“ನಮ್ಮ ಗುರುನಿಷ್ಠೆ ನಮ್ಮನ್ನು ಸದಾ ಕಾಪಾಡುತ್ತದೆ’
Team Udayavani, Apr 24, 2019, 6:25 AM IST
ಕಾಸರಗೋಡು: ಶ್ರೀ ರಾಮಚಂದ್ರಾಪುರ ಮಠ ಹೊಸನಗರ ಶ್ರೀಮಜ್ಜಗದ್ಗುರು ಶಂಕರಾ ಚಾರ್ಯ ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶ್ರಯದಲ್ಲಿರುವ ಮುಳ್ಳೇರಿಯ ಹವ್ಯಕ ಮಂಡಲದ ಮಾಸಿಕ ಸಭೆಯು ಮಡಿಕೇರಿಯಲ್ಲಿ ಕೊಡಗು ಹವ್ಯಕ ವಲಯ ಕಾರ್ಯದರ್ಶಿ ಡಾ|ರಾಜಾರಾಮ ಭಟ್ ಅವರ ನಿವಾಸದಲ್ಲಿ ಜರಗಿತು.
ದೀಪಜ್ವಲನ, ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಸಭೆ ಪ್ರಾರಂಭವಾಯಿತು.
ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆಯವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಗತಸಭೆಯ ವರದಿ ನೀಡಿದರು. ವಲಯ ಪದಾಧಿಕಾರಿಗಳು ವಲಯ ವರದಿಗಳನ್ನಿತ್ತರು. ವಿಭಾಗ ಪ್ರಧಾನರು ಆಯಾ ವಿಭಾಗಗಳ ವರದಿ ನೀಡಿ ಮಾಹಿತಿಗಳನ್ನಿತ್ತರು. ಸಭೆಯಲ್ಲಿ ಶ್ರೀಮಠದ ಮಾರ್ಗದರ್ಶನದಲ್ಲಿ ಜರಗಿದ ವಿವಿಧ ಸಮಾರಂಭಗಳ ಕುರಿತು ಅವಲೋಕನೆ ಮಾಡಲಾಯಿತು.
ಶ್ರೀ ಮಠದ ಸಕ್ರಿಯ ಕಾರ್ಯಕರ್ತೆ, ಮಹಿಳಾ ಸಬಲೀಕರಣದತ್ತ ವಿಶೇಷ ಕಾರ್ಯಚಟುವಟಿಕೆ, ಸೀತಾಮಾತೆಯ ಆದರ್ಶಗಳನ್ನು ಪಾಲಿಸುತ್ತಾ ಸಾಮಾಜಿಕವಾಗಿ ವಿಶೇಷ ಸಾಧನೆಗೈದ ಮಾತೆಗೆ ಶ್ರೀರಾಮಚಂದ್ರಾಪುರ ಮಠ ರಾಮೋತ್ಸವದ ಸಂದರ್ಭದಲ್ಲಿ ಶ್ರೀ ಸಂಸ್ಥಾನದವರಿಂದ ಪ್ರದಾನಿಸುವ ಶ್ರೀಮಾತಾ ಪ್ರಶಸ್ತಿ ಅನುಗ್ರಹ ಪಡೆದ ಮಹಾಮಂಡ ಲಾಧ್ಯಕ್ಷೆ ಈಶ್ವರಿ ಬೇರ್ಕಡವು ಅವರನ್ನು ಶಾಲು ಹೊದೆಸಿ ಫಲವನ್ನಿತ್ತು ಗೌರವಿಸಲಾಯಿತು.
ಗುರುಗಳ ಆದೇಶವನ್ನನುಸರಿಸಿ ಅದರಂತೆ ನಡೆದರೆ ಉನ್ನತಿ ಪ್ರಾಪ್ತಿಯಾಗುವುದೆಂಬುದಕ್ಕೆ ನಾನೇ ಉದಾಹರಣೆ. ನಮ್ಮ ಗುರುನಿಷ್ಠೆ ನಮ್ಮನ್ನು ಸದಾ ಕಾಪಾಡುತ್ತೆ. ಆದ್ದರಿಂದ ಪೂರ್ಣ ಶರಣಾಗತಿಯೊಂದಿಗೆ ಗುರುಸೇವೆ ಮಾಡಿದಲ್ಲಿ ಗುರುಗಳು ನಮ್ಮನ್ನು ಗುರಿ ತಲಪಿಸುತ್ತಾರೆ.
ಮುಳ್ಳೇರಿಯಾ ಮಂಡಲ ನನ್ನ ಮನೆ. ನನ್ನ ಮನೆ ಮಂದಿಯ ಕಾರ್ಯಕರ್ತರ ಸರ್ವ ಸಹಕಾರದಿಂದ ನನಗೆ ಈ ಪ್ರಶಸ್ತಿ ಬಂದಿದೆ. ಇದು ನಮಗೆಲ್ಲರಿಗೂ ಸಂದ ಪ್ರಶಸ್ತಿ ಎಂಬುದಾಗಿ ಸಮ್ಮಾನಿತರಾದ ಈಶ್ವರಿ ಬೇರ್ಕಡವು ಮಾರ್ಮಿಕ ನುಡಿಗಳನ್ನಾಡಿದರು.
ಪಿಯುಸಿ ವಾಣಿಜ್ಯ ವಿಭಾಗಲ್ಲಿ ಶೇ.96.4 ಅಂಕವನ್ನು ಗಳಿಸಿ ವಿಶೇಷ ಸಾಧನೆ ಮಾಡಿದ ವಿರಾಜಪೇಟೆ ಗುರಿಕ್ಕಾರರಾದ ಕೆ.ಶ್ಯಾಮ ಮತ್ತು ಉಷಾ ದಂಪತಿ ಪುತ್ರಿ ಕೆ.ಪಾವನಿ ಅವರನ್ನು ಶಾಲುಹೊದೆಸಿ ಫಲಪುಷ್ಪ ನೀಡಿ ಅಭಿನಂದಿಸಲಾಯಿತು.
ಮಂಡಲ ಗುರಿಕ್ಕಾರ ಸತ್ಯನಾರಾಯಣ ಭಟ್ ಮೊಗ್ರ ಅವರು ಮಹಾ ಪಾದುಕಾ ಪೂಜೆಯ ಯಶಸ್ವಿಗಾಗಿ ಕಾರ್ಯಕರ್ತರನ್ನು ಅಭಿನಂದಿಸಿ ಮುಂದೆಯೂ ಗುರುಸೇವೆಯಲ್ಲಿ ಮುಂಚೂಣಿಯಲ್ಲಿದ್ದು ಕಾರ್ಯ ನಿರತರಾಗೋಣ ಎಂದರು.
ಮಂಡಲಾಧ್ಯಕ್ಷರಾದ ಪ್ರೊ|ಶ್ರೀಕೃಷ್ಣ ಭಟ್ ಅವರು ಅಧ್ಯಕ್ಷೀಯ ಮಾತುಗಳನ್ನಾಡಿದರು. ಸಾಮೂಹಿಕ ರಾಮಜಪ, ಶಾಂತಿಮಂತ್ರ, ಧ್ವಜಾವರೋಹಣ ಶಂಖನಾದವಾಗಿ ಸಭೆ ಮುಕ್ತಾಯವಾಯಿತು.
ಭದ್ರಅಡಿಪಾಯ
ಸಭೆಯಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿ ಕೀರ್ತಿಗೆ ಭಾಜನರಾದ ಕಾಸರಗೋಡಿನ ಪೆರಡಾಲ ಕಡಪ್ಪು ಶ್ರೀಕೃಷ್ಣ ಶರ್ಮ ಅವರನ್ನು ಶಾಲುಹೊದೆಸಿ ಫಲಪುಷ್ಪ ನೀಡಿ ಅಭಿನಂದಿಸಲಾಯಿತು. ಅಭಿನಂದನೆಗೆ ಧನ್ಯತೆಯಿಂದ ಉತ್ತರಿಸುತ್ತಾ ಶ್ರೀಕೃಷ್ಣ ಶರ್ಮ ಯಾವುದೇ ಕಟ್ಟಡ ನಿರ್ಮಾಣಕ್ಕೆ ಭದ್ರವಾದ ಅಡಿಪಾಯ ಬೇಕು.
ನನ್ನ ಜೀವನದಲ್ಲಿ ಶ್ರೀಭಾರತೀ ವಿದ್ಯಾಪೀಠದ ಮೂಲಕ ನನಗೆ ಈ ಭದ್ರತೆಯು ಲಭಿಸಿದೆ. ಶ್ರೀಸಂಸ್ಥಾನದ ಶ್ರೀರಕ್ಷೆ ನನಗೊದಗಿ ಬಂದುದರಿಂದ ಈ ಸಾಧನೆ ಸಾಧ್ಯವಾಯಿತು. ಮುಂದೆಯೂ ಶ್ರೀಚರಣ ಸೇವಕನಾಗಿರುತೇ¤ನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.