ಬದಿಯಡ್ಕ ಕೆಳಗಿನ ಪೇಟೆ ಬಳಿ ಪ್ಲಾಸ್ಟಿಕ್‌ ಮಾಲಿನ್ಯ


Team Udayavani, Aug 16, 2017, 6:45 AM IST

15ksde15b.jpg

ಬದಿಯಡ್ಕ: ಭಾರತ ಸ್ವತಂತ್ರವಾಗಿ ಎಪ್ಪತ್ತು ವರ್ಷ ಗಳು ತುಂಬಿವೆ. ಪರರ ಆಳ್ವಿಕೆಯ ಕಪಿಮುಷ್ಟಿಗೆ ಸಿಲುಕಿ ಸರ್ವಸ್ವವನ್ನು ಕಳೆದುಕೊಂಡು ಬಡರಾಷ್ಟ್ರವಾಗಿ ನಲುಗಿದ ನಮ್ಮ ದೇಶವು ಇಂದು ಸಾಧನೆಯ ಪಥದಲ್ಲಿ ಮಹತ್ತರವಾದ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಾ ಜಗತ್ತೇ ಬೆರಗಾಗುವಂತೆ ಮಾಡಿದೆ. ವಿಜ್ಞಾನ, ತಂತ್ರ ಜ್ಞಾನಗಳು ಆಧುನಿಕತೆಯ ಉತ್ತುಂಗಕ್ಕೆ ದೇಶವನ್ನು ತಂದು ನಿಲ್ಲಿಸಿದೆ.

ಜನಸಂಖ್ಯೆ ಅತಿಯಾಗಿದ್ದರೂ ಅದೊಂದು ಸಮಸ್ಯೆ ಯಾಗದೆ ದೇಶದ ಸೊತ್ತಾಗಿ ಪರಿವರ್ತಿಸಿರುವುದು ನಮ್ಮ ಅಭಿವೃದ್ಧಿಗೊಂದು ಕಾರಣವೆನ್ನಬಹುದು. ಮಳೆಗಾಲ ಎಂದರೆ ಬೇಸಗೆಯ ಬಿಸಿ ಕಡಿಮೆಯಾಗಿ ಇಳೆ ಪ್ರಸನ್ನಳಾಗುವ ಸಮಯ. ಮರಗಿಡಗಳು ಚಿಗುರಿ ಪ್ರಕೃತಿ ಹಸಿ ರಾಗಿ ಕಂಗೊಳಿಸುವ ಕಾಲ. ಸೆಕೆ, ನೀರಿನ ಸಮಸ್ಯೆಗಳಿಂದ ಬೇಸತ್ತ ಮನಸ್ಸುಗಳು ಸಮಾಧಾನದ ನಿಟ್ಟುಸಿರು ಬಿಡುವ ಸಮಯ. ತಂಗಾಳಿಗೆ ತಲೆದೂಗುವ ನಿಸರ್ಗದ ರಮಣೀಯತೆ ಮಾತಿಗೆ ನಿಲುಕದ್ದು. ಆದರೆ ನಮ್ಮನ್ನು ಕಾಡುವ ಕೆಲವು ಸಾಮಾನ್ಯ ಸಂಗತಿಗಳನ್ನು ನಾವು ಅಲ್ಲಗಳೆಯುವಂತಿಲ್ಲ.

ಆರೋಗ್ಯ ಸಮಸ್ಯೆಗಳು
ಮಳೆಗಾಲ ಪ್ರಾರಂಭ ವಾದಂತೆ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ಸಣ್ಣ ಶೀತ,ಜ್ವರದಿಂದ ಹಿಡಿದು ಮಲೇರಿಯಾ, ಡೆಂಗ್ಯೂ, ಆನೆಕಾಲು,  ಕಾಮಾಲೆಗಳಂತಹ ಮಾರಕ ರೋಗಗಳು ಈ ಸಮಯದಲ್ಲಿ ಜನರಲ್ಲಿ ಕಾಣಿಸಿಕೊಂಡು ಆತಂಕ ಪಡಿಸುತ್ತವೆ. ಆದುದರಿಂದ ಮಳೆಗಾಲದಲ್ಲಿ ತುಂಬಾ ಜಾಗೃತರಾಗಿರಬೇಕಾದ ಅಗತ್ಯವಿದೆ. ಆರೋಗ್ಯ ಕೇಂದ್ರ ದಿಂದ ನೀಡುವ ರೋಗ ಪ್ರತಿರೋಧಕ ಮಾತ್ರೆಗಳನ್ನು ಸ್ವೀಕರಿಸುವುದರೊಂದಿಗೆ ಅವರು ನೀಡುವ ಸಲಹೆಗಳನ್ನೂ ಪಾಲಿಸಲು ಮರೆಯಬಾರದು. ಅಂತೆಯೇ ನಮ್ಮ ಪರಿಸರ ವನ್ನು ಶುಚಿಯಾಗಿಡುವುದೂ ಅಷ್ಟೇ ಮುಖ್ಯ. ಪ್ಲಾಸ್ಟಿಕ್‌ ತ್ಯಾಜ್ಯದಿಂದುಂಟಾಗುವ ಸಮಸ್ಯೆಗಳು”ಸ್ವತ್ಛ ಭಾರತ್‌’ ಭಾರತೀಯರನ್ನು ಎಷ್ಟರಮಟ್ಟಿಗೆ ಎಚ್ಚರಗೊಳಿಸಿದೆ ಎನ್ನುವುದು ಇನ್ನೂ ಒಗಟಾಗಿದೆ. ಸ್ವತ್ಛತೆಯ ಮುಗಿಲು ಮುಟ್ಟಿದರೂ ಜನರು ಕಿವುಡಾದಂತೆ ನಟಿಸಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ನಂಥ ಅಪಾಯಕಾರಿ ತ್ಯಾಜ್ಯಗ ಳನ್ನು, ಕಸಾಯಿಖಾನೆಯ ತ್ಯಾಜ್ಯಗಳನ್ನು ಎಸೆದು ಇಡೀ ಪ್ರದೇಶವೇ ವಾಸನೆಯಿಂದ ತುಂಬುವಂತೆ ಮಾಡುತ್ತಿರುವುದಲ್ಲದೆ ಅನೇಕ ರೋಗಗಳಿಗೂ ಕಾರಣರಾಗುತ್ತಿರು ವುದು ವಾಸ್ತವ. ಯಥೇತ್ಛವಾಗಿ ಮಾರುಕಟ್ಟೆಯಲ್ಲಿ ಲಭಿಸುವ ತಂಪು ಪಾನೀಯಗಳು, ಲಕೋಟೆಯಲ್ಲಿ ತುಂಬಿದ ಬಿಸ್ಕತ್ತು, ಕರಿದ ತಿಂಡಿಗಳು, ಹಾಗೆಯೇ ಮನೆಗಳಿಗೆ ಅಗತ್ಯದ ಸಾಮಾನುಗಳನ್ನು ತುಂಬಿ ತಂದ ಪ್ಲಾಸ್ಟಿಕ್‌ ಚೀಲಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು ನಮಗೆ ಅಭ್ಯಾಸ ವಾಗಿಬಿಟ್ಟಿದೆ. ಮಳೆ ಪ್ರಾರಂಭವಾದಾಗ ಇವುಗಳಲ್ಲಿ ನೀರು ತುಂಬಿನಿಂತು ನುಸಿಗಳು ಮೊಟ್ಟೆಯಿಡಲು ಅನುಕೂಲವಾಗುತ್ತದೆ. ಇದು ರೋಗಾಣುಗಳ ಉತ್ಪಾದನಾ ಕೇಂದ್ರವಾಗಿ ಬದಲಾಗು ತ್ತದೆ. ಅಂತೆಯೇ ಭೂಮಿಯಲ್ಲಿ ಸೇರಿಕೊಂಡ ಪ್ಲಾಸ್ಟಿಕ್‌ ಕವರುಗಳು ಭೂಮಿಯಲ್ಲಿ ನೀರಿಂಗುವುದನ್ನೂ ತಡೆಯು ವುದರಿಂದ ಅಂತರ್ಜಲ ಮಟ್ಟವು ಕುಸಿಯಲು ಕಾರಣವಾಗುತ್ತದೆ.

ಪರಿಸರ ಸ್ವತ್ಛವಾಗಿಡಬೇಕು
ಮನೆಯ ಸುತ್ತುಮುತ್ತು ಸ್ವತ್ಛವಾಗಿಡುವುದರಿಂದ ಮಳೆಗಾಲದಲ್ಲಿ ಬರುವ ಹಲವಾರು ಆರೋಗ್ಯ ಸಮಸ್ಯೆಗಳನ್ನು ತಡೆಯ ಬಹುದಾಗಿದೆ. ಸಾಮಾನ್ಯ ವಾಗಿ ಮನೆಯ ಸುತ್ತಮುತ್ತ ಕಂಡುಬರುವ ಗೆರಟೆ, ಆಟಿಕೆಗಳು, ಉಪಯೋಗ ಶೂನ್ಯವಾದ ಪ್ಲಾಸ್ಟಿಕ್‌ ಅಥವಾ ಇನ್ನಿತರ ಪಾತ್ರೆಗಳನ್ನು ಕವುಚಿ ಹಾಕಿದಲ್ಲಿ ನೀರು ತುಂಬಿನಿಂತು ರೋಗಾಣು ಉತ್ಪತ್ತಿ ಯಾಗುವುದನ್ನು ತಡೆಯಬಹುದು. ಇತರರಿಗೂ ಇಂತಹ ಉತ್ತಮ ಆರೋಗ್ಯಪೂರ್ಣ ಸಲಹೆಗಳನ್ನು ನೀಡಲು ಮರೆಯಬಾರದು.ಅಭಿವೃದ್ಧಿ ಹೊಂದಿದ ದೇಶಗಳ ನಡುವೆ ಒಂದಾಗಿ ನಿಲ್ಲಲು ಸಾಧ್ಯವಾದರೂ ನಮ್ಮ ದೇಶ ಇನ್ನೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ ಎನ್ನುವುದನ್ನು ಅಲ್ಲಗಳೆ ಯುವಂತಿಲ್ಲ. ನಿರುದ್ಯೋಗ, ಬಡತನ, ಬರಗಾಲಗಳು ಸವಾಲಾಗಿ ನಿಂತಿವೆ. ಆದರೂ ಅಭಿವೃದ್ಧಿಯ ಪಥದಲ್ಲಿ ನಮ್ಮ ಯಾತ್ರೆಯು ಬರದಿಂದ ಸಾಗುತ್ತಿದ್ದು ಸಂಪೂರ್ಣ ಅಭಿವೃದ್ಧಿಯನ್ನು ಕೆಲವೇ ವರ್ಷಗಳಲ್ಲಿ ಗಳಿಸಬಹುದು ಎಂಬುದು ಭಾರತೀಯರ ನಂಬಿಕೆ ಸ್ವತ್ಛ ಭಾರತ ಅಭಿಯಾನ ಭಾರತಾದ್ಯಂತ ನಡೆಯುತ್ತಿದ್ದರೂ ಕೆಲವೊಂದು ಮಾಲಿನ್ಯಗಳು ಬಹು ದೊಡ್ಡ ಆತಂಕ ಕಾರಿ ವಿಷಯವಾಗಿ ಸಮಾಜದ, ದೇಶದ ನೆಲ, ಜಲವನ್ನು ತನ್ನ ಕದಂಬ ಬಾಹುಗಳಲ್ಲಿ ಬಂಧಿಸಿರುವುದು ಸಾಮಾನ್ಯ ವಿಷಯವಲ್ಲ. ಅದುವೇ ಪ್ಲಾಸ್ಟಿಕ್‌ ಮಾಲಿನ್ಯಗಳು. 

ದೃಢ ಸಂಕಲ್ಪ ಅಗತ್ಯ
ಈ ಸಮಸ್ಯೆಗಳ ಜಾಲದಿಂದ ಹೊರಬರಲು ಪ್ರತಿಯೊಬ್ಬ ಭಾರತೀಯನೂ ಮನಸ್ಸು ಮಾಡಬೇಕು, ಸಮಸ್ಯೆಯ ಗಾಂಭೀರ್ಯದ ಅರಿವಿದ್ದರೂ ಜನರು ಎಚ್ಚೆತ್ತುಕೊಳ್ಳದಿರುವುದು ಕುಚೋದ್ಯವೇ ಸರಿ ಯಾವುದನ್ನು ಮಾಡಬಾರದೆಂದು ಅಂದುಕೊಳ್ಳುತ್ತೇವೋ ಅದನ್ನೇ ಮಾಡುವ ಮನಸ್ಸುಗಳು ಬದಲಾಗಿ ನಮ್ಮ ಭಾರತವನ್ನು ಸ್ವತ್ಛವಾಗಿಡ ಬೇಕೆಂಬ ದೃಢಸಂಕಲ್ಪ ಮೂಡಬೇಕಾದರೆ ಮನೆ ಹಾಗೂ ಮನಸ್ಸು ಮೊದಲು ಸ್ವತ್ಛವಾಗಬೇಕು. ಆಗ ಪ್ಲಾಸ್ಟಿಕ್‌ ಹಾಗೂ ಇತರ ಮಾಲಿನ್ಯಮುಕ್ತ ಭಾರತ ದೇಶದ, ರಾಮರಾಜ್ಯದ ಕನಸು ನನಸಾಗಲು ಹೆಚ್ಚು ಕಾಲ ಕಾಯಬೇಕಾಗಿಲ್ಲ.

ಪ್ರತಿಯೊಬ್ಬರೂ ಕೈಜೋಡಿಸಲಿ
ರಸ್ತೆಯ ಬದಿಯಲ್ಲಿ ಧಾರಾಳ ಪ್ಲಾಸ್ಟಿಕ್‌ ತ್ಯಾಜ್ಯಗಳು ತುಂಬಿದ್ದು ಆದಷ್ಟು ಬೇಗ ಅದನ್ನು ತೆರವುಗೊಳಿಸುವಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ಹಾಗೂ ಇನ್ನಿತರ ಪರಿಸರ ಪ್ರೇಮಿ ಸಂಘಟನೆಗಳು ಮುಂದಾಗಬೇಕಾಗಿದೆ. ಜತೆಯಲ್ಲಿ ಭಾರತೀಯರೆಲ್ಲರೂ ಕೈಜೋಡಿಸಿದಲ್ಲಿ ಸ್ವತ್ಛ ಆರೋಗ್ಯವಂತ ಭಾರತದ ಕನಸು ನನಸಾಗಲು ಹೆಚ್ಚು  ಸಮಯ ಬೇಕಾಗಿಲ್ಲ.

– ಅಖೀಲೇಶ್‌ ನಗುಮುಗಂ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

6

Arrested: ಪತ್ನಿಯ ಕೊ*ಲೆಗೆ ಯತ್ನ; ಪತಿಯ ಬಂಧನ

Kasargod: ಕೊ*ಲೆ ಯತ್ನ: ನಾಲ್ವರ ಬಂಧನ

Kasargod: ಕೊ*ಲೆ ಯತ್ನ: ನಾಲ್ವರ ಬಂಧನ

Arrested: ಹಲವು ಪ್ರಕರಣಗಳ ಆರೋಪಿ ಬಂಧನ

Arrested: ಹಲವು ಪ್ರಕರಣಗಳ ಆರೋಪಿ ಬಂಧನ

Kasargod: ವಿದ್ಯಾರ್ಥಿಗೆ ಹಲ್ಲೆ: ಇಬ್ಬರಿಗೆ ಸಜೆ, ದಂಡ

Kasargod: ವಿದ್ಯಾರ್ಥಿಗೆ ಹಲ್ಲೆ: ಇಬ್ಬರಿಗೆ ಸಜೆ, ದಂಡ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.