ಪಳ್ಳತ್ತೂರು ಸೇತುವೆ ಕಾಮಗಾರಿ ಆರಂಭ; ಸುಗಮ ಸಂಚಾರ‌ ನಿರೀಕ್ಷೆ


Team Udayavani, Apr 19, 2018, 6:20 AM IST

17mul1-Pallathuru.jpg

ಮುಳ್ಳೇರಿಯ: ಬಹುಕಾಲದ ಬೇಡಿಕೆಯ, ನಿರೀಕ್ಷೆಯ ಪಳ್ಳತ್ತೂರು ಸೇತುವೆಯ ಕಾಮಗಾರಿ ಆರಂಭಗೊಂಡಿದ್ದು ಮುಂದಿನ ವರ್ಷಗಳಲ್ಲಿ ಸುಗಮ ಸಂಚಾರದ ನಿರೀಕ್ಷೆಯಲ್ಲಿದ್ದಾರೆ ಜನರು.

ದೇಲಂಪಾಡಿ ಗ್ರಾ. ಪಂ.ಗೆ ಸೇರಿರುವ ಪಳ್ಳತ್ತೂರು ಸೇತುವೆಯ ಮೂಲಕ ಸಂಚಾರ ದುಸ್ತರವೂ, ಪ್ರಾಣಾಪಾಯಕ್ಕೆ ಸಾಕ್ಷಿಯಾಗಬೇಕಾಗುತ್ತಿದ್ದರೂ ನೂತನ ನಿರ್ಮಾಣ ಮರೀಚಿಕೆಯಾಗಿತ್ತು. ಆದರೆ ವರ್ಷಗಳಿಂದ ಮೀನಮೇಷ ಎಣಿಸುತ್ತಿದ್ದ ನಿರ್ಮಾಣ ಕಾಮಗಾರಿಗಿದ್ದ ಎಲ್ಲ ಅಡಚಣೆಗಳು ದೂರವಾಗಿವೆ. ಸೇತುವೆ ನಿರ್ಮಾಣ ಹಾಗೂ ಕೊಟ್ಯಾಡಿಯ ವರೆಗಿನ ಸಂಪರ್ಕರಸ್ತೆಯ ನಿರ್ಮಾಣಕ್ಕಾಗಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ ಲೋಕೋಪಯೋಗಿ ಇಲಾಖೆ 7.58 ಕೋಟಿ ರೂಪಾಯಿಯನ್ನು ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆಯ ನಂತರ ತ್ವರಿತ ಕಾಮಗಾರಿ ನಡೆಯು ತ್ತಿದೆ. ಕಳೆದ ವರ್ಷದ ಫೆ. 17ರಂದು ಸೇತುವೆ ನಿರ್ಮಾಣಕ್ಕೆ ಆಡಳಿತಾನುಮತಿ ಲಭಿಸಿದ್ದರೂ ತಾಂತ್ರಿಕ ಅಡಚಣೆ ಕಾಮಗಾರಿ ಆರಂಭದ ಅಗತ್ಯ ಕ್ರಮಗಳಿಗೆ ಅಡ್ಡಿಯಾಗಿತ್ತು.

ಕರ್ನಾಟಕಕ್ಕೆ ಸೇರಿದ ಈಶ್ವರಮಂಗಲ, ಪುತ್ತೂರು ಮೊದಲಾದ ಪ್ರದೇಶಗಳಿಗೆ ಇದು ಸಂಪರ್ಕ ಕಲ್ಪಿಸುತ್ತಿದೆ. ಈ ರಸ್ತೆಯ ಮೂಲಕ ಕೊಟ್ಯಾಡಿ, ಅಡೂರು ಪ್ರದೇಶಗಳಿಗೆ ಖಾಸಗಿ, ಕರ್ನಾಟಕ ಸರಕಾರಿ ಬಸ್‌ಗಳು, ಇತರ ವಾಹನ ಗಳು ನಿತ್ಯವೂ ಓಡಾಟ ನಡೆಸುತ್ತಿವೆ. ಆದರೆ ಸೇತುವೆ ದುರವಸ್ಥೆಯು ಸಂಚಾರವನ್ನು   ಮೊಟಕುಗೊಳಿಸುತ್ತಿದೆ. ಇದರಿಂದಾಗಿ ನಿತ್ಯವೂ ಈ ರಸ್ತೆಯನ್ನು ಆಶ್ರಯಿಸಿರುವ ವಿದ್ಯಾರ್ಥಿಗಳು, ಕಾರ್ಮಿಕರು ಮೊದಲಾದವರು ತೊಂದರೆ ಅನುಭವಿಸಬೇಕಾಗುತ್ತಿದೆ. ಇಲ್ಲೊಂದು ದೊಡ್ಡ ಸೇತುವೆ ನಿರ್ಮಾಣಕ್ಕೆ ಒತ್ತಾಯ ಹಲವು ವರ್ಷ ಗಳಿಂದ ಕೇಳಿಬರುತ್ತಿದೆ. ಆದರೆ ಅದನ್ನು ಕಿವಿಗೆ ಹಾಕಿಕೊಳ್ಳುವವರು ಯಾರೂ ಇರಲೇ ಇರಲಿಲ್ಲ.

ಕರ್ನಾಟಕಕ್ಕೆ ಸೇರಿದ ರಸ್ತೆಯ ಭಾಗವನ್ನು ಕರ್ನಾಟಕ ಸರಕಾರ ಎರಡು ವರ್ಷಗಳ ಹಿಂದೇಯೇ ಮೆಕಾxಂ ಮಾದರಿಯ ಟಾರಿಂಗ್‌ ನಡೆಸಿ ಸುಸಜ್ಜಿತಗೊಳಿಸಿದೆ. ಆದರೆ ಕೇರಳಕ್ಕೆ ಸೇರಿದ ರಸ್ತೆಯ ಭಾಗ ಮಾತ್ರ ಈ ತನಕ ಶೋಚನೀಯವಾಗಿಯೇ ಉಳಿದಿತ್ತು. ಎರಡು ರಾಜ್ಯಗಳನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಇನ್ನು ಮುಂದಿನ ದಿನಗಳಲ್ಲಿ ಸಾಧ್ಯವಾಗಲಿದೆ ಎನ್ನುವುದು ಎಲ್ಲರಿಗೂ ಸಂತಸ ತರಬಲ್ಲುದು.ಪ್ರಸ್ತುತ ಒಂದು ವರ್ಷ ಕಾಲ ಸಂಚಾರದಲ್ಲಿ ಸಮಸ್ಯೆ ಎದುರಾದರೂ ಇಲ್ಲಿನ ಎಲ್ಲ ಸಮಸ್ಯೆಗಳು ಪರಿಹಾರವಾಗಲಿದ್ದು ಅದಕ್ಕಾಗಿ ತಾಳ್ಮೆಯಿಂದ ಕಾಯಬೇಕಾಗಿದೆ.

ಎಎಸ್‌ಐ ಬಲಿ ಪಡೆದ ಸೇತುವೆ
ಕೊಟ್ಯಾಡಿಯಿಂದ ಒಂದು ಕಿಲೋ ಮೀಟರ್‌ ದೂರದಲ್ಲಿರುವ ಪಳ್ಳತ್ತೂರು ಕಿರು ಸೇತುವೆ ತೀರಾ ಜರ್ಜರಿತವಾದ ಮುಳುಗು ಸೇತುವೆ. 1997ರಲ್ಲಿ ದೇಲಂಪಾಡಿ ಗ್ರಾಮ ಪಂಚಾಯತ್‌ ವತಿಯಿಂದ ಪ್ರಸ್ತುತ ಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ ಇಬ್ಬದಿಯಲ್ಲಿ ಯಾವುದೇ ರಕ್ಷಣೆ ಇಲ್ಲದೆ ಇದರ ಮೂಲಕ ಸಂಚಾರ ನಡೆಸಲಾಗುತ್ತಿತ್ತು. ಜೋರಾಗಿ ಮಳೆ ಸುರಿದರೆ ಸೇತು ವೆ ಮೇಲೆ ನೀರು ಹರಿದು ಸಂಚಾರ ಮೊಟಕುಗೊಳ್ಳುತ್ತಿತ್ತು. ಪ್ರಯತ್ನಪೂರ್ವಕವಾಗಿ ದಾಟುವ ಪ್ರಯತ್ನ ಮಾಡಿದರೆ ಸಂಚಾರ ಕಟ್ಟಿಟ್ಟಬುತ್ತಿ. ಇಂತಹ ಪ್ರಯತ್ನ ಜೀವಹಾನಿಗೂ ಕಾರಣವಾದುದು ದುದೆ„ìವ. ಕುಂಬಳೆ ಎಎಸ್‌ಐ ನಾರಾಯಣ ನಾಯ್ಕ ಬೆ„ಕ್‌ ಸಮೇತ ನೀರು ಪಾಲಾದುದು ವರ್ಷದ ಹಿಂದಿನ ನಡುಕ ಹುಟ್ಟಿಸುವ ವಿಚಾರ. ಜನರ ಸತತ ಒತ್ತಾಯ, ಅ ಧಿಕೃತರ ಪ್ರಯತ್ನದ ಫಲವಾಗಿ ಸೇತುವೆ ಸಾಕಾರಗೊಳ್ಳಲಿದೆ.

ಕಾಮಗಾರಿ ಚುರುಕು
ಕರಾರಿನಂತೆ ಎರಡು ವರ್ಷದಲ್ಲಿ ಇದು ಪೂರ್ತಿಗೊಳಿಸಬೇಕು. ಈಗಾಗಲೇ ಪಿಲ್ಲರ್‌ಗಳನ್ನು ಹಾಕುವ ಕೆಲಸ ಆರಂಭಗೊಂಡಿದೆ. ಇಲ್ಲಿನ ತೋಡಿನ ಮೂಲಕ ನೀರು ಹರಿಯುವ ಕಾರಣ ಮಳೆಗಾಲ ಆರಂಭವಾಗುವುದಕ್ಕಿಂತ ಮುಂಚಿತವಾಗಿ ತಳಮಟ್ಟದ ತನಕ ಪಿಲ್ಲರ್‌ಗಳನ್ನು ಹಾಕಿದರೆ ಮುಂದಿನ ಕೆಲಸ ಸುಗಮವಾಗಬಹುದು. ಹೀಗಾಗಿ ಪಿಲ್ಲರ್‌ಗೆ ರಂಧ್ರ ಕೊರೆಯುವ ಕಾಮಗಾರಿ ಎಡೆಬಿಡದೆ ಮುಂದುವರಿದಿದೆ. ಅಗತ್ಯ ವಸ್ತುಗಳನ್ನು ಇಲ್ಲಿ ರಾಶಿಹಾಕಲಾಗಿದೆ.

ಸಂಚಾರಕ್ಕೆ ಅಡಚಣೆ
ಇಕ್ಕಟ್ಟು ಪ್ರದೇಶವಾದ ಕಾರಣ ಸೇತುವೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಬೇಕಾದರೆ ಈ ಮೂಲಕ ಸಾಗುವ ವಾಹನಗಳನ್ನು ತಡೆ ಹಿಡಿಯು ವುದು ಅನಿವಾರ್ಯವಾಗಿತ್ತು. ಹೀಗಾಗಿ ಮಾರ್ಚ್‌ ತಿಂಗಳ ಮಧ್ಯದಲ್ಲಿಯೇ ವಾಹನಗಳ ಸಂಚಾರವನ್ನು ನಿಲ್ಲಿಸಲಾಗಿದೆ. ಕೇವಲ ಸಮೀಪದ ತೋಟದ ಮೂಲಕ ಕಾಲ್ನಡಿಗೆಯಲ್ಲಿ ಮಾತ್ರಾ ಜನರು ಸಾಗಬೇಕಾಗಿದೆ. ಮಳೆಗಾಲದಲ್ಲಿ ಕಾಲ್ನಡಿಗೆಯೂ ಕಷ್ಟಕರವಾಗಬಹುದು. ವಾಹನಗಳ ಮೂಲಕ ಸಾಗುವವರು ಕೊಟ್ಯಾಡಿ-ಗಾಳಿಮುಖ-ಕರ್ನೂರು ಮೂಲಕ ಸಾಗಬಹುದಾಗಿದೆ.

ಟಾಪ್ ನ್ಯೂಸ್

4-ct-ravi

Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

2-katapady

Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ

BJP-SPL-Meet

BJP Politics: ಬಿ.ಎಸ್‌.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Kasaragod ಭಾಗದ ಅಪರಾಧ ಸುದ್ದಿಗಳು; ಕಳ್ಳನೋಟು ಸಹಿತ ವಶಕ್ಕೆ

Kasaragod ಭಾಗದ ಅಪರಾಧ ಸುದ್ದಿಗಳು; ಕಳ್ಳನೋಟು ಸಹಿತ ವಶಕ್ಕೆ

Untitled-1

Kasaragod Crime News: ಬೀದಿ ನಾಯಿಗೆ ಹೆದರಿ ಓಡಿದ ಬಾಲಕ ಬಾವಿಗೆ ಬಿದ್ದು ಸಾವು

2

Kasaragod: ಯುವತಿ ನಾಪತ್ತೆ; ದೂರು ದಾಖಲು

Bus Fare Hike: ಕರ್ನಾಟಕಕ್ಕೆ ಕೇರಳ ಸರಕಾರಿ ಬಸ್‌ ಟಿಕೆಟ್‌ ದರ ಏರಿಕೆ

Bus Fare Hike: ಕರ್ನಾಟಕಕ್ಕೆ ಕೇರಳ ಸರಕಾರಿ ಬಸ್‌ ಟಿಕೆಟ್‌ ದರ ಏರಿಕೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mudhol: ಪ್ರತ್ಯೇಕ ಅಪಘಾತ ಇಬ್ಬರು ಮೃತ್ಯು..

Mudhol: ಪ್ರತ್ಯೇಕ ಅಪಘಾತ ಇಬ್ಬರು ಮೃತ್ಯು..

4-ct-ravi

Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.