ಓದಿನ ಸುಖ ನೋಡುವುದರಲ್ಲಿಲ್ಲ: ವಿರಾಜ್
ಕವನ, ವ್ಯಂಗ್ಯಚಿತ್ರ ತರಬೇತಿ
Team Udayavani, Jun 28, 2019, 5:36 AM IST
ಮುಳ್ಳೇರಿಯ: ಸಾಹಿತ್ಯದ ಮೂಲಕ ವಿಚಾರಗಳ ಮಂಥನ ಹಾಗೂ ಶಬ್ದಗಳ ಹೂರಣದಿಂದ ಭಾಷೆಯ ಜೀವಂತಿಕೆಯ ಸತ್ವದ ಅನಾವರಣವಾಗುತ್ತದೆ. ಸಾಹಿತ್ಯ ಮನಸ್ಸಿಗೆ ಹಿತ ನೀಡುವುದು. ಆಧುನಿಕ ದೃಶ್ಯ ಮಾಧ್ಯಮಗಳು ಎಷ್ಟೇ ಪ್ರಬಲವಾಗಿದ್ದರೂ, ಅಕ್ಷರ ಮಾಧ್ಯಮಕ್ಕೆ ಸೋಲಿಲ್ಲ. ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ಓದುವುದರಲ್ಲಿನ ಖುಷಿ ನೋಡುವುದರಲ್ಲಿಲ್ಲ ಎಂದು ಸಾಹಿತಿ ವಿರಾಜ್ ಅಡೂರು ಹೇಳಿದರು.
ಅವರು ಕುಂಟಾರಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನ ವಾರಾಚರಣೆಯ ಅಂಗವಾಗಿ ನಡೆದ ವ್ಯಂಗ್ಯಚಿತ್ರ ಹಾಗೂ ಕವನ ರಚನಾ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಕವನಗಳನ್ನು ಪ್ರಾಸಬದ್ಧತೆಯ ಸಹಜ ಹೊಂದಾಣಿಕೆಯ ಮೂಲಕ ಅರ್ಥವತ್ತಾಗಿ ಬರೆಯಬೇಕು. ಕವನ ರಚನೆಗೆ ವಿಷಯಗಳ ಸಂಗ್ರಹ ಅಗತ್ಯ. ವಿಷಯಗಳ ಸಂಗ್ರಹವು ಓದುವಿಕೆಯಿಂದ ಮಾತ್ರ ಸಾಧ್ಯ. ಮಕ್ಕಳಲ್ಲಿ ಓದುವಿಕೆಯ ಆಸಕ್ತಿಯನ್ನು ಹೆಚ್ಚಿಸಲು ವಾಚನಾ ವಾರಾಚರಣೆ ಪ್ರಯೋಜನಕಾರಿ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ವ್ಯಂಗ್ಯಚಿತ್ರ ರಚನೆಯ ಬಗ್ಗೆಯೂ ಮಕ್ಕಳಿಗೆ ತರಬೇತಿ ನೀಡಲಾಯಿತು.
ಜಗದೀಶ್ ಮಾಸ್ತರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತೃ ಪಿಟಿಎ ಅಧ್ಯಕ್ಷೆ ತಾಹಿರಾ, ಮುಖ್ಯ ಶಿಕ್ಷಕಿ ಪ್ರಶಾಂತಾ, ಶಿಕ್ಷಕಿಯರಾದ ಆಶಾ, ದಾಕ್ಷಾಯಿಣಿ, ಹಾಜಿರಾ ಮೊದಲಾದವರು ಉಪಸ್ಥಿತರಿದ್ದರು.
ನಮಿತಾ ಸ್ವಾಗತಿಸಿದರು. ಸಮೀಕ್ಷಾ ವಂದಿಸಿದರು. ಶಿಕ್ಷಕಿ ಸುಮಂಗಲಾ ತಂತ್ರಿ ನಿರೂಪಿಸಿದರು.
ವಾಚನ ವಾರಾಚರಣೆಯಲ್ಲಿ ಸುಮಾರು 50ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವಾಚನ ವಾರಾಚರಣೆಯ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳದಲ್ಲೇ ನಡೆದ ವ್ಯಂಗ್ಯಚಿತ್ರ ಹಾಗೂ ಕವನ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.