ಪೆರಡಾಲ ಸರಕಾರಿ ಶಾಲೆ: ಕ್ಲಬ್‌ಗಳ ಉದ್ಘಾಟನೆ
Team Udayavani, Jun 27, 2019, 5:44 AM IST
ಬದಿಯಡ್ಕ: ಬಾಲ್ಯದಲ್ಲಿ ಹಿಂದಿನ ಚರಿತ್ರೆ ಕಲಿಯಬೇಕು. ಇದರಿಂದ ವರ್ತಮಾನ ಕಾಲದ ಬದಲಾವಣೆ ಅರಿತು ಉತ್ತಮ ಚರಿತ್ರೆ ಸೃಷ್ಟಿಸಲು ಸಾಧ್ಯ ಎಂದು ಸಾಹಿತಿ, ಚಿಂತಕ ರಾಜನ್ ಮುನಿಯೂರ್ ಹೇಳಿದರು.
ಅವರು ಪೆರಡಾಲ ಸರಕಾರಿ ಪ್ರೌಢಶಾಲೆ ಯಲ್ಲಿ ವಿವಿಧ ಕ್ಲಬ್‌ಗಳನ್ನು ಉದ್ಘಾಟಿಸಿ ಮಾತನಾಡಿದರು. ಸುತ್ತಲಿನ ಪರಿಸರದ ವಿಚಾರಗಳು ಕಥಾವಸ್ತು ಆಗುವ ಬಗೆ ವಿವರಿಸಿ ತಾವು ಬರೆದ ಕಥೆ ಮಂಡಿಸಿದರು. ಪರಿಸರ ರಕ್ಷಣೆ ಮಕ್ಕಳ ಕರ್ತವ್ಯವಾಗಬೇಕಾದ ಅಗತ್ಯವನ್ನು ವಿವರಿಸಿದರು. ಈ ಸಂದರ್ಭ ವಾಚನ ವಾರಾಚರಣೆ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧಾವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮಕ್ಕಳ ಸಾಹಿತ್ಯ ಸೃಷ್ಟಿಯ ಹಸ್ತಪತ್ರಿಕೆ ‘ಕಾಮನಬಿಲ್ಲು’ ಕೃತಿಯನ್ನು ಬಿಡುಗಡೆ ಗೊಳಿಸಲಾಯಿತು. ರಾಜನ್ ಅವರು ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆಯಿತ್ತರು. ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ ಸ್ವಾಗತಿಸಿದರು. ಚಂದ್ರಹಾಸ ನಂಬಿಯಾರ್, ಪ್ರಮೋದ್ ಕುಮಾರ್, ಲಿಬಿಜಾ, ಬಿಂದಿಯಾ ಶುಭಾಶಂಸನೆಗೈದರು. ಲಲಿತಾಂಬಾ, ರಿಶಾದ್, ಚಂದ್ರಶೇಖರ, ದಿವ್ಯಗಂಗಾ, ಬೀನಾ, ಜಯಲತಾ, ಶ್ರೀಧರ ಭಟ್ ಸಹಕರಿಸಿದರು. ಬಿಂದೂ ವಂದಿಸಿದರು. ಶ್ರೀಧರನ್ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.