ಬತ್ತದ ಕೆರೆ: ನಾಯ್ಕಪು ಸಮೀಪದ ಮುಜುಂಗಾವಿನ ತೀರ್ಥ ಕೆರೆ

ನಿಸರ್ಗದ ಬೆರಗಿಗೆ ಪೌರಾಣಿಕ ಹಿನ್ನೆಲೆ

Team Udayavani, May 11, 2019, 6:00 AM IST

09-VNR-PIC02

ಮುಜುಂಗಾವು ಕ್ಷೇತ್ರದ ಜೊಳದಲ್ಲಿ ಸುಡು ಬೇಸಗೆಯಲ್ಲೂ ಕೊಳದ ತುಂಬಾ ನೀರು ತುಂಬಿದ್ದು ಬತ್ತದ ಕೊಳವಾಗಿ ಕಂಗೊಳಿಸುತ್ತಿದೆ.

ವಿದ್ಯಾನಗರ: ಅಭಿವೃದ್ಧಿಯ ಹೆಸರಲಲಿ ಆಗುವ ದೌರ್ಜನ್ಯದೆದುರು ಪ್ರಕೃತಿಯು ವರ್ಷದಿಂದ ವರ್ಷಕ್ಕೆ ಬಿಸಿಯೇರಿ ಜಲಾಶಯಗಳು ಬರಿದಾಗಿ ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗುತ್ತಿದೆ. ಸುಡು ಬಿಸಿಲಿನಿಂದ ತತ್ತರಿಸಿರುವ ಜನರು ಒಂದಿಷ್ಟು ನೀರಿಗಾಗಿ ಹುಡುಕಾಡುತ್ತಾರೆ. ಕುಡಿದಷ್ಟು ತೀರದ ದಾಹ, ಕಣ್ಣು ಬಿಡಲಾಗದಷ್ಟು ಬಿಸಿ ಭೂಮಿಯನ್ನು ಆವರಿಸಿಕೊಂಡು ಮಳೆಮೋಡ ಬಾನಲ್ಲಿ ಮೂಡುವುದನ್ನೇ ಎದುರು ನೋಡುವಂತಾಗಿದೆ.

ಒಂದೆರಡು ಮಳೆ ಬಂದರೆ ಸಾಕು ಎನ್ನುವಂತ ಸ್ಥಿತಿ ಎದುರಾಗಿದೆ. ನದಿ-ಸರೋವರ, ಹಳ್ಳ-ಕೊಳ ಬತ್ತಿ ಹೋಗಿ ಪ್ರಾಣಿ ಪಕ್ಷಿಗಳಿಗಳೂ ಕಂಗಾಲಾಗಿವೆ. ಕಾಸರಗೋಡು ಜಿಲ್ಲೆಯ ತೋಡು, ಕೆರೆ ನದಿಗಳಷ್ಟೇ ಅಲ್ಲದೆ ಬಾವಿ, ಕೊಳವೆ ಬಾವಿಗಳೂ ಬತ್ತಿಹೋಗಿ ಜನರು ಹಲವೆಡೆಗಳಲ್ಲಿ ಕಷ್ಟ ಪಡುತ್ತಿದ್ದಾರೆ. ಬೇಸಿಗೆಯ ನಿಜವಾದ ಬಿಸಿ ಪ್ರತಿಯೊಬ್ಬರನ್ನೂ ತಟ್ಟಿದೆ. ಅಂತಹುದರಲ್ಲಿ ಜಿಲ್ಲೆಯ ಹಲವೆಡೆಗಳಲ್ಲಿ ಬತ್ತದ ಕೊಳಗಳು ಸೂರ್ಯನ ಬಿಸಿಲಿಗೆ ಮೈಯೊಡ್ಡಿ ಪಳಪಳ ಹೊಳೆಯುತ್ತಾ, ಬೀಸುವ ಬಿಸಿಗಾಳಿಗೆ ಪುಟ್ಟ ಪುಟ್ಟ ತೆರೆಗಳು ಸೃಷ್ಟಿಯಾಗಿ ನೀರಿನಂಶ ಗಾಳಿಯಲಿ ಬೆರೆತು ಸುತ್ತೆಲ್ಲ ತಂಪಾಗಿಸುವ ಅಪರೂಪದ ತಾಣಗಳೂ ಇವೆ ಎನ್ನುವುದು ಸಮಾಧಾನದ ವಿಚಾರ.ಕುಂಬಳೆ ಸಮೀಪದ ನಾಯ್ಕಪುವಿನ ಬಳಿ ಇರುವ ಮುಜುಂಗಾವು ಶ್ರೀ ಪಾರ್ಥಸಾರಥಿ ಕ್ಷೇತ್ರದ ತೀರ್ಥಕೊಳ ಇವುಗಳಲ್ಲೊಂದು. ವರ್ಷ ಪೂರ್ತಿ ಮೈದುಂಬಿ ನಳನಳಿಸುವ ಈ ಕೊಳಕ್ಕೊಂದು ಪೌರಾಣಿಕ ಹಿನ್ನೆಲೆಯಿದೆ. ನಿಸರ್ಗದ ಬೆರಗಿಗೆ ಭಯ ಭಕ್ತಿಯು ಜತೆಯಾಗಿ ಪವಿತ್ರ ಕೆರೆ ಎಂದು ಹೆಸರುಗಳಿಸಿದೆ.

ನೈಸರ್ಗಿಕ ನೀರಿನ ಆಗರವಾದ ಮುಜುಂಗಾವು ಕ್ಷೇತ್ರದ ಜೊಳದಲ್ಲಿ ಸುಡು ಬೇಸಗೆಯಲ್ಲೂ ಕೊಳದ ತುಂಬಾ ನೀರು ತುಂಬಿದ್ದು ಬತ್ತದ ಕೊಳವಾಗಿ ಕಂಗೊಳಿಸುತ್ತಿದೆ. ನೋಟಕ್ಕೆ ಹಸಿರು ಬಣ್ಣದಿಂದ ತೋರಿದರೂ ಸ್ವತ್ಛವಾಗಿರುವ ಈ ನೀರನ್ನು ದೇವಸ್ಥಾನದ ಅಗತ್ಯಕ್ಕೆ ಬಳಸಲಾಗುತ್ತದೆ.

ಕಾವೇರಿ ತೀರ್ಥ
ವಿಶಾಲವಾದ ಕೊಳದಲ್ಲಿ ಭಕ್ತರು ಪವಿತ್ರ ತೀರ್ಥ ಸ್ನಾನ ಮಾಡುತ್ತಾರೆ. ಪ್ರತಿವರ್ಷ ಒಕ್ಟೋಬರ್‌ ತಿಂಗಳ (ತುಲಾ) ಸಂಕ್ರಮಣದಂದು ಇಲ್ಲಿ ತೀರ್ಥ ಸ್ನಾನ ನಡೆಯುತ್ತಿದ್ದು ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚುಭಕ್ತರು ಆ ದಿನ ಮನೆಯಲ್ಲಿ ಶುಚಿಭೂìತರಾಗಿ ಬಂದು ಕೊಳದಲ್ಲಿ ಪವಿತ್ರ ತೀರ್ಥ ಸ್ನಾನ ಮಾಡಿ ಹುರುಳಿ ಮತ್ತು ಬೆಳ್ತಿಗೆ ಅಕ್ಕಿಯ ಮಿಶ್ರಣವನ್ನು ಕೊಳದ ಸುತ್ತ ಹಾಕಿ ದೇವರ ದರ್ಶನ ಪಡೆಯುತ್ತಾರೆ. ಹೀಗೆ ಮಾಡುವುದರಿಂದ ಚರ್ಮ ರೋಗ ಸೇರಿದಂತೆ ಯಾವುದೇ ರೀತಿಯ ಖಾಯಿಲೆಗಳು ವಾಸಿಯಾಗುತ್ತವೆ ಎನ್ನುವುದು ವಿಶ್ವಾಸ. ಮಾತ್ರ ವಲ್ಲದೆ ಕಂಕಣ ಭಾಗ್ಯ ಕೂಡಿಬರಲು ಇಲ್ಲಿ ಸ್ನಾನ ಮಾಡಿ ಕೃಷ್ಣನ ಸನ್ನಿ ಯಲ್ಲಿ ಪ್ರಾರ್ಥನೆ ಸಲ್ಲಿಸುವುದು ರೂಢಿ. ಪ್ರತಿಸಂಕ್ರಮಣದಂದೂ ತೀರ್ಥ ಸ್ನಾನ ಮಾಡಿ ದೇವರ ದರ್ಶನ ಪಡೆಯುವ ವ್ಯವಸ್ಥೆಯೂ ಇಲ್ಲಿದೆ.

ಜೀವಜಲ
ಕೊಳದಲ್ಲಿ ಹಲವು ಪ್ರಬೇಧಗಳ ಮೀನುಗಳಿದ್ದು ಬೇಸಗೆಯ ಸಮಯ ಪ್ರಾಣಿ ಪಕ್ಷಿಗಳು ಈ ಕೊಳವನ್ನು ನೀರಿಗಾಗಿ ಆಶ್ರಯಿಸುತ್ತವೆ.

ಆದುದರಿಂದಲೇ ಈಗ ಈ ಕೊಳವನ್ನು ಸಂದರ್ಶಿಸಿದರೆ ಹಲವು ವೈವಿಧ್ಯಮಯ ಪಕ್ಷಿಗಳನ್ನು ಕಾಣಬಹುದು, ಅವುಗಳ ದನಿಯನ್ನು ಆಳಿಸಬಹುದು.

ಸಾಕಷ್ಟು ಸಂಖ್ಯೆಯಲ್ಲಿ ಗೋವುಗಳು ದಾಹ ನೀಗಿಸಲು, ದನಿವಾರಿಸಲು ಈ ಪ್ರದೇಶಕ್ಕೆ ಬರುತ್ತವೆ. ಕೊಳದ ಪಕ್ಕ ಗಿಡ ಮರಗಳೂ ಬೆಳೆದುನಿಂತು ಇಲ್ಲಿನ ಸೌಂಧರ್ಯವನ್ನು ಹೆಚ್ಚಿಸಿದೆ.

ಸ್ವಚ್ಛ ಸುಂದರ
ಸ್ವಚ್ಛತೆಗೆ ನೀಡುವ ಆದ್ಯತೆಯಿಂದಾಗಿ ಈ ಕೊಳ ಇನ್ನೂ ಆಕರ್ಷಕವಾಗಿದೆ ಎನ್ನಬಹುದು. ಕೆರೆಯು ಸುತ್ತ ಕಲ್ಲು ಹಾಸಲಾಗಿದೆ.ಈ ಜಲ ಸಂಪತ್ತಿನಿಂದಾಗಿ ಸುತ್ತಮುತ್ತಲಿನ ಬಾವಿ ಮುಂತಾದ ಜಲಮೂಲಗಳಲ್ಲಿ ಕೊನೆಯ ವರೆಗೂ ನೀರಿನ ಸೆಳೆ ಧಾರಾಳವಾಗಿರುತ್ತದೆ. ಪವಿತ್ರ ಕೊಳ-ಕೆರೆಗಳ ಬಗ್ಗೆ ಜನರಿಗೆ ಇನ್ನು ಭಯ-ಭಕ್ತಿ ವಿಶ್ವಾಸ ಜೀವಂತವಾಗಿರುವುದೇ ಇಂತಹ ಜಲಮೂಲಗಳು ತುಂಬಿರಲು ಕಾರಣ. ಇಲ್ಲಾವದರೆ ಮನುಷ್ಯನ ಸ್ವಾರ್ಥಕ್ಕೆ ಬಲಿಯಾಗಿ ಬತ್ತಿಹೋಗುವ ದಿನ ದೂರವಿರಲಿಲ್ಲ.

-ವಿದ್ಯಾಗಣೇಶ್‌ ಅಣಂಗೂರು

ಟಾಪ್ ನ್ಯೂಸ್

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.