ಪರಂಪರಾಗತ ಭತ್ತದ ಕೃಷಿ ಯೋಜನೆಗೆ ತೆರೆದುಕೊಂಡ ಪಿಲಿಕೋಡ್
Team Udayavani, Feb 1, 2019, 1:00 AM IST
ಕಾಸರಗೋಡು: ಅತ್ಯುತ್ತಮ ಫಲ ನೀಡುತ್ತಿದ್ದರೂ, ಹೊಸ ತಲೆಮಾರಿನಿಂದ ದೂರ ಸರಿಯುತ್ತಿರುವ ಪರಂಪರಾಗದ ಭತ್ತದ ಕೃಷಿ ಯೋಜನೆ ಅನುಷ್ಠಾನ ನಡೆಸಿ ಯಶಸ್ವಿಯಾಗುವ ಯತ್ನದಲ್ಲಿ ಪಿಲಿಕೋಡ್ ಗ್ರಾಮ ಪಂಚಾಯತ್ ರಂಗಕ್ಕಿಳಿದಿದೆ.
2018ರ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಈ ಯೋಜನೆ ಪ್ರಕಾರ ಕೃಷಿಗೆ ಹೊರಟಿದೆ. ರಾಜ್ಯ ಸರಕಾರದ ಕನಸಾಗಿರುವ ಯೋಜನೆಗಳಲ್ಲಿ ಒಂದಾದ ಹಸುರು ಕೇರಳ ಮಿಷನ್ ನೇತೃತ್ವದಲ್ಲಿ ಪರಂಪರಾಗತ ಭತ್ತದ ಯೋಜನೆ ಇಲ್ಲಿ ಸಾಕಾರಗೊಳ್ಳುತ್ತಿದೆ. ಗದ್ದೆ ಸಮಿತಿಯ 15 ಕೃಷಿಕರು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಯೋಜನೆಯ ಅಂಗವಾಗಿ ಅಪೂರ್ವ ತಳಿಯಾಗಿರುವ 30 ರೀತಿಯ ಭತ್ತದ ಬೀಜವನ್ನು ಇವರಿಗೆ ಮೊದಲ ಹಂತವಾಗಿ ವಿತರಿಸಲಾಗಿದೆ. ಪ್ರತಿ ಕೃಷಿಕ 15 ಸೆಂಟ್ಸ್ ಜಾಗವನ್ನು ಬಿತ್ತನೆ ನಡೆಸಬೇಕು. ಮುಂದಿನ ಹಂತದಲ್ಲಿ ಅಪೂರ್ವ ತಳಿಗೆ ಸೇರಿದ 15 ರೀತಿಯ ಭತ್ತದ ಬೀಜವನ್ನು ವಿತರಿಸಲಾಗುತ್ತದೆ. ಈ ಮೂಲಕ ಪ್ರತಿ ಕೃಷಿಕನಿಗೆ 30 ಕಿಲೋ ಭತ್ತದ ಬೀಜ ಉತ್ಪಾದನೆ ಸಾಧ್ಯವಾಗಲಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ನಿರೀಕ್ಷಿಸಿದ್ದಾರೆ. ಈ ವರ್ಷ ಆಗಸ್ಟ್ ತಿಂಗಳ ವೇಳೆಗೆ 45 ರೀತಿಯ ಪರಂಪರಾಗತ ಭತ್ತದ ಬೀಜಗಳನ್ನು ಉತ್ಪಾದಿಸಲು ಸಾಧ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.
ಮಾರಾಟಕ್ಕೆ ಬೀಜ ಮೇಳ
ಈ ರೀತಿ ಬೆಳೆಯುವ ಬೀಜಗಳ ಮಾರಾಟ ಉದ್ದೇಶದಿಂದ ‘ಬೀಜ ಮೇಳ’ ಏರ್ಪಡಿಸಲಾಗುವುದು. ಒಂದು ಕಿಲೋ ಬೀಜಕ್ಕೆ ಕನಿಷ್ಠ 40 ರೂ. ಬೆಲೆ ಈ ಮೂಲಕ ಲಭಿಸಲಿದೆ. ಪ್ರತಿ ಕಿಲೋ ಮಾರಾಟದಲ್ಲಿ ಕೃಷಿಕನಿಗೆ 5 ರಿಂದ 10 ರೂ. ಇನ್ಸೆಂಟೀವ್ ಕೂಡ ಲಭಿಸಲಿದೆ. ಕೃಷಿಕ ತನಗೆ ಬೇಕಾದ ಬೀಜವನ್ನು ಖರೀದಿಸಲೂ ಮೇಳದಲ್ಲಿ ಅವಕಾಶಗಳಿವೆ.
45 ರೀತಿಯ ಬೀಜಗಳ ಉತ್ಪಾದನೆ ಯಾದ ನಂತರ ಭತ್ತದ ಕೃಷಿ ನಡೆಯಲಿದೆ. ಈ ಯೋಜನೆಯಲ್ಲಿ 2 ವರ್ಷದ ಅವಧಿಯಲ್ಲಿ 75 ರೀತಿಯ ಭತ್ತದ ಉತ್ಪಾದನೆ ಉದ್ದೇಶಿಸಲಾಗಿದೆ. ಈಗಾಗಲೇ ಈ ಯೋಜನೆ ಪ್ರಕಾರ ಕೆಲವು ಕೃಷಿಕರು ಕೊಯ್ಲು ನಡೆಸಿದ್ದು, ಒಟ್ಟು 350 ಕಿಲೋ ಭತ್ತ ಲಭಿಸಿದೆ. ಫೆಬ್ರವರಿ ಎರಡನೇ ವಾರದ ವೇಳೆ ಇತರ ಕೃಷಿಕರೂ ಕೊಯ್ಲು ನಡೆಸಲಿದ್ದಾರೆ. ಈ ಮೂಲಕ 500 ಕಿಲೋ ಭತ್ತ ಲಭಿಸುವ ನಿರೀಕ್ಷೆಯಿದೆ.
ಕೃಷಿಕರಿಗೆ ಬೇಕಾದ ಎಲ್ಲ ರೀತಿಯ ಸಹಾಯಕ್ಕೆ ಇಲ್ಲಿನ ಕೃಷಿ ಇಲಾಖೆ ಸಿದ್ಧವಿದೆ. ಔಷಧೀಯ ಅಂಶ, ಉತ್ತಮ ಗುಣಮಟ್ಟ ಹೊಂದಿರುವ ಭತ್ತದ ಉತ್ಪಾದನೆಯ ಜೊತೆಗೆ ನೂತನ ಜನಾಂಗವನ್ನು ಕೃಷಿ ವಲಯದತ್ತ ಸೆಳೆಯುವ ಮತ್ತು ಆಹಾರ ಸುರಕ್ಷತೆ ಖಚಿತ ಪಡಿಸುವ ಉದ್ದೇಶವೂ ಪಿಲಿಕೋಡ್ ಗ್ರಾ. ಪಂಚಾಯತ್‌ಗೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.