ಪಡ್ರೆ ಹೈಯರ್ ಸೆಕೆಂಡರಿ ಶಾಲಾ ಕಲೋತ್ಸವ ಉದ್ಘಾಟನೆ
Team Udayavani, Oct 15, 2019, 5:35 AM IST
ಪೆರ್ಲ: ಪಡ್ರೆ ವಾಣೀನಗರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಲೋ ತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಶಾಲಾ ಹಳೆ ವಿದ್ಯಾರ್ಥಿ, ಬೆಂಗಳೂರಿನ ಪತ್ರಕರ್ತೆ ವಿನುತಾ ಪೆರ್ಲ,ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣ ಗೊಳಿಸಲು ಸೂಕ್ತ ವೇದಿಕೆ ಶಾಲಾ ಕಲೋತ್ಸವ. ಮಕ್ಕಳು ಸಂಕುಚಿತ ಮನೋ ಭಾವ ದೂರ ಮಾಡಿ ವಿಶಾಲ ಹೃದಯಿಗಳಾಗಬೇಕು. ತಂತ್ರಜ್ಞಾನದಿಂದ ಪ್ರಯೋಜನವಿದೆ ನಿಜ.ಆದರೆ ಇದು ಉಜ್ವಲ ಸಂಸ್ಕೃತಿಯ ಮೇಲೆ ದುಷ್ಪರಿಣಾ ಮ ಬೀರುತ್ತಿದೆ. ಪುಸ್ತಕ ಓದುವ ಹವ್ಯಾಸ ಕ್ಷೀಣಿಸುತ್ತಿದೆ. ಸಾಮಾಜಿಕ ಮಾಧ್ಯಮ, ಮೊಬೈಲ್‌ಗಳಿಂದ ಕೌಟುಂಬಿಕ ಸಂಬಂಧಗಳು, ಅನ್ಯೋನತೆ ಮಾಯ ವಾಗುತ್ತಿವೆ. ಆದ್ದರಿಂದ ತಂತ್ರ ಜ್ಞಾನಗಳನ್ನು ಅಗತ್ಯಕ್ಕೆ ತಕ್ಕಂತೆ ಸದುಪಯೋಗ ಪಡಿಸಿಕೊಳ್ಳಬೇಕು.
ಅದರ ಗೀಳು ಅಂಟಿಸಿಕೊಳ್ಳಬಾರದು.ಪುಸ್ತಕ,ಪತ್ರಿಕೆ ಓದು,ವಾರ್ತಾ ವೀಕ್ಷಣೆ ಮೊದಲಾದವುಗಳಿಂದ ವರ್ತಮಾನದ ಅರಿವಿನ ಜತೆಗೆ ಸಾಮಾನ್ಯ ಜ್ಞಾನ ವೃದ್ಧಿಯು ಬೆಳೆಯುತ್ತದೆ.
ಕೇವಲ ಗ್ರೇಡ್, ಸ್ಥಾನಮಾನ, ಪ್ರಶಸ್ತಿ ಗಳಿಕೆಯಷ್ಟೇ ಸ್ಪರ್ಧೆಯ ಉದ್ದೇಶವಲ್ಲ. ಶ್ರದ್ಧೆ, ಶ್ರಮ, ದೃಢ ನಿರ್ಧಾರ, ಆತ್ಮಸ್ಥೈರ್ಯವಿದ್ದಲ್ಲಿ ಸ್ಪರ್ಧೆ ಗಳಲ್ಲಿ ವಿಜಯಗಳಿಸಲು ಸುಲಭ ಸಾಧ್ಯ. ಲಭಿಸುವ ಅವಕಾಶಗಳನ್ನು ಪೂರ್ಣ ವಾಗಿ ಬಳಸಿಕೊಂಡು ಯಶಸ್ಸು ಗಳಿಸಬೇಕು ಎಂದು ಹೇಳಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಯತೀಂದ್ರ ರೈ. ಅಧ್ಯಕ್ಷತೆ ವಹಿಸಿದ್ದರು.ಎಂಪಿಟಿಎ ಅಧ್ಯಕ್ಷೆ ಹರಿಣಾಕ್ಷಿ, ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನರಸಿಂಹ ಪೂಜಾರಿ,ಪ್ರಾಂಶುಪಾಲ ಗಂಗಾಧರ ಕೆ,ಪ್ರಧಾನ ಶಿಕ್ಷಕ ವಾಸುದೇವ ನಾಯಕ್, ಹಿರಿಯ ಶಿಕ್ಷಕಿ ನಾಗರತ್ನ ಶುಭಾಶಂಸನೆ ಗೈದರು.ಕಲೋತ್ಸವ ಸಮಿತಿ ಸಂಚಾಲಕ ಶಿಕ್ಷಕರಾದ ರಾಜೇಶ್ ಮಾಸ್ತರ್ ಸ್ವಾಗತಿಸಿ, ಗೋಪಾಲ ಮಾಸ್ತರ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.