ಕಾಸರಗೋಡು ಡಿಪಿಸಿ ಕಚೇರಿ ಕಾಗದ ರಹಿತ ಘೋಷಣೆ


Team Udayavani, Mar 15, 2018, 10:10 AM IST

No-Paper-14-3.jpg

ಕಾಸರಗೋಡು: ಕಾಸರಗೋಡು ಜಿಲ್ಲಾ ಮಟ್ಟದ ಪಂಚಾಯತ್‌ ಸಹಾಯಕ ನಿರ್ದೇಶಕರ ಕಚೇರಿಯು ಕಾಗದರಹಿತ ಇಲೆಕ್ಟ್ರಾನಿಕ್‌ ಕಚೇರಿಯಾಗಿ ಕಾರ್ಯನಿರ್ವಹಣೆ ಆರಂಭಿಸಿದೆ. ಕೇರಳ ಪಂಚಾಯತ್‌ ನಿರ್ದೇಶಕಿ ಪಿ. ಮೇರಿ ಕುಟ್ಟಿ  ಅವರು ಕಾಗದರಹಿತ ಇಲೆಕ್ಟ್ರಾನಿಕ್‌ ಕಚೇರಿಯ ಘೋಷಣೆ ಮಾಡಿದರು. ಜಿಲ್ಲಾಧಿಕಾರಿ ಕೆ. ಜೀವನ್‌ಬಾಬು ಅವರು ನವೀಕರಿಸಿದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಸಹನಿರ್ದೇಶಕ (ಅಭಿವೃದ್ಧಿ ಹಾಗೂ ಆಡಳಿತ) ಎಂ.ಎಸ್‌. ನಾರಾಯಣನ್‌ ನಂಬೂದಿರಿ, ಪರ್ಫಾಮೆನ್ಸ್‌  ಆಡಿಟ್‌ ಸೂಪರ್‌ವೈಸರ್‌ ಎಂ. ಕಣ್ಣನ್‌ ನಾಯರ್‌, ಸೀನಿಯರ್‌ ಸೂಪರಿಂಟೆಂಡೆಂಟ್‌ ಕೆ. ವಿನೋದ್‌ಕುಮಾರ್‌ ಮುಂತಾದವರು ಮಾತನಾಡಿದರು. ಪಂಚಾಯತ್‌ ಸಹಾಯಕ ನಿರ್ದೇಶಕಿ ಕೆ.ಆರ್‌. ಪ್ರಭಾ ಸ್ವಾಗತಿಸಿದರು. ಜ್ಯೂನಿಯರ್‌ ಸೂಪರಿಂಟೆಂಡೆಂಟ್‌ ಕೆ. ಮೋಹನನ್‌ ವಂದಿಸಿದರು.

ಸ್ಥಳೀಯಾಡಳಿತ ಸಂಸ್ಥೆಗಳ ಪಂಚಾಯತ್‌ ಇಲಾಖೆಗಳ ಎಲ್ಲಾ  ಸೇವೆಗಳು ಬೆರಳ ತುದಿಯಲ್ಲಿ  ಎಂಬ ಗುರಿಯೊಂದಿಗೆ ಸಮಗ್ರ ಇ-ಗವರ್ನೆನ್ಸ್‌  ವ್ಯವಸ್ಥೆ  ಏರ್ಪಡಿಸುವುದು ರಾಜ್ಯ ಸರಕಾರದ ಯೋಜನೆಯಾಗಿದೆ. ಇದರ ಅಂಗವಾಗಿ ಜಿಲ್ಲಾ  ಮಟ್ಟದ ಪಂಚಾಯತ್‌ ಉಪನಿರ್ದೇಶಕರ ಕಚೇರಿ ಕಾಗದರಹಿತವಾಗಿದೆ. ಆಡಳಿತ ಸೇವೆಯಲ್ಲಿ  ಇ-ಗವರ್ನೆನ್ಸ್‌  ವ್ಯವಸ್ಥೆಯೊಂದಿಗೆ ಮತ್ತು  ಕಾರ್ಯದಕ್ಷತೆಯೊಂದಿಗೆ ಪ್ರಯೋಜನ ಒದಗಿಸುವ ಸಲುವಾಗಿ ಪಂಚಾಯತ್‌ ಇಲಾಖೆಯು ಈ ಯೋಜನೆಗೆ ಚಾಲನೆ ನೀಡಿತು.

ಕೇರಳದ ಗ್ರಾಮ ಪಂಚಾಯತ್‌ಗಳು ನಾಗರಿಕ ಸೇವೆಯನ್ನು  ಫಲಪ್ರದವಾಗಿ ನೀಡುವುದಕ್ಕಾಗಿರುವ ಶ್ರಮ ನಡೆಯುತ್ತಿದೆ. ಜನರಿಗೆ ನೀಡುವ ವಿವಿಧ ಸೇವೆಗಳು ಆನ್‌ಲೈನ್‌ಗೆ ಬದಲಾಯಿಸುವುದಕ್ಕೆ ಈಗಾಗಲೇ ಸಾಧ್ಯವಾಗಿದೆ. ಜನನ – ಮರಣ, ವಿವಾಹ ನೋಂದಣಿಗಳು, ಸಾಮಾಜಿಕ ಸುರಕ್ಷಾ ಪಿಂಚಣಿ ಅಲ್ಲದೆ ಸಂಬಂಧಪಟ್ಟ  ಮಾಹಿತಿಗಳು ಆನ್‌ಲೈನ್‌ ಆಗಿ ದೊರಕಲಿವೆ. ಕಟ್ಟಡ ಮಾಲಕರ ದೃಢೀಕರಣ ಪತ್ರ, ತೆರಿಗೆ ಪಾವತಿಸುವ ವ್ಯವಸ್ಥೆ, ಯೋಜನೆಗಳ ವಿವಿಧ ಮಾಹಿತಿಗಳು ಆನ್‌ಲೈನ್‌ ಮೂಲಕ ಲಭ್ಯವಿದೆ.

ಸ್ಥಳೀಯಾಡಳಿತ ಸಂಸ್ಥೆಗಳ ಇಲೆಕ್ಟ್ರಾನಿಕ್‌ ಚಟುವಟಿಕೆಗಳಿಗೆ ಕಾಸರಗೋಡು ಜಿಲ್ಲೆಯು ಪ್ರಮುಖ ಕೊಡುಗೆ ನೀಡಿದೆ. ಮ್ಯಾನುವಲ್‌ ಅಕೌಂಟಿಂಗ್‌ ವ್ಯವಸ್ಥೆಯಿಂದ ಸಂಖ್ಯಾ ಡಿಜಿಟಲ್‌ ವ್ಯವಸ್ಥೆಗೆ ಕಾಸರಗೋಡು ಜಿಲ್ಲೆಯು ಮೊದಲು ಬದಲಾಯಿಸಿದ ಜಿಲ್ಲೆ ಎಂಬ ಹೆಗ್ಗಳಿಕೆ ಪಡೆದಿದೆ. ಸ್ಥಳೀಯಾಡಳಿತ ಸಂಸ್ಥೆಗಳು ನಡೆಸುವುದಕ್ಕಾಗಿರುವ ಸಕರ್ಮ ಪದ್ಧತಿ, ಕಟ್ಟಡ ನಿರ್ಮಾಣ ಅನುಮತಿಗಳಿಗಾಗಿರುವ ಸಂಕೇತಾ ಎಂಬ ಅಪ್ಲಿಕೇಶನ್‌ಗಳು ಎಲ್ಲಾ  ಗ್ರಾಮ ಪಂಚಾಯತ್‌ಗಳಲ್ಲಿ  ಅಳವಡಿಸಿರುವುದರಲ್ಲಿ  ಕೂಡ ಕಾಸರಗೋಡು ಜಿಲ್ಲೆಯು ಮೊದಲ ಸ್ಥಾನ ಅಲಂಕರಿಸಿದೆ.

ಸಕರ್ಮ ಪದ್ಧತಿ ರಾಜ್ಯದಲ್ಲಿಯೇ ಮೊದಲು ಆರಂಭಿಸುವ ಮೂಲಕ ಕಾಸರಗೋಡು ಜಿಲ್ಲೆಯು ಪ್ರಥಮ ಸ್ಥಾನ ಪಡೆದಿದೆ. ಇದರ ಮುಂದುವರಿದ ಭಾಗವಾಗಿ “ಇನ್ಫರ್ಮೇಶನ್‌ ಕೇರಳ ಮಿಶನ್‌ ಸೂಚಿಕ’ ಎಂಬ ಹೆಸರಿನಲ್ಲಿ ತಯಾರಿಸಿದ ವೆಬ್‌ ಅಪ್ಲಿಕೇಶನ್‌ ಕೂಡ ಕಾಸರಗೋಡು ಪಂಚಾಯತ್‌ ಸಹಾಯಕ ನಿರ್ದೇಶಕರ ಕಾರ್ಯಾಲಯದಲ್ಲಿ  ಟ್ರಯಲ್‌ ರನ್‌ ನಡೆಸಲಾಗಿದೆ. ಮಾರ್ಚ್‌ 1ರಿಂದಲೇ ಪಂಚಾಯತ್‌ ಸಹಾಯಕ ನಿರ್ದೇಶಕರ ಕಚೇರಿ ಸೇರಿದಂತೆ ಇಡೀ ಕಾರ್ಯಾಲಯವು ಪೂರ್ಣ ಪ್ರಮಾಣದಲ್ಲಿ  ಇಲೆಕ್ಟ್ರಾನಿಕ್‌ ಫೈಲ್‌ ಮೆನೇಜ್‌ಮೆಂಟ್‌ ಆಗಿ ಕಾರ್ಯವೆಸಗುತ್ತಿದೆ.

ಪ್ರಥಮಗಳ ಜಿಲ್ಲೆ ಉದ್ದೇಶ 
ಇದೇ ವೇಳೆ ಲಭಿಸುವ ಎಲ್ಲ ಅರ್ಜಿಗಳಿಗೆ ರಶೀದಿ ನೀಡುವುದಕ್ಕಿರುವ ಪಂಚಾಯತ್‌ಗಳ ಫ್ರಂಟ್‌ ಕಚೇರಿ ವ್ಯವಸ್ಥೆಯನ್ನು ಕೂಡ ಕಾಗದರಹಿತ ಮಾಡಲಾಗುವುದು. ಸೂಚಿಕ ಎಂಬ ಅಪ್ಲಿಕೇಶನ್‌ ಬಳಸುವ ಮೂಲಕ ಯಾವ ಫೈಲ್‌ಗ‌ಳನ್ನು ಸಹ ವೆಬ್‌ಸೈಟ್‌ಗಳಲ್ಲಿ  ನೋಡಲು ಮತ್ತು  ಫೈಲ್‌ ಟ್ರ್ಯಾಕ್‌ ಮಾಡಲು ಸಾಧ್ಯವಾಗಲಿದೆ. ಇನ್ನೊಂದೆಡೆ ಕಂಪ್ಯೂಟರ್‌, ವೆಬ್‌ಸೈಟ್‌ ಇತ್ಯಾದಿಗಳಿಗೆ ಸಂಬಂಧಿಸಿ ಅತ್ಯಾಧುನಿಕ ಮಾದರಿಯ ಇನ್ನಷ್ಟು ಯೋಜನೆಗಳನ್ನು ಕೂಡ ಕಾಸರಗೋಡಿನಲ್ಲಿ  ಕಾರ್ಯಗತಗೊಳಿಸಿ ಆ ನಿಟ್ಟಿನಲ್ಲೂ  ಜಿಲ್ಲೆಯು ಪ್ರಥಮ ಸ್ಥಾನ ಗಳಿಸುವ ಉದ್ದೇಶ ಹೊಂದಲಾಗಿದೆ.

ಟಾಪ್ ನ್ಯೂಸ್

Hosnagara-Bus

Hosanagar: ಪ್ರಪಾತಕ್ಕೆ ಉರುಳಿದ ಬಸ್; ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರು

Mangaluru: ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮನೀಡಿದ ತಾಯಿ

Mangaluru: ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮನೀಡಿದ ತಾಯಿ

arrested

Mangaluru: ಕಾರಾಗೃಹದೊಳಗೆ ಮೊಬೈಲ್ ಎಸೆಯಲು ಯತ್ನಿಸಿದವ ಅರೆಸ್ಟ್

Beggars baby

Indore; ಭಿಕ್ಷುಕರ ಬಗ್ಗೆ ಮಾಹಿತಿ ಹಂಚಿಕೊಂಡರೆ ನಾಗರಿಕರಿಗೆ 1,000 ರೂ. ಬಹುಮಾನ!

police crime

Anmol Bishnoi; ಅಪರಾಧ ಜಾಲದ ಪ್ರಾಬಲ್ಯ ಸ್ಥಾಪಿಸಲು ಬಾಬಾ ಸಿದ್ದಿಕಿ ಹ*ತ್ಯೆ!

Ullala-bike-Accident

Ullala: ಲಾರಿ-ಬೈಕ್ ಅಪಘಾತ: ಮೆಡಿಕಲ್ ಅಂಗಡಿ ಮಾಲೀಕ ದಾರುಣ ಮೃತ್ಯು

ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ‌ ಡ್ರಿಂಕ್ ಬಿಡುಗಡೆ 

ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ‌ ಡ್ರಿಂಕ್ ಬಿಡುಗಡೆ 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Kasaragod Crime News: ನೇಣು ಬಿಗಿದು ಯುವಕ ಆತ್ಮಹ*ತ್ಯೆ

1-katte

ಕಟ್ಟೆಮಾಡು ದೇಗುಲ ವಸ್ತ್ರ ಸಂಹಿತೆೆ ವಿವಾದ: ಆಡಳಿತ ಮಂಡಳಿ ಸಭೆಯಲ್ಲಿ ಮೂಡದ ಒಮ್ಮತ‌

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

1-ksde

CPCRI; ಅಡಿಕೆ ಉತ್ಪನ್ನ ಬಗ್ಗೆ ಸಂಶೋಧನೆ

Fraud case: ಸಚಿತಾ ರೈ ವಿರುದ್ಧ ಇನ್ನೊಂದು ಕೇಸು ದಾಖಲು

Fraud case: ಸಚಿತಾ ರೈ ವಿರುದ್ಧ ಇನ್ನೊಂದು ಕೇಸು ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

car-parkala

Brahmavar: ಕಂಟೈನರ್‌ ಢಿಕ್ಕಿ; ಬೈಕ್‌ ಸಹಸವಾರೆ ಸಾವು

Hosnagara-Bus

Hosanagar: ಪ್ರಪಾತಕ್ಕೆ ಉರುಳಿದ ಬಸ್; ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರು

satish jarakiholi

60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ

Mangaluru: ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮನೀಡಿದ ತಾಯಿ

Mangaluru: ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮನೀಡಿದ ತಾಯಿ

Untitled-1

Kasaragod Crime News: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.