ಕೆಸರಿನಿಂದ ನಮ್ಮ ಅನ್ನ; ಕೈ ಕೆಸರಾದರೆ ಬಾಯಿ ಮೊಸರು
Team Udayavani, Jul 17, 2017, 2:40 AM IST
ಬದಿಯಡ್ಕ: ಕೆಸರೇ ನಮ್ಮ ಅನ್ನ-ಕೈ ಕೆಸರಾದರೆ ಬಾಯಿ ಮೊಸರು ಎಂಬ ಕುಟುಂಬಶ್ರೀಯ ಭತ್ತ ಬೆಳೆ, ಜಲಸಂರಕ್ಷಣಾ ಯಜ್ಞ-2017ರ ಭಾಗವಾಗಿ ಕುಂಬಾxಜೆ ಗ್ರಾಮ ಪಂಚಾಯತ್ ಮತ್ತು ಕುಟುಂಬ ಶ್ರೀ ಸಿ.ಡಿ.ಎಸ್‌ನ ಸಂಯುಕ್ತಾಶ್ರಯದಲ್ಲಿ ಮಳೆ ಬೆಳೆ ಮಹೋತ್ಸವವು ಈ ತಿಂಗಳ 14ರಂದು ಬೆಳಿಂಜದ ಭತ್ತದ ಬಯಲಿನಲ್ಲಿ ನಡೆಯಿತು.
ಗ್ರಾಮದಲ್ಲಿ ಗ್ರಾಮೀಣ ಜನತೆಗೆ ಗ್ರಾಮೀಣ ಕ್ರೀಡೆಗಳ ಮೂಲಕ ಹೊಸತೊಂದು ಅನುಭವವನ್ನು ತಂದಿತ್ತ ಗ್ರಾಮೀಣ ಉತ್ಸವವು ಬೆಳಿಂಜದಲ್ಲಿ ನಡೆಯಿತು. ಜಾತಿ, ಮತ, ಭೇದಗಳನ್ನು ತೊರೆದು ಆಟ ಊಟಗಳಲ್ಲಿ ಜತೆಯಾಗಿ ಸೌಹಾರ್ಧತೆಯೊಂದಿಗೆ ನಡೆಸಿದ ಅತ್ಯುತ್ತಮ ಕಾರ್ಯಕ್ರಮ ಮಳೆ-ಬೆಳೆ ಮಹೋತ್ಸವ. ಮಳೆಯನ್ನೂ ಲೆಕ್ಕಿಸದೆ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರೂ ಉತ್ಸಾಹದಿಂದ ಭಾಗವಹಿಸಿದ ಈ ಉತ್ಸವದಲ್ಲಿ ಕೇಳಿಬಂದ ಇಂಪಾದ ಶೋಭಾನೆಯ ಹಾಡುಗಳನ್ನು ಕೇಳುತ್ತ ಶಾಲಾ ಮಕ್ಕಳೂ ಗದ್ದೆಗಿಳಿದು ಕೆಸರಲ್ಲಿ ಆಟವಾಡಿ, ನಾಟಿಮಾಡಿ ಕೃಷಿಯಲ್ಲಿರುವ ಆನಂದವನ್ನು ಅನುಭವಿಸಿದರು. ಜನರನ್ನು ಕೃಷಿಯತ್ತ ಸೆಳೆಯುವ ಸದುದ್ದೇಶದಿಂದ ಸರಕಾರ ಜಾರಿಗೆ ತರುವ ಹಲವಾರು ಯೋಜನೆಗಳನ್ನು ಇಂತಹ ಕಾರ್ಯಕ್ರಮಗಳ ಮೂಲಕ ಜನರಿಗೆ ಪರಿಚಯಿಸಿ ಕೃಷಿಯತ್ತ ಆಕರ್ಷಿಸುವ ಪ್ರಯತ್ನ ಶ್ಲಾಘನೀಯ. ಅದರಲ್ಲೂ ಇಲ್ಲಿ ಮಹಿಳೆಯರೇ ಆಸಕ್ತಿಯಿಂದ ಮುಂದುವರಿದಿರುವುದು ಶುಭ ಸೂಚನೆ. ಮಕ್ಕಳಿಗೆ ಕೃಷಿಯ ಬಗ್ಗೆ ವಿವಿಧ ಮಾಹಿತಿಗಳನ್ನು ನೀಡುವುದರೊಂದಿಗೆ ಕೆಸರು ಗದ್ದೆ ಆಟವನ್ನು ಪರಿಚಯಿಸಿ ಅಪರೂಪದ ಗಮನೀಯ ಕಾರ್ಯಕ್ರಮ. ಜತೆಗೆ ಜಲಸಂರಕ್ಷಣಾ ಯಜ್ಞವನ್ನೂ ಕೈಗೊಂಡಿದ್ದು ಎದುರಾಗಬಹುದಾದ ನೀರಿನ ಸಮಸ್ಯೆಗಳನ್ನು ತಡೆಯುವ ಕೆಲಸ ಸಮಾಜ ಪರ ಕಾಳಜಿಗೆ ಹಿಡಿದ ಕೈಗನ್ನಡಿ. ಇಂದು ತಾಂತ್ರಿಕ ಬೆಳವಣಿಗೆಗಳು ನಮ್ಮ ಕೆಲಸವನ್ನು ಸುಲಭ ಹಾಗೂ ವೇಗವಾಗಿ ಮಾಡಲು ಸಹಾಯಕವಾಗುತ್ತಿವೆಯಾದರೂ ಹಿಂದಿನ ಕೃಷಿಯ ನಿಜವಾದ ಆನಂದವನ್ನು ಅನುಭವಿಸಬೇಕಾದರೆ ಗದ್ದೆಗಿಳಿದು ಕೆಸರ ತುಳಿದು ನಾಟಿ ಮಾಡಬೇಕು. ಆದುದರಿಂದ ಗ್ರಾಮೀಣ ಪ್ರದೇಶದಲ್ಲಿ ನಡೆದ ಈ ಕಾರ್ಯ ಎಲ್ಲರಿಗೂ ಮಾದರಿ ಹಾಗೂ ಪ್ರಶಂಸನೀಯ.
ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚೆಗೆ ಕಣ್ಮರೆಯಾಗುತ್ತಿರುವ ಕ್ರೀಡೆಗಳು, ಆಚರಣೆ ಗಳತ್ತ ಜನರ ಆಸಕ್ತಿ ಹೆಚ್ಚುತ್ತಿರುವುದು ಒಂದು ಉತ್ತಮ ಬೆಳವಣಿಗೆಯಾಗಿ ಕಂಡುಬರುತ್ತಿದೆ.
ಕುಂಬಾxಜೆ ಗ್ರಾ.ಪಂ.ಅಧ್ಯಕ್ಷರಾದ ಫಾತಿಮಾ ಸುಹರಾ ಅಧ್ಯಕ್ಷತೆ ವಹಿಸಿದ್ದು ಕಾರಡ್ಕ ಬ್ಲೋ. ಪಂ. ಅಧ್ಯಕ್ಷೆ ಓಮನಾ ರಾಮಚಂದ್ರನ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬದಿಯಡ್ಕ ಠಾಣೆಯ ಎಸ್.ಐ. ಅಂಬಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಕೃಷಿಯಲ್ಲಿ ತೋರಿದ ಸಾಧನೆಗಾಗಿ ಹಿರಿಯ ಕೃಷಿಕರಾದ ಉಮಾವತಿ ಬೆಳಿಂಜೆ ಹಾಗೂ ಚಿಕ್ಕ ಪ್ರಾಯದಲ್ಲೇ ಕೃಷಿಯಲ್ಲಿ ತೊಡಗಿಸಿಕೊಂಡ ಬಾಲಕ ಎ.ಎಲ್.ಪಿ.ಶಾಲೆ ಬೆಳಿಂಜದ ಯಶಸ್Õ ಇವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ತ್ರೋಬಾಲ್ ಆಟಗಾರ್ತಿ ಕು.ದೀಪಿಕಾ ಇವರನ್ನು ಸಮ್ಮಾನಿಸಲಾಯಿತು.
ಆನಂದ ಕೆ ಮವ್ವಾರು, ಉಪಾಧ್ಯಕ್ಷರು ಕುಂಬಾxಜೆ ಗ್ರಾಮ ಪಂಚಾಯತು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಡ್ವ. ಮೊಹಮ್ಮದ್ ಕಾಸಿಂ, ಮಿಸಿರಿಯಾಬಿ, ಪಂಚಾಯತ್ ಸದಸ್ಯರಾದ ಶೈಲಜಾ, ಬಿ.ಟಿ. ಅಬ್ದುಲ್ಲ, ರವೀಂದ್ರ ರೈ, ಶಾಂತಾ ಭಟ್, ಶಶಿಧರ, ಕೆ. ನಾರಾಯಣ ಕುಟ್ಟಿ, ಕೆ. ಪ್ರಭಾಕರನ್, ಸುಂದರ ಮವ್ವಾರು, ಮಹಾದೇವ, ರಮ್ಯಾ ಜಿಲ್ಲಾ ಮಿಶನ್ ಕಾಸರಗೋಡು, ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಬೇಬಿ.ಸಿ.ವಿ. ಸಿ.ಡಿ.ಎಸ್. ಚಯರ್ ಪರ್ಸನ್ ಕುಂಬಾxಜೆ ಗ್ರಾ. ಪಂ.ಸ್ವಾಗತಿಸಿ ಚಂದ್ರಶೇಖರ ಕುರುಪ್ಪ್ ಕಾರ್ಯಕ್ರಮ ನಿರೂಪಿಸಿದರು. ಕೇಶವ ಬೆಳ್ಳಿಗೆ ಸಹಕರಿಸಿದರು.
ಕೆಸರು ಗದ್ದೆ ಓಟ, ನೇಜಿ ನೆಡುವುದು, ಪಾಡªನ, ಬೆಲೂನ್ ಬ್ರೇಕಿಂಗ್, ಹಗ್ಗ ಜಗ್ಗಾಟ ಲಿಂಬೆ ಚಮಚ ಮುಂತಾದ ಕೆಸರುಗದ್ದೆ ಸ್ಪರ್ಧೆಗಳನ್ನು ನಡೆಸಲಾಯಿತು. ಪೂಮಾಣಿ-ಕಿನ್ನಿಮಾಣಿ ಯುವ ಕೇಂದ್ರ ಬೆಳಿಂಜ ಹಾಗೂ ಓಂಕಾರ್ ಕ್ಲಬ್ ಆಲಿಂಜ ಹಾಗೂ ಬೆಳಿಂಜ ಎ.ಎಲ್.ಪಿ ಶಾಲೆಯ ಅಧ್ಯಾಪಕ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಪೂರ್ಣ ಸಹಕಾರವನ್ನಿತ್ತರು.
ಕೃಷಿಯೆಡೆಗೆ ಆಕರ್ಷಿಸುವ ಗುರಿ
ಜನರನ್ನು ಕೃಷಿಯೆಡೆಗೆ ಆಕರ್ಷಿಸುವುದು ಅಂತೆಯೇ ಹಳೆಯ ಆಟಗಳ ನೆನಪುಗಳನ್ನು ಮರುಕಳಿಸುವಂತೆ ಮಾಡುವುದು ಹಾಗೂ ಮಕ್ಕಳಿಗೆ ಕೆಸರುಗದ್ದೆ ಆಟಗಳನ್ನು ಪರಿಚಯಿಸುವುದೇ ಈ ಕಾರ್ಯಕ್ರಮದ ಮೊದಲ ಉದ್ದೇಶ. ಜನರು ಕೃಷಿಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ನಿತ್ಯೋಪಯೋಗಿ ವಸ್ತುಗಳ ಬೆಲೆಯೇರಿಕೆಯಿಂದ ಮುಕ್ತಿ ಪಡೆಯಲು ತಕ್ಕಮಟ್ಟಿಗೆ ಸಾಧ್ಯವಿದೆ. ಅಂತೆಯೇ ಮನೆಯಲ್ಲೇ ಜೈವಿಕವಾಗಿ ಕೃಷಿ ಮಾಡಿ ವಿಷಮುಕ್ತ ಆಹಾರ ಪಾದಾರ್ಥಗಳನ್ನು ಸೇವಿಸಬಹುದು ಎಂಬ ಸಂದೇಶವನ್ನೂ ಈ ಮೂಲಕ ತಿಳಿಯ ಪಡಿಸುವ ಪ್ರಯತ್ನ ನಮ್ಮದು.
ಬೇಬಿ.ಸಿ.ವಿ.
ಸಿ.ಡಿ.ಎಸ್. ಚಯರ್ ಪರ್ಸನ್
ಕುಂಬಾxಜೆ ಗ್ರಾಮ ಪಂಚಾಯತ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.