38 ಸಾವಿರಕ್ಕೂ ಅಧಿಕ ಮಳೆ ನೀರು ಇಂಗುಗುಂಡಿ ನಿರ್ಮಾಣ

Team Udayavani, Jul 5, 2019, 5:16 AM IST

ingu-gundi

ಕಾಸರಗೋಡು: ಮಳೆಗಾಲದಲ್ಲಿ ಜಲಸಂರಕ್ಷಣೆ ನಡೆಸುವ ಮೂಲಕ ಭೂಗರ್ಭ ಜಲ ಮಟ್ಟ ಹೆಚ್ಚಿಸುವ ಮತ್ತು ಕುಡಿಯುವ ನೀರಿನ ಕ್ಷಾಮ ಪರಿಹಾರ ನಡೆಸುವ ನಿಟ್ಟಿನಲ್ಲಿ 38 ಸಾವಿರಕ್ಕೂ ಅಧಿಕ ಮಳೆನೀರು ಇಂಗು ಗುಂಡಿಗಳನ್ನು ನಿರ್ಮಿಸುವ ಮೂಲಕ ಮಡಿಕೈ ಗ್ರಾಮ ಪಂಚಾಯತ್‌ ಗಮನ ಸೆಳೆದಿದೆ.

ಅತ್ಯಂತ ಕಡಿಮೆ ವೆಚ್ಚದಲ್ಲಿ ಮಳೆನೀರನ್ನು ಭೂಮಿ ಯಡಿಗೆ ತಲಪಿಸುವ ರೀತಿಯಲ್ಲಿ ಈ ಇಂಗು ಗುಂಡಿಗಳು ಪರಿಪೂರ್ಣವಾಗಿವೆ. ಮಡಿಕೈ ಗ್ರಾಮ ಪಂಚಾಯತ್‌ನ 15 ವಾರ್ಡ್‌ಗಳಲ್ಲಿ 38 ಸಾವಿರಕ್ಕೂ ಅಧಿಕ ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ.

ಒಂದು ವಾರ್ಡ್‌ನಲ್ಲಿ 500ಕ್ಕೂ ಅಧಿಕ ಮಳೆ ನೀರು ಇಂಗುಗುಂಡಿಗಳನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪ್ರಕಾರ ನಿರ್ಮಾಣ ನಡೆಸಲಾಗಿದೆ.

ಒಂದೂವರೆ ಮೀಟರ್‌ ಉದ್ದ, 60 ಸೆ.ಮೀ. ಅಗಲ, 60 ಸೆ.ಮೀ. ಆಳದಲ್ಲಿ ಗುಳಿಗಳು ಸಿದ್ಧವಾಗಿವೆ. ಮಳೆನೀರು ಗುಂಡಿಗಳಲ್ಲದೆ ತೆಂಗಿನ ನಾರಿನ ಗುಂಡಿಗಳನ್ನೂ ಮಡಿಕೈ ಗ್ರಾಮ ಪಂಚಾಯತ್‌ನ ನೇತೃತ್ವದಲ್ಲಿ ಸಿದ್ಧಪಡಿಸಲಾಗಿದೆ. ತೆಂಗಿನ ಮರದ ಬುಡದಲ್ಲಿ ಸುತ್ತಲೂ ಗುಳಿಗಳನ್ನು ನಿರ್ಮಿಸಿ, ಅದರಲ್ಲಿ ತೆಂಗಿನ ನಾರು ತುಂಬಿಸಿ, ಮಳೆಯ ನೀರು ಮಣ್ಣಲ್ಲಿ ಇಂಗುವಂತೆ ಮಾಡುವುದು ಇಲ್ಲಿನ ವಿಧಾನ.

ಇವುಗಳ ಜತೆಗೆ ನೂತನವಾಗಿ 6 ಕೆರೆಗಳು, 6 ಬಾವಿಗಳನ್ನು ನಿರ್ಮಿಸಲಾಗಿದೆ. 29 ತೋಡುಗಳ ನವೀಕರಣ ನಡೆಸಲಾಗಿದೆ. ಪ್ರತಿ ವಾರ್ಡ್‌ನ 60ಕ್ಕೂ ಅಧಿಕ ಮನೆಗಳಲ್ಲಿ ಬಾವಿಗಳನ್ನು ರೀಚಾರ್ಜ್‌ ನಡೆಸಲಾಗಿದೆ. ಜೊತೆಗೆ ತೀಯರ್‌ ಸೇತುವೆಯ ಪುನರ್‌ ನಿರ್ಮಾಣ, ತಡೆಗೋಡೆ ನಿರ್ಮಾಣ ನಡೆಸಲಾಗಿದೆ. ಪಂಚಾಯತ್‌ ಅಲ್ಲದೆ ಜಲಪ್ರಾಧಿಕಾರ, ಕಿರು ನೀರಾವರಿ ಇಲಾಖೆ, ಉದ್ಯೋಗ ಖಾತರಿ ಯೋಜನೆ, ಕುಟುಂಬಶ್ರೀಗಳ ಸಹಕಾರದೊಂದಿಗೆ ವಿವಿಧ ಯೋಜನೆಗಳನ್ನು ಇಲ್ಲಿ ಜಾರಿಗೊಳಿಸಲಾಗುತ್ತಿದೆ.

ಜಲಸಂರಕ್ಷಣೆ ಸಂಬಂಧ ಪ್ರತಿ ಗ್ರಾಮ ಪಂಚಾಯತ್‌ ಮಟ್ಟದಲ್ಲೂ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಮಳೆಗಾಲವಾಗಿದ್ದರೂ, ರಾಜ್ಯದ ಉತ್ತರ ಭಾಗದ ಜಿಲ್ಲೆಗಳಲ್ಲಿ ಮಳೆ ಬಹಳ ಕಡಿಮೆಯಾಗಿರುವ ಮತ್ತು ಬಿರುಸಿನ ಬಿಸಿಲು ಇರುವ ಹಿನ್ನೆಲೆಯಲ್ಲಿ ತೀವ್ರತರ ಕುಡಿಯುವ ನೀರಿನ ಬರ ತಲೆದೋರಿದೆ. ಇವುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಗಳು ಫಲದಾಯಕವಾಗಿವೆ.

ಟಾಪ್ ನ್ಯೂಸ್

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

1-fish

Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

kejriwal-2

Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ

1-maika

‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

1-neemo

ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ

1-fish

Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

kejriwal-2

Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.