ವ್ಯಕ್ತಿತ್ವದಿಂದ ವ್ಯಕ್ತಿ ಜೀವಂತ: ಪ್ರೊ|ಬಾಲಕೃಷ್ಣ ಶೆಟ್ಟಿ
ಎ.ಯು.ಪಿ. ಶಾಲೆಯ ಸಂಸ್ಥಾಪಕ ದಿ| ರಾಮಕೃಷ್ಣ ರಾವ್ ಸಂಸ್ಮರಣೆ
Team Udayavani, Sep 26, 2019, 5:30 AM IST
ಮೀಯಪದವು: ಇಲ್ಲಿನ ವಿದಾವರ್ಧಕ ಎ.ಯು.ಪಿ. ಶಾಲೆಯ ಸಂಸ್ಥಾಪಕ ದಿ| ಎಂ.ರಾಮಕೃಷ್ಣ ರಾವ್ ಅವರ ಸಂಸ್ಮರಣಾ ಕಾರ್ಯಕ್ರಮ ದಿ| ರಾಮಕೃಷ್ಣ ರಾವ್ ಸಭಾ ಭವನದಲ್ಲಿ ಜರಗಿತು. ಮುಖ್ಯ ಅತಿಥಿ ಮಂಗಳೂರು ಶ್ರೀ ರಾಮಕೃಷ್ಣ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ| ಬಾಲಕೃಷ್ಣ ಶೆಟ್ಟಿ ಮಾತನಾಡಿ ರಾಮಕೃಷ್ಣ ರಾವ್ ಒಂದು ಶಾಲೆಯನ್ನು ಪ್ರಾರಂಭಿಸಿ ಊರಿನ ಏಳಿಗೆಯಲ್ಲಿ ಬಹಳ ಪ್ರಮುಖ ಪಾತ್ರವಹಿಸಿದ್ದಾರೆ ವ್ಯಕ್ತಿತ್ವದಿಂದ ವ್ಯಕ್ತಿ ಜೀವನ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ನಿವೃತ್ತ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂರ್ತಿ ಕೆ. ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೈರಂಗಳ ಶಾಲೆಯ ನಿವೃತ್ತ ಶಿಕ್ಷಕ ಕೆ.ನಾರಾಯಣ ಹೊಳ್ಳ ಅವರು ಅತಿಥಿಯಾಗಿ ಭಾಗವಹಿಸಿದ್ದರು. ಸಮಾಜ ಸೇವಕ, ಸಂಘಟಕ ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಸಂಚಾಲಕ ಡಾ| ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರನ್ನು ಸಮ್ಮಾನಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ಸುಧಾಕರ ವಿ, ಸಂಚಾಲಕಿ ರಾಜೇಶ್ವರಿ ಎಸ್.ರಾವ್, ಪಿ.ಟಿ.ಎ. ಅಧ್ಯಕ್ಷ ಕೃಷ್ಣ ಪ್ರಸಾದ್, ಎಂ.ಪಿ.ಟಿ. ಅಧ್ಯಕ್ಷೆ ಕೈರುನ್ನಿಸಾ ಉಪಸ್ಥಿತರಿಸªರು. ಈ ಸಂದರ್ಭದಲ್ಲಿ ದಿ|ರಾಮಕೃಷ್ಣ ರಾವ್ ದತ್ತಿ ನಿಧಿ ಯೋಜನೆಯಿಂದ ಶಾಲಾ ವಿದ್ಯಾರ್ಥಿಗಳಾದ ಚಿದಾಕಾಂತ್ ಮತ್ತು ಲಿಖೀತ್ ಅವರಿಗೆ ನಗದು ಬಹುಮಾನವನ್ನು ನೀಡಲಾಯಿತು.ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ ರಾವ್ ಆರ್.ಎಂ. ಸ್ವಾಗತಿಸಿದರು. ಶಾಲಾ ಅಧ್ಯಾಪಕ ಅರವಿಂದಾಕ್ಷ ಭಂಡಾರಿ ವಂದಿಸಿದರು. ಅಧ್ಯಾಪಕ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರು ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.