ದೇಲಂಪಾಡಿ:  ದೇಗುಲದಲ್ಲಿ ನೃತ್ಯದೀಪ ಸಂಭ್ರಮ 

Team Udayavani, Apr 12, 2018, 9:35 AM IST

Nruthyadeepa-11-4.jpg

ಬದಿಯಡ್ಕ: ಭಾರತದ ಸಂಸ್ಕೃತಿಯ ನೆರಳಾಗಿರುವ ಭರತನಾಟ್ಯದಂತಹ ಕಠಿನ ವಿದ್ಯೆಯನ್ನು ಸಾಧನೆಯ ತಪಸ್ಸಿನ ಮೂಲಕ ಒಲಿಸಿಕೊಂಡು ಕಳೆದ ಮೂರು ದಶಕಗಳಿಂದ ಕಲಾಸೇವೆಯಲ್ಲಿ ನಿರತರಾಗಿರುವ ಗುರು ಬಾಲಕೃಷ್ಣ ಮಾಸ್ಟರ್‌ ಮಂಜೇಶ್ವರ ಅವರ ಶಿಷ್ಯ ವೃಂದದಿಂದ ದೇಲಂಪಾಡಿ ಉಮಾಮಹೇಶ್ವರ ಮಹಾಗಣಪತಿ ಶಾಸ್ತಾರ ದೇವಸ್ಥಾನದಲ್ಲಿ ನೃತ್ಯದೀಪ  ಭರತನಾಟ್ಯ  ಜರುಗಿತು. ಜಗತ್ತು ಶಾಸ್ತ್ರೀಯ ನೃತ್ಯ ಶೈಲಿಯಿಂದ ಸಂಪನ್ನವಾಗಿದೆ. ಆದರೆ ಆಧುನಿಕ ನೃತ್ಯ ಪ್ರಕಾರಗಳೆಡೆಗೆ ಜನರು ಆಕರ್ಷಿತರಾಗುತ್ತಿರುವ ಈ ಕಾಲಘಟ್ಟದಲ್ಲೂ ಭರತನಾಟ್ಯ ತನ್ನ ಮಹತ್ವವನ್ನು ಉಳಿಸಿಕೊಂಡಿದೆ ಎನ್ನುವುದಕ್ಕೆ ಸಾಕ್ಷಿ ನೃತ್ಯದೀಪ. ಭರತನಾಟ್ಯ, ಕೂಚುಪುಡಿ, ಮೋಹಿನಿಯಾಟ್ಟಂಗಳಂತಹ ಶಾಸ್ತ್ರೀಯ ನೃತ್ಯರೂಪಗಳನ್ನು ಅಳವಡಿಸಿಕೊಂಡು ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಬಲ್ಲ ವಿಶಿಷ್ಟವಾದ, ಅದ್ಭುತವಾದ ನೃತ್ಯ ಸಂಭ್ರಮವನ್ನು ಉಣಬಡಿಸಿದ ಕಾರ್ಯಕ್ರಮವು ದೀಪಾ ದಿವ್ಯ ಸಹೋದರಿಯರ ನೃತ್ಯದೊಂದಿಗೆ ಪ್ರಾರಂಭವಾಗಿ ಮುಂದೆ ನಾಟ್ಯನಿಲಯಂನ ಪ್ರಬುದ್ಧ ಕಲಾವಿದರಾದ ಭಾಗ್ಯಶ್ರೀ, ಮಹಿಮಾ ಕಾಸರಗೋಡು ಮುಂತಾದ ನುರಿತ ನರ್ತಕಿಯರ ನರ್ತನದ ಭಾವರಸಧಾರೆಯಿಂದ ಶ್ರೀಮಂತವಾಯಿತು.  

ನಾಟ್ಯನಿಲಯಂನ ಪ್ರತಿಭಾನ್ವಿತೆ, ಕಲಾಸಂಪನ್ನೆ ಸಾತ್ವಿಕಾಕೃಷ್ಣ ಮಂಜೇಶ್ವರ ಅವರ ಕೂಚುಪುಡಿ ಕಲಾವಿದೆಯ ಕಲಾನೈಪುಣ್ಯತೆಯನ್ನು ತೆರೆದಿಡುವಲ್ಲಿ ಯಶಸ್ವಿಯಾಯಿತು. ಶಿರದಲ್ಲಿ ಮೂರು ಕಲಶಗಳು, ಪಾದ ಕಂಚಿನ ಹರಿವಾಣದಲ್ಲಿರಿಸಿ ನರ್ತಿಸಿದ ರೀತಿ ಕಲಾರಸಿಕರನ್ನು ಮೂಕವಿಸ್ಮಿತರನ್ನಾಗಿ ಮಾಡಿತು. ಸ್ವಾತಿಲಕ್ಷ್ಮೀ ಪಿಲಿಕೂಡ್ಲು ಅವರ ಕೃಷ್ಣಾ ನೀ ಬೇಗನೆ ಬಾರೋ ಭರತನೃತ್ಯವು ಭಾವನೆಗಳ ಅಭಿವ್ಯಕ್ತಿ ಹಾಗೂ ಮಮತೆಯ ಲಯದಿಂದ ಪ್ರೇಕ್ಷಕರನ್ನು  ಮೈಮರೆಯುವಂತೆ ಮಾಡಿತು. ದಿವ್ಯ ಹಾಗೂ ಬಳಗದವರಿಂದ ಭರತ್‌ ಕೃಷ್ಣ, ಕಿರಣ್‌ ಕುಮಾರ್‌, ಮಧುರಾ ಭಟ್‌ ಮುಂತಾದ ಕಲಾವಿದರೊಂದಿಗೆ ಸಂಚಾರಿ ತಂಡದ ನೃತ್ಯಪ್ರದರ್ಶನವು ಸೇರಿದಾಗ ಅಲ್ಲೊಂದು ನೃತ್ಯಲೋಕ ಸೃಷ್ಟಿಯಾಯಿತೆಂದರೆ ಅತಿಶಯೋಕ್ತಿಯಲ್ಲ. ಗುರುಬಾಲಕೃಷ್ಣ ಮಂಜೇಶ್ವರ ಅವರೊಂದಿಗೆ ಹಿಮ್ಮೇಳದಲ್ಲಿ ಉಣ್ಣಿಕೃಷ್ಣನ್‌ ವೀಣಾಲಯಂ, ಉಣ್ಣಿಕೃಷ್ಣನ್‌ ನೀಲೇಶ್ವರಂ, ಗಡಿನಾಡ ಕೋಗಿಲೆ ವಿಠಲ ಶೆಟ್ಟಿ, ಸುರೇಶ್‌ ಕಾಂಞಂಗಾಡ್‌, ಕಣ್ಣನ್‌, ಬಾಲಕೃಷ್ಣನ್‌, ಕಿರಣ್‌ ಮಾಸ್ಟರ್‌, ಶರ್ಮಿಳಾ ಬಾಲಕೃಷ್ಣ ಶ್ರೀಕಲಾ ಸತ್ಯಶಂಕರ ಮೊದಲಾದವರು ಸಹಕರಿಸಿದರು

ಚಿತ್ರ:- ಫೋಕ್ಸ್‌ ಸ್ಟಾರ್‌ ಸ್ಟುಡಿಯೋ ಬದಿಯಡ್ಕ

ಟಾಪ್ ನ್ಯೂಸ್

Pinarayi Vijayan: ಸಿಂಗ್‌ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ

Pinarayi Vijayan: ಸಿಂಗ್‌ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ

1-man-mohan

Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ

CBI

ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

1-urmila

Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು

Yadgiri: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ

Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Court-1

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರ ಕೊ*ಲೆ ಪ್ರಕರಣ

courts

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು

Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ

Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

5

Kasaragod: ಚಂದ್ರಗಿರಿ ಸೇತುವೆಯಿಂದ ಹೊಳೆಗೆ ಹಾರಿದ ಯುವಕ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Pinarayi Vijayan: ಸಿಂಗ್‌ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ

Pinarayi Vijayan: ಸಿಂಗ್‌ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ

1-man-mohan

Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ

4

Malpe: ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

CBI

ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.