ಕಾಸರಗೋಡು : ನೆಲ್ಲಿಕುಂಜೆ ಕಿನಾರೆಯಲ್ಲಿ ಪರಿಸರ ಸ್ನೇಹಿ ಸೀ ವೇವ್ ಬ್ರೇಕರ್ ಸಿದ್ಧ
Team Udayavani, Oct 30, 2022, 8:49 AM IST
ಕಾಸರಗೋಡು : ಪರಿಹರಿಸಲಾಗದ ಸಮಸ್ಯೆಯಾಗಿರುವ ಸಮುದ್ರ ಕೊರೆತ ತಡೆಗಟ್ಟಲು ಪರಿಸರ ಸ್ನೇಹಿ ಸೀ ವೇವ್ ಬ್ರೇಕರ್ ಹೆಸರಿನ ನೂತನ ಪರಿಕಲ್ಪನೆಯನ್ನು ಕಾಸರಗೋಡಿನಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ.
ಕಾಸರಗೋಡಿನ ಯುವ ಉದ್ಯಮಿ ಯು.ಕೆ. ಯೂಸುಫ್ ಕಡಿಮೆ ವೆಚ್ಚದ ಈ ಹೊಸ ವಿಧಾನ ಪರಿಚಯಿಸಿದ್ದು, ನೆಲ್ಲಿಕುಂಜೆ ಕಡಪ್ಪುರದಲ್ಲಿ ಪ್ರಾಯೋಗಿಕವಾಗಿ ಸೀ ವೇವ್ ಬ್ರೇಕರ್ ನಿರ್ಮಿಸಲಾಗಿದೆ. ಯೋಜನೆ ಬಗ್ಗೆ ಕರ್ನಾಟಕ ಸರಕಾರವೂ ಉತ್ಸಾಹ ತೋರಿದ್ದು, ಈಗಾಗಲೇ ಬಂದರು ಮತ್ತು ಮೀನುಗಾರಿಕೆ ಖಾತೆ ಸಚಿವ ಅಂಗಾರ ಅವರು ಅಧಿಕಾರಿಗಳೊಂದಿಗೆ ಕಾಸರಗೋಡಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದಾರೆ. ಯೂಸುಫ್ ಅವರು ಪ್ರಾಯೋಗಿಕವಾಗಿ ಕೈಗೊಂಡಿರುವ ಸೀ ವೇವ್ ಬ್ರೇಕರ್ ಭವಿಷ್ಯದಲ್ಲಿ ಸಮುದ್ರ ಕೊರೆತ ತಡೆಗಟ್ಟುವಲ್ಲಿ ಮಹತ್ವದ ಮೈಲುಗಲ್ಲಾಗುವ ಸಾಧ್ಯತೆಯಿದೆ.
ಸೀ ವೇವ್ ಬ್ರೇಕರ್
ಬೃಹತ್ ಗಾತ್ರದ ಬಂಡೆಕಲ್ಲುಗಳನ್ನು ಸಮುದ್ರ ದಡಕ್ಕೆ ತಂದು ಪೇರಿಸಿ ತಡೆಗೋಡೆ ನಿರ್ಮಿಸಿದರೂ ಸಮುದ್ರ ಕೊರೆತ ಯಶಸ್ವಿಯಾಗಿ ತಡೆಗಟ್ಟುವಲ್ಲಿ ಸರಕಾರಕ್ಕೆ ಇದುವರೆಗೆ ಸಾಧ್ಯವಾಗದಿರುವ ಕಾರಣ ಸೀ ವೇವ್ ಬ್ರೇಕರ್ ಎಂಬ ಹೊಸ ಪರಿಕಲ್ಪನೆಯಿಂದ ಕೊರೆತ ತಡೆಯುವ ಪ್ರಯತ್ನ ನಡೆಸಲಾಗುತ್ತಿದೆ. ಸುಮಾರು 8 ಅಡಿ ಆಳಕ್ಕೆ ಹಾಗೂ 20 ಅಡಿ ಅಗಲದಲ್ಲಿ ಹೊಂಡ ತೆಗೆದು ತಳಭಾಗದಿಂದ ಕಾಂಕ್ರೀಟ್ ಫ್ರೇಮ್ ಜೋಡಿಸಿ, ಇದರ ಮಧ್ಯೆ ಮರಳು ತುಂಬಿ, ಮೇಲ್ಭಾಗದಲ್ಲಿ ಹುಲ್ಲು ಹಾಗೂ ಇತರ ಗಿಡಗಳನ್ನು ಬೆಳೆಸಲಾಗುತ್ತದೆ. ನೆಲ್ಲಿಕುಂಜೆಯಲ್ಲಿ ಪ್ರಾಯೋಗಿಕವಾಗಿ 30 ಮೀ. ಉದ್ದದ ಸೀ ವೇವ್ ಬ್ರೇಕರನ್ನು ನಿರ್ಮಿಸಲಾಗಿದೆ.
ಇದನ್ನೂ ಓದಿ : ಜಮ್ಮು – ಕಾಶ್ಮೀರದ ಕಿಶ್ತ್ವಾರ್ ಸುರಂಗದಲ್ಲಿ ಭೂಕುಸಿತ : 4 ಸಾವು, 6 ಮಂದಿಗೆ ಗಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.