ಆರಿಕ್ಕಾಡಿ ಕೋಟೆ ಅಭಿವೃದ್ಧಿಗೆ ಇಲಾಖೆಯ ದಿವ್ಯ ನಿರ್ಲಕ್ಷ್ಯ
Team Udayavani, Mar 15, 2018, 9:10 AM IST
ಕುಂಬಳೆ: ಕೋಟೆಗಳ ನಾಡಾಗಿರುವ ಕಾಸರಗೋಡು ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ ಕುಂಬಳೆ ಬಳಿಯ ಆರಿಕ್ಕಾಡಿ ಕೋಟೆ ಸರಕಾರ ಮತ್ತು ಪ್ರವಾಸೋದ್ಯಮ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದ ಕಾಡು ಪೊದೆಗಳಿಂದ ತುಂಬಿದೆ.ಇಲಾಖೆಯ ವತಿಯಿಂದ ಪ್ರವಾಸಿಗರಿಗೆ ಕೋಟೆಗೆ ಸ್ವಾಗತ ನೀಡುವ ಫಲಕ ಹೆದ್ದಾರಿ ಪಕ್ಕದಲ್ಲಿ ಸ್ಥಾಪಿಸಿದ್ದರೂ ಇಲ್ಲಿಗೆ ಆಗಮಿಸಿದ ಪ್ರವಾಸಿಗರಿಗೆ ಇಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಗಿಡ ಗಂಟಿಗಳಿಂದ ತುಂಬಿದ ಕೋಟೆ ಪ್ರದೇಶದಲ್ಲಿ ನಡೆದಾಡಲೂ ಕಷ್ಟವಾಗುವುದು. ವೀರಯೋಧನಂತೆ ಎದೆ ಎತ್ತಿ ನಿಂತಿರುವ ಕೋಟೆಯ ಶತ್ರು ನಿರೀಕ್ಷಣಾ ಗೋಪುರದ ಸುತ್ತ ಹುಲ್ಲು ಪೊದೆ ಆವರಿಸಿದೆ.
ಈ ತನಕ ರಾಜ್ಯವನ್ನು ಆಳಿದ ಎಡಬಲ ಸರಕಾರಗಳು ಈ ಕೋಟೆಯನ್ನು ಸಂರಕ್ಷಿಸುವುದಾಗಿಯೂ ಅಭಿವೃದ್ಧಿ ಪಡಿಸಲಾಗುವುದೆಂಬುದಾಗಿ ಭರವಸೆ ನೀಡಿದರೂ ಈ ತನಕ ಇದು ಈಡೇರಲಿಲ್ಲ. ಕೋಟೆಯ ಸುತ್ತ ಮುತ್ತಲಿನ ಸ್ಥಳವನ್ನು ಖಾಸಗಿ ವ್ಯಕ್ತಿಗಳು ಅಕ್ರಮಿಸಿ ಸ್ವಾಧೀನ ಮಾಡಿರುವುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ. ಇಲಾಖೆಯ ಅಧಿಕಾರಿಗಳಲ್ಲಿ ಅಭಿವೃದ್ಧಿ ಯ ಕುರಿತು ವಿಚಾರಿಸಿದಾಗ ಪ್ರವಾಸೋದ್ಯಮ ಇಲಾಖೆಯ ಆದ್ಯತಾ ಪಟ್ಟಿಯಂತೆ ಅಭಿವೃದ್ಧಿ ಕೈಗೆತ್ತಿಕೊಳ್ಳುವುದಾಗಿ ಹೇಳುತ್ತಾರೆ.ಆದರೆ ನಿಧಾನವೇ ಪ್ರಧಾನ ಎಂಬ ನಿಲುವು ಸರಕಾರ ಮತ್ತು ಇಲಾಖೆಯದು.
ಹಿರಿಯ ವೆಂಕಟಪ್ಪ ನಾಯಕರು 1608ರಲ್ಲಿ ಸ್ಥಾಪಿಸಿದ ಈ ಕೋಟೆಯ ಅವಗಣನೆ ಸಲ್ಲದು.ಮಂಗಳೂರು ಕಾಸರಗೋಡು ಹೆದ್ದಾರಿ ಪಕ್ಕದಲ್ಲಿರುವ ಕೋಟೆಯನ್ನು ಅಭಿವೃದ್ಧಿ ಪಡಿಸಿ ಪ್ರವಾಸಿಗರಿಗೆ ವೀಕ್ಷಿಸಲು ಅನುಕೂಲ ಮಾಡಿಕೊಡಬೇಕೆಂಬ ಅಪೇಕ್ಷೆ ಪ್ರವಾಸಿಗರದು. ಇನ್ನಾದರೂ ಸರಕಾರ ಕೋಟೆಯ ಅಭಿವೃದ್ಧಿ ಯೋಜನೆಯನ್ನು ಕೈಗೊಳ್ಳಲು ಮುಂದಾಗಬೇಕಾಗಿದೆ.
ಚಿತ್ರ:ಶರತ್ ಕುಮಾರ್ ಜಿ.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragod: ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Kasaragod: ಮುಖವಾಡ ಧರಿಸಿದ ವ್ಯಕ್ತಿಯಿಂದ ವಿದ್ಯಾರ್ಥಿಗೆ ಇರಿತ; ಪ್ರಕರಣ ದಾಖಲು
Kasaragodu: ನಾಪತ್ತೆಯಾಗಿದ್ದ ಯುವಜೋಡಿ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.