ತುಕ್ಕುಹಿಡಿದು ಮಣ್ಣು ಪಾಲಾಗುತ್ತಿವೆ‌ ಲಕ್ಷಗಟ್ಟಲೆ ಮೌಲ್ಯದ ವಾಹನಗಳು!


Team Udayavani, Apr 12, 2018, 9:10 AM IST

Old-Vehicle-11-4.jpg

ಕುಂಬಳೆ: ಒಂದು ಕಡೆ ಬೈಕ್‌, ಕಾರು ಜೀಪು, ಲಾರಿ, ಬಸ್ಸುಗಳು, ಇನ್ನೊಂದೆಡೆ ದೋಣಿ, ಮೊತ್ತೂಂದೆಡೆ ಹೊಯಿಗೆ ರಾಶಿ. ಇದು ಹಲವಾರು ವರ್ಷಗಳಿಂದ ಕುಂಬಳೆ ಪೊಲೀಸ್‌ ಠಾಣೆಯ ಹಿಂದೆ ಮುಂದೆ, ಪಕ್ಕದಲ್ಲಿ ಕಾಣುವ ದೃಶ್ಯಗಳು. ಕೆಲವು ವಾಹನಗಳು ಅಪಘಾತದಲ್ಲಿ ನಜ್ಜುಗುಜ್ಜಾಗಿದ್ದುವಾದ‌ರೆ ಹೆಚ್ಚಿನ ನೂರಾರು ವಾಹನಗಳು ಉತ್ತಮ ಕಂಡೀಶನ್‌ನಲ್ಲಿರುವ ವಾಹನಗಳು. ಇವುಗಳಲ್ಲಿ ಕೆಲವು ಹೊಸತಾದರೆ ಇನ್ನು ಕೆಲವಂತೂ ಕೆಲವೇ ವರ್ಷಗಳ ಹಿಂದಿನವು. ಇವೆಲ್ಲವೂ ಕಾನೂನು ಉಲ್ಲಂಘಿಸಿ ಪೊಲೀಸರಿಂದ ವಶಪಡಿಸಿಕೊಳ್ಳಲ್ಪಟ್ಟ ವಾಹನಗಳಾಗಿವೆ.

ಕಳ್ಳತನಕ್ಕೆ ಬಳಸಿದ ಮತ್ತು ಮದ್ಯ, ಗಾಂಜಾ, ಗಂಧ, ಹೊಯಿಗೆ ಮುಂತಾದ ಅಕ್ರಮ ವಸ್ತುಗಳನ್ನು ಸಾಗಾಟ ಮಾಡುತ್ತಿರುವಾಗ ವಶಪಡಿಸಿಕೊಂಡ ವಾಹನಗಳನ್ನು ಎಲ್ಲೆಂದರಲ್ಲಿ ಉಪೇಕ್ಷಿಸಲಾಗಿದೆ. ಅನಧಿಕೃತವಾಗಿ ಹೊಯಿಗೆ ಸಾಗಿಸುತ್ತಿದ್ದ ದೋಣಿಯನ್ನು ಲಾರಿಯಲ್ಲಿ ತಂದು ಠಾಣೆಯ ಮುಂದೆ ಇರಿಸಲಾಗಿದೆ. ಪರವಾನಿಗೆ ರಹಿತ ಹೊಯಿಗೆ ಸಾಗಿಸುತ್ತಿದ್ದ ರಿಕ್ಷಾದಿಂದ ತೊಡಗಿ ಹಲವು ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮರಳನ್ನು ತುರ್ತು ಅಗತ್ಯಕ್ಕಾಗಿ ಮನೆಗೆ ಸಾಗಿಸುತ್ತಿದ್ದ ಬೈಕ್‌ ನ್ನೂ ಬೆಂಬತ್ತಿ ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಸಾಗಾಟದ ವಾಹನಗಳ ಕೆಲವು ಚಾಲಕರು ಮತ್ತು ಕ್ಲೀನರ್‌ಗಳು ಪರಾರಿಯಾದರೆ ಕೆಲವರು ಸೆರೆ ಸಿಕ್ಕಿ ಕೇಸಿನಲ್ಲಿ ಬಸವಳಿಯುತ್ತಿದ್ದಾರೆ. ಆದರೆ ಲಕ್ಷಗಟ್ಟಲೆ ರೂಪಾಯಿ ಬೆಲೆ ಬಾಳುವ ವಾಹನಗಳು ಮಾತ್ರ ಬಿಸಿಲು ಗಾಳಿ ಮಳೆಗೆ ಮೈ ಒಡ್ಡಿ ನಿಂತಿವೆ.

ಅಕ್ರಮ ಸಾಗಾಟದ ವಾಹನಗಳು

ಅಕ್ರಮ ಸಾಗಾಟ ಮಾಡಿದ ವಾಹನಗಳನ್ನು ವಶಪಡಿಸಿಕೊಂಡ ಬಳಿಕ ನ್ಯಾಯಾಲಯದಲ್ಲಿ ಕೇಸು ದಾಖಲಿಸಿದರೂ ವಾಹನಗಳನ್ನು ಬಿಟ್ಟು ಕೊಡುವ ಹಾಗಿಲ್ಲವಂತೆ. ಕಾನೂನು ಉಲ್ಲಂಘಿಸಿದ ಕಾರಣ ವಾಹನಗಳ ಮಾಲಕರು ತಮ್ಮ ವಾಹನಗಳತ್ತ ತಲೆ ಹಾಕುವುದಿಲ್ಲ. ಕೋರ್ಟ್‌ ಅಂತೂ ವಾಹನಗಳನ್ನು ಸುಲಭದಲ್ಲಿ ಬಿಟ್ಟು ಕೊಡುತ್ತಿಲ್ಲ. ಹಾಗಾಗಿ ಭಾರೀ ಬೆಲೆಬಾಳುವ ವಾಹನಗಳು ಜೀರ್ಣಗೊಂಡು ಮಣ್ಣು ಸೇರುತ್ತಿವೆ. ವರ್ಷಂಪ್ರತಿ ನಡೆಯುವ ಕುಂಬಳೆ ಬೆಡಿ ಪ್ರದೇಶದ ಮೈದಾನಲ್ಲಿ ಹೊಯಿಗೆ ರಾಶಿ ಮತ್ತು ವಾಹನಗಳ ರಾಶಿಯನ್ನು ಕಾಣಬಹುದು. ಇದನ್ನು ಜೆ.ಸಿ.ಬಿ. ಯಂತ್ರದ ಮೂಲಕ ಪಕ್ಕಕ್ಕೆ ಸರಿಸಲಾಗುವುದು. ಕಾರುಗಳನ್ನು ಒಂದರ ಮೇಲೊಂದರಂತೆ ಪೇರಿಸಲಾಗುತ್ತಿದೆ.

ಪೊಲೀಸ್‌ ಠಾಣೆಯ ಸುಪರ್ದಿಯಲ್ಲಿರುವ, ಅನಾಥವಾಗಿರುವ ಕೆಲವು ವಾಹನಗಳ ಟಯರ್‌ ಇನ್ನಿತರ ಬಿಡಿ ಭಾಗಗಳು ಸದ್ದಿಲ್ಲದೆ ಕಳವಾಗುತ್ತಿವೆಯಂತೆ. ಆದರೆ ಇದು ಸುದ್ದಿಯಾಗುವುದಿಲ್ಲವಂತೆ. ವಶಪಡಿಸಿಕೊಂಡ ಬೆಲೆ ಬಾಳುವ ವಾಹನಗಳು ತುಕ್ಕು ಹಿಡಿದು ಮಣ್ಣು ಸೇರುವುದನ್ನು ತಡೆಯಲು ಇತರ ರಾಜ್ಯಗಳಂತೆ ಏಲಂ ಕಾಯಿದೆ ತರುವತ್ತ ನ್ಯಾಯಾಲಯ ಮುಂದಾಗಬೇಕಾಗಿದೆ.


ಕೇರಳದಲ್ಲಿ ಏಲಂ ಇಲ್ಲ

ಕುಂಬಳೆ ಪೊಲೀಸ್‌ ಠಾಣೆಯ ಮುಂಭಾಗದ ಮತ್ತು ಬಲಭಾಗದ ಮೈದಾನದಲ್ಲಿ ರಸ್ತೆ ಪಕ್ಕದಲ್ಲಿ ತುಕ್ಕು ಹಿಡಿದು ಮಣ್ಣುಪಾಲಾಗುತ್ತಿರುವ ಬೆಲೆ ಬಾಳುವ ವಾಹನಗಳನ್ನು ನೋಡುವಾಗ ಅಯ್ಯೋ ಎಂದಾಗುವುದು. ಇಷ್ಟೊಂದು ಬೆಲೆ ಬಾಳುವ ಸೊತ್ತಿನ ಪಾಡನ್ನು ಕೇಳುವವರಿಲ್ಲವೇ ಎಂದಾಗುವುದು. ಆದರೆ ಕಾನೂನಿನ ಬಿಗಿ ಹಿಡಿತದಿಂದ ಇದನ್ನು ಬಿಡಿಸಲು ಆಸಾಧ್ಯವೆಂಬುದಾಗಿ ಠಾಣೆಯ ಅಧಿಕಾರಿಗಳ ಹೇಳಿಕೆಯಾಗಿದೆ. ಕೆಲವು ಅನ್ಯ ರಾಜ್ಯಗಳಲ್ಲಿ ವಶಪಡಿಸಿದ ವಾಹನಗಳನ್ನು ಏಲಂ ಮಾಡುವ ಕಾಯಿದೆ ಇದ್ದರೂ ಕೇರಳದಲ್ಲಿ ಇಲ್ಲವಂತೆ.

— ಅಚ್ಯುತ ಚೇವಾರ್‌

ಟಾಪ್ ನ್ಯೂಸ್

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

8-madikeri

Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

Kumbale: ವರ್ಕಾಡಿ ಪ್ಲೈವುಡ್‌ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ

Kumbale: ವರ್ಕಾಡಿ ಪ್ಲೈವುಡ್‌ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ

1

Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

CT RAVI 2

C T Ravi; ಸನಾತನ ಧರ್ಮ ಉಳಿದರೆ ದೇಶದ ಉಳಿವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.