ತೆರೆದ ಬಾವಿ, ಕೊಳವೆಬಾವಿ ರೀಚಾರ್ಜ್‌

Team Udayavani, Mar 20, 2018, 9:45 AM IST

Kolave-marupoorana-19-3.jpg

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಜಲಕ್ಷಾಮಕ್ಕೆ ಕೊಳವೆಬಾವಿ ಮಾತ್ರವೇ ಸೂಕ್ತ  ಪರಿಹಾರ ಎಂದು ತಿಳಿದುಕೊಂಡವರು ಇದೀಗ ಅಲ್ಪ ಬದಲಾಗಿ ಚಿಂತಿಸಲು ಆರಂಭಿಸಿರುವುದು ಜಿಲ್ಲೆಯ ಮಟ್ಟಿಗೆ ಉತ್ತಮ ಬೆಳವಣಿಗೆಯಾಗಿದೆ. ಬತ್ತುವ ಬಾವಿಗಳಲ್ಲಿ ಬೇಸಿಗೆಯಲ್ಲೂ ಒರತೆ ಉಳಿದುಕೊಳ್ಳುವಂತೆ ಮಾಡುವ ಸಲುವಾಗಿ ಮಳೆನೀರು ಇಂಗಿಸುವುದಕ್ಕೆ ಜಿಲ್ಲಾ ಪಂಚಾಯತ್‌ ಹಿಂದಿಗಿಂತಲೂ ಇದೀಗ ಹೆಚ್ಚು ಒತ್ತು ಕೊಡುತ್ತಿದೆ. ಸ್ಥಳೀಯಾಡಳಿತ ಸಂಸ್ಥೆಗಳ ಜೊತೆ ಸೇರಿ ಮಳೆನೀರು ಬಾವಿಗಿಳಿಯುವಂತೆ ಮಾಡುವುದಕ್ಕೆ ಯೋಜನೆ ಹಾಕಲಾಗಿದೆ.

ಜಿಲ್ಲೆಯ ಪಳ್ಳಿಕ್ಕೆರೆ, ಅಜಾನೂರು, ತೃಕ್ಕರಿಪುರ, ಕಯ್ಯೂರು – ಚೀಮೇನಿ, ಮಡಿಕೈ, ಚೆರ್ವತ್ತೂರು ಗ್ರಾಮ ಪಂಚಾಯತ್‌ಗಳಲ್ಲಿ, ಕಾಂಞಂಗಾಡು ನಗರಸಭೆಯಲ್ಲಿ ಈ ವರ್ಷ ಪ್ರಸ್ತುತ ಯೋಜನೆಯು ಸಮಗ್ರವಾಗಿ ಜಾರಿಗೆ ಬರಲಿದೆ. ಮನೆಯ ತಾರಸಿಗೆ ಬೀಳುವ ಮಳೆನೀರನ್ನು ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿ ಬಾವಿಗೆ ತಲುಪುವಂತೆ ಮಾಡುವುದೇ ಬಾವಿ ರೀಚಾರ್ಜಿಂಗ್‌ ಯೋಜನೆಯಾಗಿದೆ.

ಈ ರೀತಿ ಮಳೆನೀರನ್ನು ಸಂಗ್ರಹಿಸಿಡಲು ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳು ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸಲಿವೆ. ರಾಜ್ಯ ಸರಕಾರದ ಆರ್ಥಿಕ ಸಹಕಾರವೂ ಲಭ್ಯವಾಗಲಿದೆ. ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರನ್ನು ಬಳಸಿಕೊಂಡು ಭೂಗರ್ಭ ಜಲ, ಕೃಷಿ, ಮಣ್ಣು  ಸಂರಕ್ಷಣೆ ಇಲಾಖೆ, ಬಡತನ ನಿರ್ಮೂಲನ ಮಿಶನ್‌, ಕುಟುಂಬಶ್ರೀ ಇವುಗಳ ಸಹಕಾರದೊಂದಿಗೆ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು. ಒಂದು ಬಾವಿಗೆ 5,000ರೂ. ವರೆಗೆ ಸಹಾಯ ದೊರಕಲಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ವೆಚ್ಚವನ್ನು ಫಲಾನುಭವಿಯೇ ಭರಿಸಬೇಕಾಗಿದೆ. ಬಾವಿಯನ್ನು ರೀಚಾರ್ಜ್‌ ಮಾಡುವುದಕ್ಕೆ ಕುಟುಂಬಶ್ರೀ ಸದಸ್ಯೆಯರಿಗೆ ತರಬೇತಿ ನೀಡಲಾಗಿದೆ. 

ಆಯಾ ಪ್ರದೇಶದ ಕುಟುಂಬಶ್ರೀ ಘಟಕಗಳು ಈ ಯೋಜನೆಯನ್ನು ಜಾರಿಗೊಳಿಸಲಿವೆ.2017-18ನೇ ವರ್ಷದ ಯೋಜನೆಗಳಲ್ಲಿ ಕೆಲವು ಮನೆಗಳಿಗೆ ಮಾತ್ರವೇ ಈ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಾಗಿದ್ದು, ಇಲ್ಲಿನ ಬಾವಿಗಳಲ್ಲಿ ನೀರಿನ ಒರತೆ ಹೆಚ್ಚಿರುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷ ತೆರೆದ ಬಾವಿ ರೀಚಾರ್ಜ್‌, ಕೊಳವೆಬಾವಿ ರೀಚಾರ್ಜ್‌ ಮೊದಲಾದ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.

ಟಾಪ್ ನ್ಯೂಸ್

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

crime

Tipper ಢಿಕ್ಕಿ: ಎಂಬಿಬಿಎಸ್‌ ವಿದ್ಯಾರ್ಥಿ ಸಾವು

Untitled-1

Kasaragod ಅಪರಾಧ ಸುದ್ದಿಗಳು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Court-Symbol

Kasaragodu: ಶಿಕ್ಷಕಿ ಆತ್ಮಹತ್ಯೆ: ಪತಿಗೆ 9 ವರ್ಷ, ಅತ್ತೆಗೆ 7 ವರ್ಷ ಕಠಿನ ಜೈಲು ಶಿಕ್ಷೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

1-japp

Japan ಆ್ಯನಿಮೇಟೆಡ್‌ ರಾಮಾಯಣ ಅ.18ಕ್ಕೆ ಮರು ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.