ಜಿದ್ದಾಜಿದ್ದಿನ ಕಣ : ಕಾವೇರುತ್ತಿರುವ ಚುನಾವಣೆ ಪ್ರಚಾರ
Team Udayavani, Mar 26, 2019, 6:30 AM IST
ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆ ನಡೆಯಲಿದ್ದು, ಚುನಾವಣ ಪ್ರಚಾರ ಕಾವೇರುತ್ತಿದೆ. ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ರವೀಶ ತಂತ್ರಿ ಕುಂಟಾರು, ಸಿಪಿಎಂ ನಿಂದ ಕೆ.ಪಿ.ಸತೀಶ್ಚಂದ್ರನ್, ಕಾಂಗ್ರೆಸ್‌ನಿಂದ ರಾಜ್‌ಮೋಹನ್ ಉಣ್ಣಿತ್ತಾನ್ ಕಣದಲ್ಲಿದ್ದು, ಈ ಮೂವರೊಳಗೆ ಸ್ಪರ್ಧೆ ಏರ್ಪಟ್ಟಿದೆ.
ಈ ಚುನಾವಣೆಯಲ್ಲೂ ಗೆಲುವು ಶತಃಸಿದ್ಧ. ಈ ಮೂಲಕ ಗೆಲುವಿನ ಓಟ ಮುಂದುವರಿಯಲಿದೆ ಎಂದು ಸಿಪಿಎಂ ಅಭ್ಯರ್ಥಿ ಪಿ.ಕೆ. ಸತೀಶ್ಚಂದ್ರನ್ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಅದೇ ವೇಳೆ ಕಾಸರಗೋಡು ಕ್ಷೇತ್ರವನ್ನು ಸಿಪಿಎಂನಿಂದ ಕಸಿದು ಕೊಳ್ಳುವುದು ಖಚಿತ ಎನ್ನುತ್ತಾರೆ ಕಾಂಗ್ರೆಸ್ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಲೆಯಿಂದ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಅಚ್ಚರಿಯ ಗೆಲುವು ಸಾಧಿಸುವುದಾಗಿ ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಖಚಿತ ಭರವಸೆ ವ್ಯಕ್ತಪಡಿಸುತ್ತಾರೆ. ಈ ಮೂವರು ಅಭ್ಯರ್ಥಿಗಳಿಗೂ ಗೆಲುವಿನ ನಿರೀಕ್ಷೆಯಿದೆ.
ಜಿದ್ದಾಜಿದ್ದಿನ ಹೋರಾಟ ಕಣವಾಗಿರುವ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಈ ಮೂವರು ಅಭ್ಯರ್ಥಿಗಳು ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ದಿನದಿಂದ ದಿನಕ್ಕೆ ಚುನಾವಣ ಪ್ರಚಾರ ಕಾವೇರುತ್ತಿದೆ. ಈಗಾಗಲೇ ಪ್ರಥಮ ಸುತ್ತಿನ ಚುನಾವಣ ಪ್ರಚಾರ ಮುಗಿಸಿರುವ ಅಭ್ಯರ್ಥಿಗಳು ಬೆಳಗ್ಗೆ ಆರು ಗಂಟೆಯಿಂದಲೇ ಚುನಾವಣ ಪ್ರಚಾರಕ್ಕೆ ಧುಮುಕುತ್ತಾರೆ. ರಾತ್ರಿಯ ವರೆಗೂ ಚುನಾವಣ ಪ್ರಚಾರದಲ್ಲಿರುವ ಅಭ್ಯರ್ಥಿಗಳು ಮತದಾರರನ್ನು ಭೇಟಿಯಾಗಿ ಮತ ಯಾಚಿಸುತ್ತಿದ್ದಾರೆ.
ಕಾಸರಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ಹಾಗೂ ಕಣ್ಣೂರು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ರವೀಶ ತಂತ್ರಿ ಕುಂಟಾರು, ಕೆ.ಪಿ. ಸತೀಶ್ಚಂದ್ರನ್, ರಾಜ್‌ಮೋಹನ್ ಉಣ್ಣಿತ್ತಾನ್ ಈಗಾಗಲೇ ಹಲವೆಡೆ ಸಾರ್ವಜನಿಕ ಸಭೆಗಳಲ್ಲಿ ಮಾತನಾಡಿ ಮತ ಯಾಚಿಸಿದ್ದಾರೆ. ಕುಟುಂಬ ಸಭೆಗಳು, ಹೊಸ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಮತ ಯಾಚಿಸಿದ್ದಾರೆ. ಮತದಾರರನ್ನು ಸೆಳೆಯಲು ವಿವಿಧ ತಂತ್ರಗಳನ್ನು ಹೆಣೆಯುತ್ತಿರುವ ರಾಜಕೀಯ ಪಕ್ಷಗಳು ಮತದಾರರಿಗೆ ಭಾರೀ ಭರವಸೆಗಳನ್ನು ನೀಡುತ್ತಿವೆೆ. ವೀಡಿಯೋ ಕಾನ್ಫರೆನ್ಸ್‌ಗಳ ಮೂಲಕ ವಿದೇಶದಲ್ಲಿರುವ ಅನಿವಾಸಿ ಭಾರತೀಯ ಮತದಾರರನ್ನು ಓಲೈಸುವ ಪ್ರಕ್ರಿಯೆಯೂ ನಡೆಯುತ್ತಿದೆ. ಈ ಮೂಲಕ ಊರಲ್ಲಿರುವ ಅನಿವಾಸಿ ಭಾರತೀಯ ಮತದಾರರ ಸಂಬಂಧಿಕರು, ಆಪ್ತರು, ಗೆಳೆಯರ ಮತ ಪಡೆಯಲು ಯತ್ನ ನಡೆಯುತ್ತಿದೆ.
ಸಮಾಜ ಸೇವಾ ಧುರೀಣರನ್ನು, ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು, ನ್ಪೋರ್ಟ್ಸ್ ಆ್ಯಂಡ್ ಆರ್ಟ್ಸ್ ಕ್ಲಬ್‌ಗಳ ಪದಾಧಿಕಾರಿಗಳನ್ನು, ಸದಸ್ಯರನ್ನು ಭೇಟಿಯಾಗಿ ಮತಯಾಚಿಸುವ ಮೂಲಕ ಮತದಾರರ ಓಲೈಕೆಯಲ್ಲಿ ತೊಡಗಿದೆ. ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಪ್ರಾದೇಶಿಕ ಸಮಸ್ಯೆಗಳಿಗೆ ಹೆಚ್ಚಿನ ಮಹತ್ವವಿದೆ. ರಾಜ್ಯದ ಇತರ ಲೋಕಸಭಾ ಕ್ಷೇತ್ರಗಳಿಗೆ ಭಿನ್ನವಾಗಿ ಕಾಸರಗೋಡಿನಲ್ಲಿ ಸಮಸ್ಯೆಗಳು ಹಲವು. ಇವುಗಳನ್ನು ಮುಂದಿಟ್ಟು ಮತದಾರರನ್ನು ಓಲೈಸುವ ತಂತ್ರಗಳನ್ನು ಹೆಣೆಯಲಾಗುತ್ತಿದೆ.
ಅಭಿವೃದ್ಧಿ ಮಂತ್ರ
ಹಿಂದಿನ ಕಾಂಗ್ರೆಸ್ ನೇತೃತ್ವದ ಐಕ್ಯರಂಗ ಸರಕಾರ ಕಾಸರಗೋಡಿನ ಸಮಗ್ರ ಅಭಿವೃದ್ಧಿಗೆ ವಿಶೇಷ ಗಮನ ನೀಡಿದೆ. ಈ ಹಿನ್ನೆಲೆಯಲ್ಲಿ ಡಾ| ಪ್ರಭಾಕರನ್ ಆಯೋಗ ನೇಮಿಸಿದೆ. ಆಯೋಗ ಶಿಫಾರಸಿನಂತೆ ಸಾಕಷ್ಟು ಅನುದಾನ ಕಾಸರಗೋಡಿಗೆ ಬಿಡುಗಡೆಗೊಳಿಸಿದೆ.
ಕಾಸರಗೋಡಿನಲ್ಲಿ ಕೇಂದ್ರೀಯ ವಿಶ್ವವಿದ್ಯಾ ಲಯ, ವೈದ್ಯಕೀಯ ಕಾಲೇಜು, ಎಚ್‌ಎಎಲ್ ಮೊದಲಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್ ಹೇಳುತ್ತಿದ್ದಾರೆ.
ಕಾಸರಗೋಡಿನ ವಾಣಿಜ್ಯ ಬೆಳೆ, ಸಾವಿರಾರು ಮಂದಿಯ ಜೀವನಕ್ಕೆ ದಾರಿ ತೋರಿದ ಅಡಿಕೆ ಕೃಷಿಕರು ಕಂಗಾಲಾಗಿದ್ದಾರೆ. ಅಡಿಕೆ ಕೃಷಿಕರ ಸಂರಕ್ಷಣೆಗಾಗಿ ಎಡರಂಗ ಸರಕಾರ ಮತ್ತು ಐಕ್ಯರಂಗ ಸರಕಾರ ಅಡಿಕೆ ಪ್ಯಾಕೇಜ್ ಘೋಷಿಸಿದೆ. ಆದರೆ ಈ ವರೆಗೂ ಅಡಿಕೆ ಕೃಷಿಕರಿಗೆ ಒಂದು ಪೈಸೆಯೂ ಲಭಿಸಿಲ್ಲ ಎಂದು ಬಿಜೆಪಿ ಆರೋಪಿಸಿದೆ.
ಎಂಡೋಸಲ್ಫಾನ್ ಸಿಂಪಡಣೆ ನೆರವು: ಮತ್ತೆ ಮುನ್ನೆಲೆಗೆ
ಎಂಡೋಸಲ್ಫಾನ್ ಸಿಂಪಡಣೆೆಯ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ 11 ಗ್ರಾಮ ಪಂಚಾಯತ್‌ಗಳಲ್ಲಿ ದುಷ್ಪರಿಣಾಮ ಬೀರಿದ್ದು, ಎಂಡೋ ಸಂತ್ರಸ್ತರಿಗೆ ಮಾನವ ಹಕ್ಕು ಆಯೋಗದ ಶಿಫಾರಸಿನಂತೆ ನೆರವು ನೀಡಬೇಕೆಂದು ನಿರಂತರ ಹೋರಾಟ ನಡೆದಿದ್ದರೂ, ಈ ವರೆಗೂ ರಾಷ್ಟ್ರೀಯ ಮಾನವ ಹಕ್ಕು ಶಿಫಾರಸಿನಂತೆ ಬಹುಪಾಲು ಆದೇಶಗಳು ಜಾರಿಯಾಗಿಲ್ಲ ಎಂದು ಬಿಜೆಪಿ ಆರೋಪಿಸುತ್ತಿದೆ.
ಒಟ್ಟಾರೆ ಈ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿರುವ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಸ್ಥಳೀಯ ಸಮಸ್ಯೆಗಳ ಜತೆ ರಾಷ್ಟ್ರೀಯ ಸಮಸ್ಯೆಗಳು ಚುನಾವಣ ಪ್ರಚಾರದಲ್ಲಿ ಪ್ರಮುಖ ಅಸ್ತÅವಾಗಿದೆ.
ಭಾಷಾ ಅಲ್ಪಸಂಖ್ಯಾಕರ ಸಮಸ್ಯೆ
ಕಾಸರಗೋಡು ಲೋಕಸಭಾ ಕ್ಷೇತ್ರ ಸಪ್ತಭಾಷೆಗಳ ಸಂಗಮ ಭೂಮಿ. ಇಲ್ಲಿನ ಭಾಷಾ ಅಲ್ಪಸಂಖ್ಯಾತರು ಅನುಭವಿಸುತ್ತಿರುವ ಸಮಸ್ಯೆಗಳು ಹಲವು. ಕಾಸರಗೋಡಿನಲ್ಲಿ ಭಾಷಾ ಅಲ್ಪಸಂಖ್ಯಾತರು ಸಮಸ್ಯೆಗೆ ಸಿಲುಕಿದಾಗ ಭಾಷಾ ಅಲ್ಪಸಂಖ್ಯಾತರ ಪರವಾಗಿ ಹೋರಾಡಿ ವಿವಿಧ ಸವಲತ್ತುಗಳನ್ನು, ಹಕ್ಕುಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಅವರು ಹೇಳುತ್ತಾರೆ. ಪಿಎಸ್‌ಸಿ ಗೆ ಮಲಯಾಳ ಕಡ್ಡಾಯಗೊಳಿಸಿದ ಸರಕಾರದ ನೀತಿಯ ವಿರುದ್ಧ ಹೋರಾಡಿ ಈ ಆದೇಶವನ್ನು ಹಿಂದೆಗೆದುಕೊಳ್ಳಲು ಬಿಜೆಪಿ ಯಶಸ್ವಿಯಾಗಿದೆ ಎಂದು ಬಿಜೆಪಿ ಚುನಾವಣ ಪ್ರಚಾರದಲ್ಲಿ ಪ್ರಮುಖ ವಿಷಯವಾಗಿ ಭಾಷಾ ಅಲ್ಪಸಂಖ್ಯಾಕರು ಹೆಚ್ಚಿರುವ ಪ್ರದೇಶದಲ್ಲಿ ಬಳಸಿಕೊಳ್ಳುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.