ಕೋವಿಡ್ 19 ಸೋಂಕು: ಕೊಡಗಿನಲ್ಲಿ ಓರ್ವ ಸಾವು; 5 ಪಾಸಿಟಿವ್
Team Udayavani, Jul 27, 2020, 6:10 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮಡಿಕೇರಿ: ಕೊಡಗು ಜಿಲ್ಲೆಯ ಐವರಲ್ಲಿ ರವಿವಾರ ಕೋವಿಡ್ 19 ಸೋಂಕು ದೃಢಪಟ್ಟಿದೆ.
ವೀರಾಜ ಪೇಟೆ ಮೊಗರಗಲ್ಲಿಯ 46 ವರ್ಷದ ಪುರುಷ ಮೃತಪಟ್ಟಿದ್ದಾರೆ.
ಸೋಂಕಿತರ ಸಂಖ್ಯೆ 348ಕ್ಕೆ, ಮೃತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.
ಮಡಿಕೇರಿಯ ಸ್ಟಿವರ್ಟ್ಹಿಲ್ ರಸ್ತೆ ಮತ್ತು ಪುಟಾಣಿನಗರದ ಪುರುಷರು, ಆಜಾದ್ ನಗರದ ಮಹಿಳೆ, ಕುಶಾಲನಗರ ಹುಲುಸೆ ವೃದ್ಧೆ, ಬೆಂಗಳೂರು ಪ್ರಯಾಣ ಇತಿಹಾಸವಿರುವ ಗರ್ಭಿಣಿಯಲ್ಲಿ ಸೋಂಕು ದೃಢಪಟ್ಟಿದೆ.
ಕಾಸರಗೋಡು: ವೃದ್ಧ ಸಾವು; 107 ಪಾಸಿಟಿವ್
ಜಿಲ್ಲೆಯ 107 ಮಂದಿಗೆ ರವಿವಾರ ಕೋವಿಡ್ 19 ಸೋಂಕು ದೃಢಪಟ್ಟಿದೆ. ಕುಂಬಳೆ ಆರಿಕ್ಕಾಡಿಯ 70 ವರ್ಷದ ವೃದ್ಧ ಪರಿಯಾರಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಐದಕ್ಕೇರಿದೆ. ಅವರ ಸೋಂಕಿನ ಮೂಲ ತಿಳಿದುಬಂದಿಲ್ಲ. 105 ಮಂದಿಗೂ ಸಂಪರ್ಕದಿಂದ ತಗಲಿದೆ.ಇದೇ ವೇಳೆ 34 ಮಂದಿ ಗುಣಮುಖರಾಗಿದ್ದಾರೆ.
ಕೇರಳದಲ್ಲಿ 927 ಪ್ರಕರಣ: ಕೇರಳದಲ್ಲಿ ರವಿವಾರ 927 ಮಂದಿಗೆ ಕೋವಿಡ್ 19 ದೃಢವಾಗಿದೆ. 689 ಮಂದಿ ಗುಣಮುಖರಾಗಿದ್ದಾರೆ. ಕುಂಬಳೆಯ ವ್ಯಕ್ತಿ ಸೇರಿದಂತೆ ರಾಜ್ಯದಲ್ಲಿ 70ರ ಹರೆಯದ ಮೂವರು ವೃದ್ಧರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 61ಕ್ಕೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.