POCSO Case : ಟ್ಯೂಶನ್ ಸೆಂಟರ್ಗೆ ಪೊಲೀಸರಿಗೆ ಮೊಹರು; ಮಾಲಕ ನಾಪತ್ತೆ
Team Udayavani, Jan 17, 2024, 9:44 PM IST
ಕಾಸರಗೋಡು: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಞಂಗಾಡ್ ಬಸ್ ನಿಲ್ದಾಣ ಪರಿಸರದ ಇಂಪ್ಯಾಕ್ಟ್ ಟ್ಯೂಶನ್ ಸೆಂಟರ್ ಮಾಲಕ ಡಿಫಿ ಮುಖಂಡನಾಗಿದ್ದ ಅತಿಯಾಂಬೂರಿನ ಬಾಬುರಾಜ್(45) ಪತ್ತೆಗಾಗಿ ಪೊಲೀಸರು ಮಂಗಳೂರಿನಲ್ಲಿ ಹುಡುಕಾಟ ನಡೆಸಿದರು. ಆದರೆ ಪತ್ತೆ ಸಾಧ್ಯವಾಗಿಲ್ಲ. ಈತನ ಟ್ಯೂಶನ್ ಸೆಂಟರ್ನ್ನು ಮುಚ್ಚಿ ಪೊಲೀಸರು ಮೊಹರು ಹಾಕಿದರು.
ಕಳೆದ ಮಂಗಳವಾರ ರಾತ್ರಿ ಟ್ಯೂಶನ್ ತರಗತಿಗೆಂದು ತಲುಪಿದ ವಿದ್ಯಾರ್ಥಿನಿಗೆ ಬಾಬುರಾಜ್ ಲೈಂಗಿಕ ದೌರ್ಜನ್ಯವೆಸಗಿದ್ದಾಗಿ ಆರೋಪಿಸಲಾಗಿದೆ. ಈ ಮೊದಲು ಕೂಡ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಾಬುರಾಜ್ ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದ್ದ. ಬಾಬುರಾಜ್ನ ಪತ್ನಿಯ ಮನೆ ಮಂಗಳೂರಿನಲ್ಲಿದ್ದು, ಈ ಹಿನ್ನೆಲೆಯಲ್ಲಿ ಆತ ಅಲ್ಲಿ ತಲೆಮರೆಸಿಕೊಂಡಿರಬಹುದೆಂಬ ಶಂಕೆಯಲ್ಲಿ ಪೊಲೀಸರು ಪತ್ನಿಯ ಮನೆ ಹಾಗು ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ.
ನಾಪತ್ತೆಯಾಗಿದ್ದ ಬಾಲಕಿ ಉಡುಪಿಯಲ್ಲಿ ಪತ್ತೆ
ಕುಂಬಳೆ: ನಾಪತ್ತೆಯಾಗಿದ್ದ ಚೇವಾರು ಬಳಿಯ ನಿವಾಸಿ 17ರ ಹರೆಯದ ಬಾಲಕಿಯನ್ನು ಉಡುಪಿಯಿಂದ ಪೊಲೀಸರು ಪತ್ತೆಹಚ್ಚಿದ್ದಾರೆ. ಜ. 15ರಂದು ಬೆಳಗ್ಗೆ 11 ಗಂಟೆಗೆ ಮನೆಯಿಂದ ಹೊರಟಿದ್ದ ಬಾಲಕಿ ಆ ಬಳಿಕ ಮನೆಗೆ ವಾಪಸಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಚಿಕ್ಕಪ್ಪ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಹೀಗಿರುವಂತೆ ಬಾಲಕಿಯನ್ನು ಉಡುಪಿಯಿಂದ ಪತ್ತೆಹಚ್ಚಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆಕೆಯನ್ನು ಊರಿಗೆ ಕರೆತರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.