ಪೌಷ್ಟಿಕ ಆಹಾರ ಮಾಸಾಚರಣೆ: ಅಂಗನವಾಡಿಗಳಲ್ಲಿ ಜಾಗೃತಿ
Team Udayavani, Sep 14, 2020, 5:33 PM IST
ಮಧೂರು ಗ್ರಾಮ ಪಂಚಾಯತ್ ನ ಭಗವತಿ ನಗರದಲ್ಲಿ ನೇರಳೆ ಬಣ್ಣದ ಪೋಷಕಾಹಾರದ ಬಗ್ಗೆ ಮಾಹಿತಿ ನೀಡಲಾಗುತ್ತಿರುವುದು.
ಕಾಸರಗೋಡು: ಪೋಷಣ್ ಅಭಿಯಾನ್ ಯೋಜನೆ ಮೂಲಕ ಪೌಷ್ಟಿಕ ಆಹಾರ ಮಾಸಾಚರಣೆ ಅಂಗವಾಗಿ ಆಯಾ ದಿನಗಳನ್ನು ಬಣ್ಣಗಳ ಮೂಲಕ ವಿಂಗಡಿಸಿ ಮಕ್ಕಳಿಗೆ, ಅವರ ಕುಟುಂಬದ ಸದಸ್ಯರಿಗೆ ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ತಿಳಿವಳಿಕೆ ನೀಡುತ್ತಿದ್ದಾರೆ. ಕಾಸರಗೋಡು ಜಿಲ್ಲಾ ಐ.ಸಿ.ಡಿ.ಎಸ್. ಪ್ರೋಗ್ರಾಂ ಆಫೀಸ್ ನೇತೃತ್ವದಲ್ಲಿ ವಿವಿಧ ಅಂಗನವಾಡಿಗಳಲ್ಲಿ ಈ ಕಾಯಕ ನಡೆದುಬರುತ್ತಿದೆ.
ಈ ಸರಣಿಯಲ್ಲಿ ಶನಿವಾರವನ್ನು “ನೇರಳೆ(ವಯಲೆಟ್) ಬಣ್ಣದ ದಿನ’ ಎಂದು ಗುರುತಿಸಲಾಗಿದೆ. ಕಾಸರಗೋಡು ಜಿಲ್ಲೆಯ ಎಲ್ಲ ಅಂಗನವಾಡಿಗಳಲ್ಲಿ ನೇರಳೆ ಬಣ್ಣದ ತರಕಾರಿ, ಹಣ್ಣು ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಮಕ್ಕಳಿಗೂ ನೇರಳೆ ಬಣ್ಣದ ಉಡುಪು ಧರಿಸಲಾಗಿತ್ತು.
ಮುಂದಿನ ದಿನಗಳಲ್ಲಿ ಇಂಡಿಗೋ, ನೀಲ, ಹಸುರು, ಹಳದಿ, ಕಿತ್ತಳೆ, ಕೆಂಪು ಇತ್ಯಾದಿ ಬಣ್ಣಗಳಲ್ಲಿ ದಿನಗಳನ್ನು ವಿಂಗಡಿಸಲಾಗುವುದು. ತಿಂಗಳ ಕೊನೆಯಲ್ಲಿ ಕಾಮನಬಿಲ್ಲಿನ ರೀತಿ ಎಲ್ಲ ಬಣ್ಣಗಳನ್ನು ಬಳಸಿರುವ ಪೋಷಕಾಹಾರ ಬಗ್ಗೆ ಮಾಹಿತಿ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.