ಪಿಣರಾಯಿ ಸರಕಾರದ ಇಬ್ಬಗೆ ನೀತಿ: ಪ್ರತಿಭಟನೆ ಎಚ್ಚರಿಕೆ
Team Udayavani, May 5, 2018, 7:35 AM IST
ಬದಿಯಡ್ಕ: ಮತಾಂಧ ಶಕ್ತಿಗಳ ಬೆದರಿಕೆ ಕರೆಗಳಿಗೆ ಹೆದರಿ ಮೂಲೆಯಲ್ಲಿ ಕೂತುಕೊಳ್ಳುವವರು ಹಿಂದೂ ಸಮಾಜ ಬಾಂಧವರಲ್ಲ. ಪಿಣರಾಯಿ ಸರಕಾರದ ಇಬ್ಬಗೆ ನೀತಿಯನ್ನು ಕೊನೆಗಾಣಿಸದಿದ್ದಲ್ಲಿ ವ್ಯಾಪಕ ಪ್ರತಿಭಟನೆಯನ್ನು ಎದುರಿಸ ಬೇಕಾದೀತು ಎಂದು ಯುವ ನೇತಾರ ಸುನಿಲ್ ಪಿ.ಆರ್. ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅವರು ಬದಿಯಡ್ಕದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಸಂಘಪರಿವಾರದ ಜಂಟಿ ಆಶ್ರಯದಲ್ಲಿ ನಡೆದ ಪ್ರತಿಭಟನ ಮೆರವಣಿಗೆಯನ್ನು ದ್ದೇಶಿಸಿ ಮಾತನಾಡಿದರು.ಎ. 27ರಂದು ಬದಿಯಡ್ಕದಲ್ಲಿ ನಡೆದ ಐತಿಹಾಸಿಕ ವಿರಾಟ್ ಹಿಂದೂ ಸಮಾಜೋ ತ್ಸವಕ್ಕೆ ದೊರೆತ ಅಭೂತ ಪೂರ್ವ ಜನಬೆಂಬಲ ಮತೀಯ ತೀವ್ರವಾದಿಗಳ ನಿದ್ದೆಗೆಡಿಸಿದ್ದು, ಸಾಮಾಜಿಕ ಜಾಲತಾಣ ಹಾಗೂ ದೂರವಾಣಿ ಕರೆಗಳ ಮುಖಾಂತರ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣಗೈದ ಹಿಂದೂ ನೇತಾರೆ ಸಾಧ್ವಿ ಬಾಲಿಕಾ ಸರಸ್ವತೀಯವರ ವಿರುದ್ಧ ಅವಹೇಳನ ಹಾಗೂ ಅಶ್ಲೀಲ ಸಂದೇಶಗಳನ್ನು ಬಿತ್ತರಿಸಿರುವುದು ಮತ್ತು ದೂರವಾಣಿ ಕರೆಗಳ ಮೂಲಕ ಬೆದರಿಕೆ ಕರೆಗಳನ್ನು ಮಾಡಿರುವುದು ಹಾಗೂ ಸಾಧ್ವಿಯವರ ಮೇಲೆ ಅನಗತ್ಯವಾಗಿ ಜಾಮೀನು ರಹಿತ ಕೇಸು ದಾಖಲಿಸಿರುವುದರ ವಿರುದ್ಧ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬಜರಂಗದಳ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ ಸುರೇಶ್ ಶೆಟ್ಟಿ ಪರಂಕಿಲ, ವಿಶ್ವ ಹಿಂದೂ ಪರಿಷತ್ ಬದಿಯಡ್ಕ ಪ್ರಖಂಡ ಅಧ್ಯಕ್ಷ ಬಿ.ಲಕ್ಷ್ಮಣ ಪ್ರಭು ಕರಿಂಬಿಲ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ನೇತಾರ ಸಂಕಪ್ಪ ರೈ ಬಳ್ಳಂಬೆಟ್ಟು, ನೇತಾರರಾದ ಹರೀಶ್ ನಾರಂಪಾಡಿ, ರವೀಂದ್ರ ರೈ ಗೋಸಾಡ, ಶಶಿಧರ ತೆಕ್ಕೆಮೂಲೆ, ಹರಿಪ್ರಸಾದ್ ರೈ ಪುತ್ರಕಳ, ಮಹೇಶ್ ವಳಕ್ಕುಂಜ, ಬಾಲಕೃಷ್ಣ ಶೆಟ್ಟಿ ಕಡಾರು, ವಿಶ್ವನಾಥ ಪ್ರಭು ಕರಿಂಬಿಲ, ಅವಿನಾಶ್ ರೈ ಬದಿಯಡ್ಕ, ಬಜರಂಗದಳ ಬದಿಯಡ್ಕ ಪ್ರಖಂಡ ಸಂಚಾಲಕ ಸುನಿಲ್ ಶೆಟ್ಟಿ ಕಿನ್ನಿಮಾಣಿ, ವಿಶ್ವ ಹಿಂದೂ ಪರಿಷತ್ ಬದಿಯಡ್ಕ ಪ್ರಖಂಡ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಪಟ್ಟಾಜೆ ಪ್ರತಿಭಟನಾ ಮೆರವಣಿಗೆಯಲ್ಲಿ ಜತೆಗಿದ್ದರು. ಬದಿಯಡ್ಕ ಗಣೇಶ ಮಂದಿರದಿಂದ ಆರಂಭವಾದ ಮೆರವಣಿಗೆಯು ಪೇಟೆಯಲ್ಲಿ ಸಂಪನ್ನಗೊಂಡಿತು. ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.