ಸ್ವಚ್ಛ ಭಾರತಕ್ಕೆ ಸವಾಲಾದ ಪ್ಲಾಸ್ಟಿಕ್ ಸಮಸ್ಯೆ:ನಾವೇನು ಮಾಡಬೇಕು?
Team Udayavani, May 17, 2018, 6:25 AM IST
ಇತ್ತೀಚೆಗೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದು ಬಹಳವಾಗಿ ಗಮನ ಸೆಳೆದಿತ್ತು. “ಬ್ರಿಟನ್ ವಿಜ್ಞಾನಿಗಳಿಂದ ಪ್ಲಾಸ್ಟಿಕ್ ತಿನ್ನುವ ಕಿಣ್ವ ಸೃಷ್ಟಿ, ಪ್ಲಾಸ್ಟಿಕ್ ಭೂತಕ್ಕೆ ರಾಮಬಾಣ’ ಎಂಬ ತಲೆ ಬರಹದಡಿಯಲ್ಲಿ ಪ್ರಕಟವಾದ ವರದಿಯಲ್ಲಿ ಮನುಷ್ಯನ ಜೀವನದ ಅವಿಭಾಜ್ಯ ಅಂಗವೆಂಬತಾಗಿರುವ ಪ್ಲಾಸ್ಟಿಕ್ ಅನ್ನು ತಿಂದು ಮುಗಿಸುವ ಹೊಸ ಕಿಣ್ವಗಳನ್ನು ಇಂಗ್ಲೆಂಡ್‌ನ ಹ್ಯಾಂಪ್‌ಶೈರ್ ಜಿಲ್ಲೆಯ ಪೋರ್ಟ್ಸ್ ಮೌಟ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸೃಷ್ಟಿಸಿದ್ದು, ಪರಿಸರ ಸ್ವಾಸ್ಥ್ಯ ವಿಚಾರದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ ಎಂಬುದನ್ನು ತಿಳಿದಾಗ ಸಂತೋಷ ಪಡುವಂತಾದರೂ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮದ ಅರಿವಿಲ್ಲದೆ ಎಗ್ಗಿಲ್ಲದಂತೆ ಬಳಕೆಯಾಗುವ ಈ ಪ್ಲಾಸ್ಟಿಕ್ ಭೂತವನ್ನು ಅಷ್ಟು ಸುಲಭದಲ್ಲಿ ಹೊಡೆದೋಡಿಸಲು ಸಾಧ್ಯವೇ ಎಂಬುದು ಪ್ರಶ್ನೆಯಾಗಿಯೇ ಕಾಡುತ್ತದೆ.
ಎಲ್ಲವೂ ಪ್ಲಾಸ್ಟಿಕ್‌ಮಯ
ನಮ್ಮ ದಿನನಿತ್ಯದ ಪ್ರತಿಯೊಂದು ಕೆಲಸ ಕಾರ್ಯಗಳ ಲ್ಲಿಯೂ ಪ್ಲಾಸ್ಟಿಕ್‌ನ ಬಳಕೆ ಹಾಸುಹೊಕ್ಕಾಗಿದೆ. ಅಡುಗೆ ಮನೆ ಯಲ್ಲಿ ಬಳಸುವ ಸಂಬಾರ ಪದಾರ್ಥ, ಎಣ್ಣೆ, ತರ ಕಾರಿ ಮೀನು ಮಾಂಸಗಳಿಂದ ಹಿಡಿದು ಬೇಕರಿಯ ತಿಂಡಿ ಗಳೆಲ್ಲವೂ ಪ್ಲಾಸಿಕ್ ಲಕೋಟೆಗಳಲ್ಲಿಯೇ ಲಭಿಸುತ್ತಿವೆ. ಕುಡಿಯುವ ನೀರಿನಿಂದ ಹಿಡಿದು ಔಷಧ ಬಾಟಲಿಗಳೂ ತಂಪು ಪಾನೀಯಗಳು ಪ್ಲಾಸ್ಟಿಕ್‌ನಿಂದಲೇ ನಿರ್ಮಿತವಾಗಿದೆ. ಬಟ್ಟೆ ಅಂಗಡಿಯಿಂದ ಹಿಡಿದು ಪುಸ್ತಕಗಳ ಅಂಗಡಿ ವರೆಗೂ ಪ್ಲಾಸ್ಟಿಕ್ ತನ್ನ ಕದಂಬ ಬಾಹುಗಳನ್ನು ಚಾಚಿದೆ. ವಿವಾಹ ಸಮಾರಂಭಗಳಲ್ಲಿ ತಲೆಗೊಂದರಂತೆ ಪ್ಲಾಸ್ಟಿಕ್ ಬಾಟಲಿನಲ್ಲಿ ನೀರು ನೀಡುವುದು ಫ್ಯಾಶನ್ ಆಗಿ ಬಿಟ್ಟಿದೆ.ಕೆಲವೊಮ್ಮೆ ಅಗತ್ಯವಿದ್ದು, ಹಲವು ಬಾರಿ ಅಗತ್ಯವಿಲ್ಲದೆಯೇ ಪ್ಲಾಸ್ಟಿಕ್ ಎಂಬ ಪೆಡಂಭೂತವನ್ನು ನಾವು ಭೂಮಿಗೆ ತ್ಯಾಜ್ಯವಾಗಿ ಕೊಡುವಲ್ಲಿ ಬಲು ವೇಗವಾಗಿ ಸಾಗುತ್ತಿದ್ದೇವೆ. ಮನೆಗಳಲ್ಲಿ ಶಾಲೆ ಕಾಲೇಜುಗಳಲ್ಲಿ ಅಂಗಡಿ, ಹೊಟೇಲ್, ಕಚೇರಿಗಳಲ್ಲಿ ದಿನಕ್ಕೆ ಕೆ.ಜಿ.ಗಟ್ಟಲೆ ಪ್ಲಾಸ್ಟಿಕ್‌ಗಳು ಶೇಖರಣೆಯಾಗುತ್ತಿವೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಏನು ಮಾಡಬೇಕೆಂಬುದೇ ಎಲ್ಲರ ಮುಂದಿರುವ ಪ್ರಶ್ನೆ.
ಶಾಲೆಗಳಲ್ಲೂ ಪ್ಲಾಸ್ಟಿಕ್ ಸಮಸ್ಯೆ ಪೆಡಂಭೂತವಾಗಿ ಕಾಡುತ್ತಿದೆ. ವಿದ್ಯಾರ್ಥಿಗಳಲ್ಲಿ ಎಷ್ಟೇ ಅರಿವು ಮೂಡಿಸಿದರೂ ಶಾಲೆಗಳ ಸಮೀಪದಲ್ಲೇ ಅಗ್ಗದಲ್ಲಿ ಸಿಗುವ ಪೆಪ್ಸಿಕ್ಯಾಂಡಿ, ಕುರುಕಲು ತಿಂಡಿಗಳನ್ನು ತಿಂದು ಕಸದ ಬುಟ್ಟಿ ಸೇರುವ ಪ್ಲಾಸ್ಟಿಕ್ ತ್ಯಾಜ್ಯದ ವಿಲೇವಾರಿ ಹೇಗೆಂದು ತೋಚದಾಗಿದೆ. ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗುವುದಿಲ್ಲ. ಅದನ್ನು ಸುಡುವುದು ಹಾನಿಕಾರಕ ಎಂದಾದ ಮೇಲೆ ಈ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಏನು ಪರಿಹಾರ ಎಂಬುದು ಉತ್ತರವಿಲ್ಲದ ಪ್ರಶ್ನೆಯಾಗಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡ ಬೇಕೇನೋ ನಿಜ. ಆದರೆ ಅದರ ಪ್ರಯತ್ನ ಸಮಾರೋಪಾದಿಯಲ್ಲಿ ನಡೆಯದಿದ್ದರೆ, ಎಲ್ಲೆಲ್ಲೂ ಧಾರಾಳವಾಗಿ ಪ್ಲಾಸ್ಟಿಕ್ ಕೈ ಗೆಟಕುವಂತಿದ್ದರೆ ಹೇಗೆ ತಾನೇ ಕಡಿಮೆ ಮಾಡಲು ಸಾಧ್ಯ? ಸ್ವಪ್ರಜ್ಞೆ ಜಾಗೃತಿಯಾಗಬೇಕಾದರೂ ಸ್ವಲ್ಪ ಬಿಸಿಮುಟ್ಟಬೇಕಾದ ಅಗತ್ಯವಿಲ್ಲವೇ?
ಇಂದು ಕೆಲವೆಡೆ ದೊಡ್ಡ ದೊಡ್ಡ ಮಾಲ್‌ಗಳಿಗೆ ಹೋದಾಗ ನಾವು ಖರೀದಿಸಿದ ವಸ್ತುಗಳನ್ನು ಹೊತ್ತೂಯ್ಯುವ ಬ್ಯಾಗಿಗೆ ಹಣ ಪಡೆಯುತ್ತಾರೆ. ಇದರಿಂದಾಗಿ ಮಾಲ್‌ಗಳಿಗೆ ಹೋದಾಗ ಮನೆಯಿಂದಲೇ ಒಂದು ಬ್ಯಾಗ್ ಹೊತ್ತೂಯ್ಯಬೇಕೆಂಬ ಪ್ರಜnೆ ಕೆಲವರಲ್ಲಾದರೂ ಮೂಡಿದೆ. ಈ ವ್ಯವಸ್ಥೆ ಪ್ರತಿಯೊಂದು ಅಂಗಡಿ ಮಾರುಕಟ್ಟೆಗಳಲ್ಲಿ ಜಾರಿಯಾದಾಗ ಮಾತ್ರ ಜನರಲ್ಲಿ ಸಣ್ಣ ಮಟ್ಟದ ಪ್ರಜ್ಞೆ ಬೆಳೆಯಲು ಸಾಧ್ಯ.
ರಾಷ್ಟ್ರಪಿತ ಮಹಾತ್ಮಾಗಾಂಧಿಜೀಯವರು ಆರಂಭಿಸಿದ, ಪ್ರಧಾನಿ ನರೇಂದ್ರ ಮೋದಿಯವರು ಮುಂದುವರಿಸಿದ ಸ್ವತ್ಛ ಭಾರತದ ಕನಸು ಪ್ರತಿಯೊಬ್ಬ ಭಾರತೀಯನಿಗಿದೆ. ಆದರೆ ಅದಕ್ಕೆ ಸರಿಯಾದ ವ್ಯವಸ್ಥೆ ಬೇಡವೇ? ಸ್ವತ್ಛ ಭಾರತ ಅಭಿಯಾನ ಜಾರಿಯಾದಾಗ ವಿದ್ಯಾಲಯಗಳಿಂದಲೂ ಪ್ಲಾಸ್ಟಿಕ್ ಸಂಗ್ರಹಿಸಿ ಆಯಾ ಗ್ರಾಮ ಪಂಚಾಯತ್‌ಗೆ ಹಸ್ತಾಂತರಿಸುವ ಕಾರ್ಯಭರದಿಂದ ಸಾಗಿತ್ತು. ಆದರೆ ಅದೊಂದು ಕೇವಲ ಫೋಟೋ ತೆಗೆಸಿ ಪತ್ರಿಕೆಗೆ ಕೊಡುವುದಷ್ಟಕ್ಕೇ ಸೀಮಿತವಾದುದು ಮಾತ್ರ ವಿಷಾದನೀಯ. ಅಲ್ಲಲ್ಲಿ ಬಿಸಾಡಿರುವ ಪ್ಲಾಸ್ಟಿಕನ್ನು ತೊಳೆದು ಸಂಗ್ರಹಿಸಿಟ್ಟ ಮಕ್ಕಳಿಗೆ ಪಾರಿತೋಷಕ ನೀಡುವುದಾಗಿಯೂ ಘೋಷಿಸಲಾಗಿತ್ತು. ಕೆಲವು ಮಕ್ಕಳಂತೂ ಬಹಳ ನಿಷ್ಠೆಯಿಂದ ಈ ಕೆಲಸ ಮಾಡಿದ್ದರು.ಆದರೆ ಅದನ್ನು ತೆಗೆದುಕೊಂಡು ಹೋಗುವ ಯಾವುದೇ ಕೆಲಸ ನಡೆಯದಿದ್ದುದು ಮಕ್ಕಳಿಗೆ ನಿರಾಸೆಯನ್ನುಂಟು ಮಾಡಿತು.
ನಗರ ಪ್ರದೇಶಗಳಲ್ಲಿ ಇಂದು ಹಲವೆಡೆ ತ್ಯಾಜ್ಯ ವಿಲೇವಾರಿಯ ಗಾಡಿಗಳು ಮನೆಮನೆಗೆ ಬಂದು ತ್ಯಾಜ್ಯಗಳನ್ನು ಹೊತ್ತೂಯ್ಯುವ ಕೆಲಸ ಮಾಡುತ್ತಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಈ ತ್ಯಾಜ್ಯಗಳನ್ನು ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ. ಇಂದು ಹೆಚ್ಚಿನ ಮನೆಯವರು ಮತ್ತು ಅಂಗಡಿ ಹೊಟೇಲ್‌ಗಳ ತ್ಯಾಜ್ಯಗಳನ್ನು ರಸ್ತೆಗಳ ಬದಿಗಳಲ್ಲಿ ಬಿಸಾಡುವುದು ಸರ್ವೇ ಸಾಮಾನ್ಯವಾಗಿದೆ. ಇದರಿಂದಾಗಿ ಕೆಲವು ಸುಂದರವಾದ ರಸ್ತೆಯ ಇಕ್ಕೆಲಗಳು ದುರ್ನಾತ ಬೀರುತ್ತಿವೆ. ಕಸವನ್ನು ಎಲ್ಲಿ ಹಾಕಲಿ? ಯಾರು ವಿಲೇವಾರಿ ಮಾಡುತ್ತಾರೆ ಎಂಬ ಪ್ರಶ್ನೆಗೆ ಜನಪ್ರತಿನಿಧಿಗಳೂ ಉತ್ತರಿಸುತ್ತಿಲ್ಲ. ನಮಗೆ ಗೊತ್ತಿರುವಂತೆ ಕೆಲವು ಮಾಲ್‌ಗಳಲ್ಲಿ ಪಾರ್ಕುಗಳಲ್ಲಿ ಯಾರು ಕಸವನ್ನು ಎಲ್ಲೆಂದರಲ್ಲಿ ಎಸೆಯುವುದಿಲ್ಲ. ಯಾಕೆಂದರೆ ಅಲ್ಲÉಲ್ಲಿ ಕಸದ ಬುಟ್ಟಿಗಳಿವೆ. ಕೈಯಲ್ಲಿದ್ದ ಕಸವನ್ನು ಅದರಲ್ಲಿಯೇ ಹಾಕಬೇಕೆಂದು ಬಹುತೇಕರಿಗೆ ತೋಚುತ್ತದೆ. ಇದಕ್ಕೆ ಹೊರತಾದ ಕೆಲವು ವಿಕೃತ ಮನಸ್ಸಿನವರು ಇರಬಹುದು.
ಆದರೆ ಬದಲಾವಣೆಯಂತೂ ಖಂಡಿತಾ ಸಾಧ್ಯವಿದೆ.
ನಮ್ಮಲ್ಲೂ ಪ್ಲಾಸ್ಟಿಕ್ ನಿಷೇಧ ಸುಲಭದ ಕೆಲಸವಲ್ಲ. ಯಾಕೆಂದರೆ ಬಲು ದೊಡ್ಡ ಉದ್ಯಮವಾಗಿ ಬೆಳೆದಿರುವ ಪ್ಲಾಸ್ಟಿಕ್ ತಯಾರಿಯ ನಿಷೇಧದಿಂದ ಕೋಟ್ಯಂತರ ರೂ. ನಷ್ಟ ಉಂಟಾಗಬಹುದು. ಅದೆಷ್ಟೋ ಪ್ಲಾಸ್ಟಿಕ್ ಉತ್ಪನ್ನ ಕಂಪೆನಿಗಳು ಮುಚ್ಚಿ ಹೋಗುವುದರಿಂದ ಸಾವಿರಾರು ಜನ ಉದ್ಯೋಗ ಕಳೆದುಕೊಳ್ಳಬಹುದು. ಅಲ್ಲದೆ ಕಾನೂನುಗಳನ್ನು ಮುರಿಯುವ ಪರಿಸರವನ್ನು ಬೇಕೆಂದೇ ಮಲಿನಗೊಳಿಸುವ ವಿಘ್ನ ಸಂತೋಷಿಗಳ ಸಂಖ್ಯೆಯೂ ನಮ್ಮಲ್ಲಿ ಹೆಚ್ಚಾಗಿದೆ.
ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ಅಲ್ಲದಿದ್ದರೂ ಆಂಶಿಕವಾಗಿಯಾದರೂ ನಿಷೇಧಿಸುವ ಆಗತ್ಯವಿದೆ. ಈ ಉದ್ಯಮದಿಂದ ಕೆಲಸ ಕಳೆದುಕೊಳ್ಳುವವರಿಗೆ ಬದಲಿ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ. ಗ್ರಾಮೀಣ ಪ್ರದೇಶಗಳಲ್ಲೂ ತ್ಯಾಜ್ಯವನ್ನು ಸುರಿಯಲು ಪಂಚಾಯತ್ ವ್ಯಾಪ್ತಿಯಲ್ಲಿ ಕಸದತೊಟ್ಟಿ ಮತ್ತು ಅದರ ಸಮರ್ಪಕ ವಿಲೇವಾರಿಯು ಶೀಘ್ರದಲ್ಲಿ ಆಗಬೇಕಾಗಿದೆ.ತ್ಯಾಜ್ಯ ವಿಲೇವಾರಿಯು ಹಲವು ಜನರಿಗೆ ಉದ್ಯೋಗವನ್ನು ಸೃಷ್ಟಿಸುತ್ತದೆ. ಅದಕ್ಕಾಗಿ ಒಂದು ಸಣ್ಣ ಮೊತ್ತವನ್ನು ಪ್ರತಿಯೊಂದು ಮನೆ ಅಂಗಡಿ ಕಚೇರಿ, ಹೊಟೇಲ್‌ಗಳಿಂದ ಪಡೆದುಕೊಂಡಾಗ ಬೀದಿ ಬದಿಯಲ್ಲಿ ಕಸ ಎಸೆಯುವರ ಸಂಖ್ಯೆ ಕಡಿಮೆಯಾಗಬಹುದು, ಸ್ವತ್ಛ ಭಾರತದ ಕಲ್ಪನೆ ಸ್ವಲ್ಪ ಮಟ್ಟಿಗಾದರೂ ಈಡೇರಬಹುದು. ಎಲ್ಲಕ್ಕಿಂತಲೂ ಮಿಗಿಲಾಗಿ ಜನರಲ್ಲಿ ಸ್ವತ್ಛ ಭಾರತದ ಕುರಿತು ಸ್ವಪ್ರಜ್ಞೆ ಬೆಳೆಯಬೇಕಾದ ಅಗತ್ಯವಿದೆ.
ತ್ಯಾಜ್ಯ ಡಬ್ಬ ಅಗತ್ಯ
ನಮ್ಮ ಪ್ರದೇಶಗಳಲ್ಲಿಯೂ 3 ಕಿ.ಮೀ. ಅಂತರದಲ್ಲಿ ಒಂದೊಂದು ತ್ಯಾಜ್ಯವನ್ನು ಹಾಕುವ ಘಟಕಗಳಿದ್ದರೆ ಆದೆಷ್ಟೋ ಜನರು ತ್ಯಾಜ್ಯಗಳನ್ನು ಅಲ್ಲಿಗೆ ತಲುಪಿಸುವ ಮನಸ್ಸು ಮಾಡುತ್ತಿದ್ದರು. ಉಳಿದವರನ್ನೂ ಅಲ್ಲಿಗೆ ತಲುಪಿಸುವ ಮನಸ್ಸು ಮಾಡಿಯಾರು. ಉಳಿದವರನ್ನೂ ಮನವೊಲಿಸಬಹುದು. ಪ್ರಯಾಣ ಮಾಡುವಾಗಲೂ ಕಸವನ್ನು ದಾರಿಬದಿಗೆ ಎಸೆಯಬಾರದೇನೋ ನಿಜ. ಆದರೆ ಅಲ್ಲಿ ಸಂಗ್ರಹವಾದ ಕಸವನ್ನು ಏನು ಮಾಡಬೇಕು ನಾವೇ ಶೇಖರಿಸಿಟ್ಟರೂ ಎಲ್ಲಿಗೆ ಕೊಂಡೊಯ್ದು ಹಾಕಬೇಕು ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಈ ಸಮಸ್ಯೆಗೆ ಕೀನ್ಯಾ ಕಂಡುಕೊಂಡ ಪರಿಹಾರೋಪಾಯ ಎಲ್ಲರಿಗೂ ಮಾದರಿಯಾಗಿದೆ.
500-1000 ವರ್ಷ ಬೇಕು
ಪರಿಸರ ತಜ್ಞರೊಬ್ಬರ ಅಭಿಪ್ರಾಯದಂತೆ ಪ್ಲಾಸ್ಟಿಕ್ ಬಳಕೆ ಇದೇ ರೀತಿ ಮುಂದುವರಿದರೆ 2050ರ ವೇಳೆಗೆ ಸಮುದ್ರ ದಲ್ಲಿ ಮೀನುಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಇರುತ್ತದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವ ಬೇಜವಾಬ್ದಾರಿ ವರ್ತನೆಯಿಂದ ಇಂದು ಪ್ರಾಣಿಗಳ ಹೊಟ್ಟೆಯಲ್ಲಿಯೂ ಪ್ಲಾಸ್ಟಿಕ್ ತುಂಬಿಹೋಗಿದೆ. ನಮಗೆ ಕ್ಯಾನ್ಸರ್‌ನಂಥ ಕಾಯಿಲೆಗಳು ಯೌವನದಲ್ಲೇ ಅಪ್ಪಿಕೊಳ್ಳತೊಡಗಿದೆ. ಪ್ಲಾಸ್ಟಿಕ್ ಮಾಲಿನ್ಯದ ಭೀಕರತೆಯನ್ನು ಪ್ರತಿಯೊಬ್ಬನೂ ಅರಿತುಕೊಳ್ಳಬೇಕಾಗಿದೆ. ಪರಿಸರದಲ್ಲಿರುವ ಪ್ಲಾಸ್ಟಿಕ್ ನಾಶ ವಾಗಬೇಕೆಂದರೆ ಕನಿಷ್ಠ 500-1000 ವರ್ಷಗಳು ಬೇಕು.
ಬಡ ಕೀನ್ಯಾದ ಪ್ಲಾಸ್ಟಿಕ್ ಜಾಗೃತಿ
ಕೀನ್ಯಾ ಆಫ್ರಿಕಾಖಂಡದ ಒಂದು ಸಣ್ಣ ರಾಷ್ಟ್ರ. ಅಲ್ಲಿ ನಿರುದ್ಯೋಗವಿದೆ. ಬಡತನ ತಾಂಡವವಾಡುತ್ತಿದೆ. ಆದರೂ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಒಂದು ಕಠಿನವಾದ ನಿಯಮವನ್ನು ಜಾರಿಗೆ ತಂದಿದೆ. ಅಲ್ಲಿ ಪ್ಲಾಸ್ಟಿಕ್ ಉತ್ಪಾದಿಸುವುದಾಗಲೀ ಮಾರುವುದಾಗಲೀ ಅಥವಾ ಬಳಸುವುದಾಗಲೀ ಸಲ್ಲದು. ಅದು ದೊಡ್ಡ ಅಪರಾಧ. ಇದಕ್ಕೆ 40 ಸಾವಿರ ಅಮೆರಿಕನ್ ಡಾಲರ್‌ಗಳನ್ನು ದಂಡವಾಗಿ ತೆರಬೇಕು ಅಥವಾ 4 ವರ್ಷ ಜೈಲುವಾಸ ಅನುಭವಿಸಬೇಕು.
– ಆಶಾ ದಿಲೀಪ್ ಸುಳ್ಯಮೆ
ಚಿತ್ರ :ಅಚ್ಯುತ ಚೇವಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kasaragod: ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Kasaragod: ಮುಖವಾಡ ಧರಿಸಿದ ವ್ಯಕ್ತಿಯಿಂದ ವಿದ್ಯಾರ್ಥಿಗೆ ಇರಿತ; ಪ್ರಕರಣ ದಾಖಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.