ಕಾಸರಗೋಡು ಪೆರಡಾಲ ನೂಜಿ ದೈವಂಕೆಟ್ಟು : ಕೂವಂ ಅಳಕಲ್ ಕಾರ್ಯಕ್ರಮ
Team Udayavani, Apr 1, 2019, 3:23 PM IST
ಬದಿಯಡ್ಕ: ಪಿಲಾಂಕಟ್ಟೆ ಸಮೀಪದ ನೂಜಿ ಶ್ರೀ ವಯನಾಟು ಕುಲವನ್ ತರವಾಡಿನಲ್ಲಿ ನಡೆಯಲಿರುವ ತೆಯ್ಯಂಕೆಟ್ಟು ಮಹೋತ್ಸವದ ಅಂಗವಾಗಿ ಕೂವಂ ಅಳಕಲ್ ಕಾರ್ಯಕ್ರಮ ಎ. 1 ರಂದು ಬೆಳಗ್ಗೆ 10.36 ರಿಂದ 12.36 ರ ವರೆಗಿನ ಶುಭ ಮುಹೂರ್ತದಲ್ಲಿ ನಡೆಯಿತು.
ಪೊಡಿಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ಆಚಾರ ಸ್ಥಾನಿಕರು, ತೆಯ್ಯಂಕೆಟ್ಟು ಮಹೋತ್ಸವ ಸಮಿತಿ ಪದಾಧಿಕಾರಿಗಳು, ನೂಜಿ ತರವಾಡು ಸದಸ್ಯರು, ಭಗವದ್ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನೂಜಿ ತರವಾಡಿನಲ್ಲಿ ಶ್ರೀ ವಯನಾಟ್ ಕುಲವನ್ ತೈಯ್ಯಂಕಟ್ಟು ಮಹೋತ್ಸವವು ಎ. 22, 23, 24, 25 ರಂದು ಜರಗಲಿದೆ. 22 ರಂದು ಹಸಿರುವಾಣಿ ಹೊರೆ ಕಾಣಿಕೆ, ಉಗ್ರಾಣ ತುಂಬಿಸುವುದು, 23 ರಂದು ಮುಂಜಾನೆ 5 ರಿಂದ ಕೊರತ್ತಿ ದೈವ, ರಕ್ತ ಚಾಮುಂಡಿ ದೈವ, ವಿಷ್ಣುಮೂರ್ತಿ ದೈವ, ಪಡಿಞಾರ್ ಚಾಮುಂಡಿ ದೈವ, ಗುಳಿಗ ದೈವ ನಡೆಯಲಿದೆ.
24 ರಂದು ಸಂಜೆ 5 ರಿಂದ ಕಾರ್ನವನ್ ದೈವದ ವೆಳ್ಳಾಟ, 7 ರಿಂದ ಕೋರಚ್ಚನ್ ದೈವ, 10 ಕ್ಕೆ ಕಂಡನಾರ್ ದೈವ, 3 ಗಂಟೆಗೆ ವಯನಾಟು ಕುಲವನ್ ದೈವದ ಆಗಮನ, ಚೂಟೊಪ್ಪಿಕಲ್, ಸಾಯಂಕಾಲ 5 ಕ್ಕೆ ವಿಷ್ಣುಮೂರ್ತಿ ದೈವ, ಭಂಡಾರ ನಿರ್ಗಮನ ಮೊದಲಾದ ಕಾರ್ಯಕ್ರಮಗಳು ಜರಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.