕ್ಷಯ ಕೇಂದ್ರ ಹೀಗೆ ಹತ್ತು-ಹಲವು ಸಾರ್ವಜನಿಕ ಕೇಂದ್ರಗಳಿದ್ದರೂ ಹಲವು -ಸಮಸ್ಯೆಗಳಿಂದ ಪೇಟೆ ನಲುಗುತ್ತಿದೆ.
ಉಪಯೋಗ ಶೂನ್ಯ
ಸಾರ್ವಜನಿಕ ಆವಶ್ಯಕತೆಗಳಿಗೆ, ದಿನನಿತ್ಯ ನೀರ್ಚಾಲಿಗೆ ಆಗಮಿಸುವ ಜನ ಸಾಮಾನ್ಯರಿಗೆ, ವಿದ್ಯಾಭ್ಯಾಸ ಕಕೆ ಬರುವ ವಿದ್ಯಾ ರ್ಥಿಗಳಿಗೆ ಬಸ್ ನಿಲುಗಡೆಗೆ ವ್ಯವಸ್ಥಿತ ನಿಲ್ದಾಣದ ಕೊರತೆ ದಶಕಗಳಿಂದಲೂ ಮುಂದುವರಿದಿದೆ. ನೀರ್ಚಾಲು ಕೆಳಗಿನ ಪೇಟೆಯಲ್ಲಿ ಇರುವ ಹಳೆಯ ನಿಲ್ದಾಣ ಇದ್ದೂ ಉಪಯೋಗ ಶೂನ್ಯವಾಗಿದ್ದು, ಬಿಸಿಲು-ಮಳೆಗಳಿಗೆ ರಸ್ತೆ ಬದಿಯಲ್ಲೇ ಬಸ್‌ಗಳಿಗಾಗಿ ಕಾಯುವ ಸ್ಥಿತಿ ಜನರದ್ದಾಗಿದೆ.
ವಿಭಾಜಕ-ವೇಗ ನಿಯಂತ್ರಕ
ಕೆಳಗಿನ ನೀರ್ಚಾಲು ಪೇಟೆಯಲ್ಲಿ ಶಾಲಾ ಕಾಲೇಜುಗಳ ದಟ್ಟಣೆಯ ಕಾರಣ ಬದಿಯಡ್ಕ ಪೊಲೀಸರು ತಾತ್ಕಾಲಿಕ ರಸ್ತೆ ತಡೆ ಬ್ಯಾರಿ ಕೇಡ್ ನಿಯಂತ್ರಕಗಳನ್ನು ವ್ಯವಸ್ಥೆಗೊಳಿಸಿದ್ದರೂ ಅದು ಸಮಪರ್ಕವಾಗಿ ವ್ಯವಸ್ಥೆಗೊಳಿಸಲಾಗ ದ್ದರಿಂದ ಹೆಚ್ಚು ಪ್ರಯೋಜನಕಾರಿ ಯಾಗುತ್ತಿಲ್ಲ.ಈ ಕಾರಣದಿಂದ ಶಾಶ್ವತ ವೇಗ ನಿಯಂತ್ರಕ ವ್ಯವಸ್ಥೆಗೆ ಸಂಬಂಧಪಟ್ಟವರು ಶೀಘ್ರ ಕ್ರಮ ಕೈಗೊಳ್ಳಬೇಕು.
ನೀರ್ಚಾಲು ಮೇಲಿನ ಪೇಟೆಯಲ್ಲಿ ಇತ್ತೀಚೆಗೆ ರಾತ್ರಿಹೊತ್ತು ಸಮಾಜ ಘಾತುಕರ ಅಟ್ಟಹಾಸ ಕೇಳಿ ಬರುತ್ತಿದ್ದು, ಬಸ್ ನಿಲ್ದಾಣ ಕೇಂದ್ರೀಕರಿಸಿ ಮಾಫಿಯಾಗಳ ಸಮಸ್ಯೆಯಿಂದ ಸಾರ್ವಜನಿಕರು ಭಯಪಡುವ ವಾತಾವರಣದೆ.ಈ ನಿಟ್ಟಿನಲ್ಲಿಪೊಲೀಸ್ ಸಹಕಾರ ದೊಂದಿಗೆ ಅವುಗಳ ಹುಟ್ಟಡಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಕ್ರಮಕೈಗೊಳ್ಳ ಬೇಕಿದೆ.
ಗ್ರಂಥಾಲಯ ಅಗತ್ಯ
ನೀರ್ಚಾಲು ಕೇಂದ್ರೀಕರಿಸಿ ಸಾರ್ವಜನಿಕ ಗ್ರಂಥಾಲಯ- ವಾಚನಾಲಯದ ಅಗತ್ಯವಿದ್ದು,ಈ ನಿಟ್ಟಿನಲ್ಲಿ ಸ್ಥಳೀಯ ಸಂಘಟನೆಗಳು, ಸ್ಥಳೀಯಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.ನೀರ್ಚಾಲಿನಲ್ಲಿ ಶತಮಾನಗಳಿಂದಲೂ ಸೇವೆ ಸಲ್ಲಿಸುತ್ತಿರುವ ಮಹಾಜನ ವಿದ್ಯಾಸಂಸ್ಥೆ ಊರ-ಪರವೂರ ವಿದ್ಯಾ ಕಾಂಕ್ಷಿಗಳ ಕಲಿಕಾ ಸೌಕರ್ಯಗಳಲ್ಲಿ ಮುಂಚೂಣಿಯಲ್ಲಿದ್ದು, ಶಾಲೆಯ ಗ್ರಂಥಾಲಯಕ್ಕಿಂತ ಹೊರತಾಗಿ ಸಾರ್ವಜನಿಕರ ಸೌಕರ್ಯಗಳಿಗೆ ಲಭ್ಯ ವಾಗುವ ಗ್ರಂಥಾಲಯ ಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿ ಇನ್ನೂ ಕೈಗೂಡಿಲ್ಲ.
ಅಗ್ನಿಶಾಮಕ ದಳ ಘಟಕ
ನೀರ್ಚಾಲು ಕೇಂದ್ರೀಕರಿಸಿ ಒಂದೆರಡು ವರ್ಷಗಳಲ್ಲಿ ಅಗ್ನಿಶಾಮಕ ಘಟಕ ಕಾರ್ಯಾರಂಭಿಸುವ ಸೂಚನೆ ಇದ್ದು ಈ ಹಿನ್ನೆಲೆಯಲ್ಲಿ ಸೌಕರ್ಯಯುತ ವ್ಯವಸ್ಥೆಗೆ ಸಂಬಂಧಪಟ್ಟವರು ಮುಂದಾಗಬೇಕು.
ಒಂದು ಆಯುರ್ವೇದ ಹಾಗೂ ಒಂದು ಅಲೋಪತಿ ಸರಕಾರಿ ಆಸ್ಪತ್ರೆ ಗಳು ಕಾರ್ಯಾಚರಿಸುತ್ತಿದ್ದರೂ ಜನ ಸಾಮಾನ್ಯರ ಬೇಡಿಕೆಯಷ್ಟು ಅದು ಮುಂದುವರಿದಿಲ್ಲ.
ಸರಕಾರಿ ಆಯು ರ್ವೇದ ಆಸ್ಪತ್ರೆ ಮದ್ಯಾಹ್ನದ ವರೆಗೆ ಮಾತ್ರ ಕಾರ್ಯಾ ಚರಿಸುತ್ತಿದ್ದು ಅದನ್ನು ದಿನಪೂರ್ತಿ ಸೇವೆ ಲಭ್ಯವಿರುವಂತೆ ಉನ್ನತೀಕರಿಸಬೇಕಿದೆ. ಜತೆಗೆ ಅಲೋಪತಿ ಚಿಕಿತ್ಸಾ ಸೌಕರ್ಯದ ಆಸ್ಪತ್ರೆಯನ್ನೂ ಅಭಿವೃದ್ದಿ ಪಡಿಸಬೇಕಿದೆ.
ಉರಿಯದ ಬೀದಿ ದೀಪ
ಕಿರಿಯ ಪ್ರಾಥಮಿಕ ಶಾಲೆಯ ಮುಂಭಾಗ,ಮೇಲಿನ ಪೇಟೆಯ ಅಟೋ ನಿಲ್ದಾಣಗಳ ಬೀದಿ ದೀಪಗಳು ಉರಿಯದೆ ರಾತ್ರಿ ಹೊತ್ತು ಅಪಘಾತಗಳಿಗೆ ಕಾರಣವಾಗುತ್ತಿದೆ ಜೊತೆಗೆ ನೀರ್ಚಾಲು ಮಾನ್ಯ ರಸ್ತೆಯ ತಿರುವಿನಲ್ಲ ಬೀದಿ ದೀಪದ ಅಗತ್ಯವಿಬೇಳ ವಿಷ್ಣುಮೂರ್ತಿ ನಗರಕ್ಕಿಂತ ಸ್ವಲ್ಪ ದೂರದ ಬೇಳ ಕ್ಷೇತ್ರದ ಮಧ್ಯೆಯೂ ಬೀದಿ ದೀಪಗಳ ಅಗತ್ಯವಿದೆ.
ಮೀನು ಮಾರುಕಟ್ಟೆ ಬೇಕು
ನೀರ್ಚಾಲು ಮೇಲಿನ ಪೇಟೆಯ ಬಸ್ ನಿಲ್ದಾಣದ ಆಸುಪಾಸಿನಲ್ಲಿ ಇದೀಗ ಮೀನು ಮಾರಾಟ ನಡೆಯುತ್ತಿದ್ದು, ಇದರಿಂದ ನಾಗರಿಕರಿಗೆ ಕಿರಿಕಿರಿಯಾಗುತ್ತಿದೆ. ಬಸ್ ಪ್ರಯಾಣಿಕರಿಗೆ ತೊಂದರೆ ಯಾಗುವ ಕಾರಣ ವ್ಯವಸ್ಥಿತ ವಾದ ಮೀನು ಮಾರಾಟ ಕೇಂದ್ರವೊಂದರ ಅಗತ್ಯ ನೀರ್ಚಾಲಿಗಿದೆ.
ನಿರ್ಮಿಸಲು ಬದ್ಧ
ಸ್ಥಳ ನೀಡಲು ಯಾರಾದರೂ ಮುಂದಾದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗುವುದು. ಪೇಟೆಯಲ್ಲಿ ಒಂದು ಬಸ್ಸು ನಿಲ್ದಾಣವಿದ್ದು ಇನ್ನೊಂದು ಕಡೆಯಲ್ಲಿ ಹೊಸನಿಲ್ದಾಣ ನಿರ್ಮಿಸುವ ಕಾರ್ಯ ಪರಿಗಣನೆಯಲ್ಲಿದೆ.
– ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷರು,ಬದಿಯಡ್ಕ ಪಂಚಾಯತ್
ಸಹಕಾರಕ್ಕೆ ಸಿದ್ಧ
ನೀರ್ಚಾಲು ಪೇಟೆ ಅಭಿವೃದ್ಧಿ ಹೊಂದಿದೆಯಾದರೂ ಹಲವು ಅನನುಕೂಲತೆಗಳನ್ನೂ ಎದುರಿಸುತ್ತಿದೆ.ಅದರಲ್ಲಿ ಶೌಚಾಲಯದ ಕೊರತೆಯೂ ಒಂದು. ಪಂಚಾಯತ್ ಶೌಚಾಲಯ ನಿರ್ಮಾಣಕ್ಕೆ ಮುಂದಾದಲ್ಲಿ ಜನರನ್ನು ಒಟ್ಟುಗೂಡಿಸಿ ಸ್ಥಳ ಒದಗಿ ಸಿ ಸಹಕಾರ ನೀಡುವೆವು.
– ಗಣೇಶ ಭಟ್ ನೀರ್ಚಾಲು ಸ್ಥಳೀಯ ನಿವಾಸಿ
– ಅಖೀಲೇಶ್ ನಗುಮುಗಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.