ಇಂದು ಸಮಾನತೆಯ ಸಂದೇಶ ಸಾರುವ “ತಿರುವೋಣಂ’
Team Udayavani, Aug 25, 2018, 12:28 PM IST
ಕಾಸರಗೋಡು: ಸಮಾನತೆಯ ಸಾರವನ್ನು ಶಾಂತಿ ಸಾಮರಸ್ಯದ ಸಂದೇಶವನ್ನು ಸಾರುವ ಕೇರಳೀಯರ ನಾಡ ಹಬ್ಬ “ಓಣಂ’. ಜಾತಿ, ಮತ, ಧರ್ಮಗಳ ಎಲ್ಲೆ ಮೀರಿ ಯಾವುದೇ ತಾರತಮ್ಯವಿಲ್ಲದೆ ಆಚರಿಸುವ ಓಣಂ ಹಬ್ಬ ಭಾವೈಕ್ಯತೆಯನ್ನು ಬಿಂಬಿಸಿ ಮುಖ್ಯ ವಾಹಿನಿಯಲ್ಲಿ ಬೆರೆಯುವುದು ಒಂದು ರಸ ಕ್ಷಣ. ಪ್ರೀತಿ, ಐಶ್ವರ್ಯ ಹಾಗೂ ಸಮೃದ್ಧಿಯ ಸಂಕೇತವಾಗಿರುವ ಓಣಂ ಉತ್ಸವದ ತಿರುವೋಣಂ ಆ. 25ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು. ಓಣಂ ಹಬ್ಬದ ಕೇರಳೀಯರಿಗೆ ಸಂತೋಷದ ಹೊನಲಿನ ಉತ್ಸವ. ಆದರೆ ಈ ಬಾರಿ ಕೇರಳದಲ್ಲಿ ಹಿಂದೆಂದೂ ಕಾಣದ ನೆರೆಯ ಹಾವಳಿಯಿಂದಾಗಿ ಓಣಂ ಹಬ್ಬಕ್ಕೆ ಮಂಕು ಉಂಟಾಗಿದೆ. ಸರಕಾರಿ ಮಟ್ಟದ ಯಾವುದೇ ಕಾರ್ಯಕ್ರಮ ಈ ಬಾರಿ ಇಲ್ಲ.
ಹೂವಿನ ರಂಗೋಲಿ, ಮಕ್ಕಳಾಟ, ವಿವಿಧ ಸ್ಪರ್ಧೆಗಳು, ಕ್ಲಬ್‌ಗಳ ವತಿಯಿಂದ ನಡೆಯುವ ಓಣಂ ಆಚರಣೆಗಳು ಈ ಬಾರಿ ಮಂಕಾಗಿದ್ದರೂ ಸಾಂಕೇತಿಕವಾಗಿ ಓಣಂ ಹಬ್ಬವನ್ನು ಜಿಲ್ಲೆಯಾದ್ಯಂತ ಆಚರಿಸಲಾಗುತ್ತಿದೆ. ತಮ್ಮ ಮನೆಗಳಲ್ಲಿ ಮಾಡುವ ವಿಶೇಷ ಅಡುಗೆಗಳಿಗಾಗಿ ಬೇಕಾದ ಸಾಮಗ್ರಿ ಹೊಸಬಟ್ಟೆಗಳನ್ನು ಖರೀದಿಸಿ ಜನರು ಈಗಾಗಲೇ ಸಿದ್ಧರಾಗಿದ್ದಾರೆ.
ಸಂಪದ್ಭರಿತ, ಪ್ರಾಮಾಣಿಕ, ಅಸತ್ಯ ವಿಲ್ಲದ ಒಂದು ಉತ್ತಮ ಕಾಲದ ಸ್ಮರಣೆಯನ್ನು ನವೀಕರಿಸುವ ಹಬ್ಬವಾಗಿದೆ ಓಣಂ. ಇಲ್ಲಿ ಹಿಂದೆ ರಾಜ್ಯವನ್ನಾಳುತ್ತಿದ್ದ ಮಹಾಬಲಿಯ ಕಾಲವೆಂದರೆ ಅದು ಐಶ್ವರ್ಯ ಪೂರ್ಣ ಕಾಲ ಎಂದು ತಿಳಿಯಲಾಗಿದೆ.
ಇದರ ಸ್ಮರಣೆಗಾಗಿ ಮಹಾಬಲಿ ತನ್ನ ಪ್ರಜೆಗಳನ್ನು ನೋಡಲು ವರ್ಷಕ್ಕೊಮ್ಮೆ ಬರುತ್ತಾನೆ ಎಂಬ ನಂಬಿಕೆಯಲ್ಲಿ ಆತನನ್ನು ಸ್ವಾಗತಿಸಲು ಹೂವಿನ ರಂಗೋಲಿ “ಪೂಕಳಂ’ ರಚಿಸಿ ಸಿದ್ಧರಾಗಿದ್ದಾರೆ. ಆದರೆ ಈ ಬಾರಿ ರಾಜ್ಯದಲ್ಲಿ ಉಂಟಾದ ನೆರೆಯಿಂದ ಲಕ್ಷಾಂತರ ಮಂದಿ ಸಂಕಷ್ಟ ಅನುಭವಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಓಣಂ ಹಬ್ಬಕ್ಕೆ ಸಂಬಂಧಿಸಿ ಯಾವುದೇ ಸದ್ದುಗದ್ದಲವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.