ಕಾಸರಗೋಡು ಪಳ್ಳತ್ತಡ್ಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ದೈವಗಳ ನೃತ್ಯೋತ್ಸವ
Team Udayavani, Apr 16, 2019, 5:39 PM IST
ಬದಿಯಡ್ಕ : ಪಳ್ಳತ್ತಡ್ಕ ಕರಿಪಾಡಗಂ ತರವಾಡು ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ದೈವಗಳ ನೃತ್ಯೋತ್ಸ ವವು ಎ.15ರಂದು ಪ್ರಾರಂಭಗೊಂಡಿದ್ದು ಎ.19ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ನೃತ್ಯೋತ್ಸ ವದಂಗವಾಗಿ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯು ಪಳ್ಳತ್ತಡ್ಕ ಶ್ರೀ ವಯನಾಟು ಕುಲವನ್ ವಿಷ್ಣುಮೂರ್ತಿ ಕ್ಷೇತ್ರದಿಂದ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಮುಂಭಾಗದಲ್ಲಿ ಸಾಗಿ ತರವಾಡಿಗೆ ತಲುಪಿತು. ಆ ಬಳಿಕ ಉಗ್ರಾಣ ಮುಹೂರ್ತ ನೆರವೇರಿಸಲಾಯಿತು. ಸಾಯಂಕಾಲ 5 ಕ್ಕೆ ತಂತ್ರಿಗಳಿಗೆ ಸ್ವಾಗತ, ರಾತ್ರಿ 7 ರಿಂದ ವೈದಿಕ ಕಾರ್ಯಕ್ರಮಗಳು ಹಾಗೂ 9 ರಿಂದ ಅನ್ನ ಸಂತರ್ಪಣೆಯು ನಡೆಯಿತು. ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದ ಅಂಗವಾಗಿ ಇಂದು (ಎ. 17 ರಂದು) ಬೆಳಗ್ಗೆ 8 ಕ್ಕೆ ಗಣಪತಿ ಹೋಮ, 10.41 ರಿಂದ 12.41 ರ ಮದ್ಯೆ ನಾಗಪ್ರತಿಷ್ಠೆ ವಿಷ್ಣುಮೂರ್ತಿ, ಪನ್ನಿಕೊಳತ್ತಿ ಚಾಮುಂಡಿ, ಕೊರತ್ತಿ, ರಕ್ತೇಶ್ವರಿ ಗುಳಿಗ ಪ್ರತಿಷ್ಠೆ , ಪಂಜುರ್ಲಿ, ಕಲ್ಲುರ್ಟಿ ತಂಬಿಲ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯ ನೈಮಿತ್ರಿಕ ನಿರ್ಣಯ, ಪ್ರಸಾದ ವಿತರಣೆ, ಪಾನಕ ಪೂಜೆ, 1 ರಿಂದ ಅನ್ನ ಸಂತರ್ಪಣೆ, 2.30 ಕ್ಕೆ ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರಿಗೆ ಪೂರ್ಣ ಕುಂಭ ಸ್ವಾಗತ, 3 ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಧಾರ್ಮಿಕ ಸಭೆಯಲ್ಲಿ ಬಿ.ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಲಿದ್ದು ಮಾಣಿಲ ಶ್ರೀ ಧಾಮ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಕೆ.ಎನ್. ಕೃಷ್ಣ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಮಾಧವ ಚೆಟ್ಟಿಯಾರ್ ಪೆರ್ಲ ಉಪಸ್ಥಿತರಿರುವರು. ಮಾಧವನ್ ಮಾಸ್ತರ್ ಪಯ್ನಾವೂರು ಧಾರ್ಮಿಕ ಭಾಷಣ ಮಾಡುವರು.
ಎ. 18 ರಂದು ಸಾಯಂಕಾಲ 6.30 ಕ್ಕೆ ಪಳ್ಳತ್ತಡ್ಕ ಶ್ರೀ ವಯನಾಟು ಕುಲವನ್ ವಿಷ್ಣುಮೂರ್ತಿ ಕ್ಷೇತ್ರದಿಂದ ಭಂಡಾರ ಹೊರಡುವುದು, 7 ಗಂಟೆಗೆ ತೈಯ್ಯಂ ಕೂಡಲ್, 7.30 ಕ್ಕೆ ವಿಷ್ಣುಮೂರ್ತಿ, ಕೊರತ್ತಿಯಮ್ಮ , ಮಾಣಿಚ್ಚಿ , ಬಬ್ಬರ್ಯ, ಧೂಮಾವತಿ, ಪನ್ನಿಕೊಳತ್ತಿ ಚಾಮುಂಡಿ ಗುಳಿಗ ದೈವಗಳ ತೊಡಂಙಲ್, 8 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಅನಂತರ ಅನ್ನಸಂತರ್ಪಣೆ, ರಾತ್ರಿ 10 ಕ್ಕೆ ಕೊರತ್ತಿಯಮ್ಮನ ಕೋಲ, 1 ರಿಂದ ಬಬ್ಬರ್ಯ ಮಾಣಿಚ್ಚಿ ದೈವ ಕೋಲ, 19 ರಂದು ಬೆಳಗ್ಗೆ 6 ಕ್ಕೆ ಧೂಮಾವತಿ ಕೋಲ, 11 ರಿಂದ ಪನ್ನಿಕೊಳತ್ತಿ ಚಾಮುಂಡಿ ಕೋಲ, 1 ರಿಂದ ಅನ್ನಸಂತರ್ಪಣೆ, 3 ಕ್ಕೆ ಗುಳಿಗ ದೈವ ಕೋಲ, ನಂತರ ಗುಳಿಗ ವನಕ್ಕೆ ಹೊರಡುವುದು, ಸಾಯಂಕಾಲ 5.30 ಕ್ಕೆ ಭಂಡಾರ ಇಳಿಯುವುದು ಎಂಬೀ ಕಾರ್ಯಕ್ರಮಗಳು ನಡೆಯಲಿವೆ.
ದೈವದ ಆನುಗ್ರಹ ಹಾಗೂ ಊರ ಪರವೂರ ಭಕ್ತರ ಸಹಕಾರದಿಂದ ನೇಮೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದೆ. ದೈವ ಕಾರಣಿಕವು ಎಲ್ಲವನ್ನೂ ಮುನ್ನಡೆಸುತ್ತಿದ್ದು ಭಗವದ್ಬಕ್ತರು ಹೆಚ್ಚು ಸಂಖ್ಯೆಯಲ್ಲಿ ಅಗಮಿಸಿ ದೈವದ ಅಶೀರ್ವಾದಕ್ಕೆ ಪಾತ್ರರಾಗಬೇಕು.
ಮಾಧವ ಚೆಟ್ಟಿಯಾರ್ ಪೆರ್ಲ, ನಿರ್ಮಾಣ ಸಮಿತಿ ಅಧ್ಯಕ್ಷರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.