ಅಚ್ಚರಿ ಮೂಡಿಸಿದ ಪೊಲೀಸ್ ಡಾಗ್ ಸ್ಕ್ವಾಡ್ ಜಾಣ್ಮೆ
Team Udayavani, Apr 14, 2018, 9:25 AM IST
ಬದಿಯಡ್ಕ: ನವಜೀವನ ಪ್ರೌಢ ಶಾಲೆ ಬದಿಯಡ್ಕದಲ್ಲಿ ಪ್ರಾರಂಭವಾಗಿರುವ ಸ್ಕೂಲ್ ಪೊಲೀಸ್ ಕೆಡೆಟ್ ಕಾಸರಗೋಡು ಜಿಲ್ಲಾ ಶಿಬಿರ ಸರ್ಗ ಕಾಹಳಂ-2018 ವಿವಿಧ ಉಪಯುಕ್ತ ಮಾಹಿತಿ ಶಿಬಿರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಂದುವರಿಯುತ್ತಿದೆ. ಅಜಿತ್ ಕುಮಾರ್ ಕಳನಾಡು ಅವರು ವ್ಯಕ್ತಿತ್ವ ವಿಕಸನ ತರಗತಿಯಲ್ಲಿ ಪ್ರಕೃತಿ ಹಾಗೂ ತಂದೆ ತಾಯಂದಿರು ಹಾಗೂ ಹಿರಿಯರನ್ನು ಗೌರವದಿಂದ ಹಾಗೂ ಪ್ರೀತಿಯಿಂದ ಕಾಣಬೇಕು, ಹಿರಿಯರಿಗೆ ತೋರುವ ಗೌರವ ನಮ್ಮ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಹೇಳಿದರು. ಈ ಶಿಬಿರದಲ್ಲಿ ಅತ್ಯಂತ ಕ್ರಿಯಾತ್ಮಕವಾಗಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡಲಾಯಿತು.
ಅಜಾಗರೂಕತೆ ಹಾಗೂ ಸ್ಪರ್ಧಾ ತ್ಮಕವಾದ ವೇಗ ಉಂಟು ಮಾಡುವ ಅನಾಹುತಗಳ ಬಗ್ಗೆ ಮೋಟಾರ್ ವೆಹಿಕಲ್ಸ್ ಇನ್‌ಸ್ಪೆಕ್ಟರ್ ಪ್ರಸಾದ್ ಮಾಹಿತಿ ಒದಗಿಸಿದರು. ಸಾರಿಗೆ ನಿಯಮಗಳು, ಸೀಟ್ ಬೆಲ್ಟ್ ಹಾಗೂ ಹೆಲ್ಮೆಟ್‌ಗಳ ಅಗತ್ಯವನ್ನು ಸರಳವಾಗಿ, ಸುಲಭದಲ್ಲಿ ಮನದಟ್ಟಾಗುವಂತೆ ವಿವರಿಸಿದರು. ಅಂತೆಯೇ ಪೊಲೀಸ್ ಚೆಕ್ಕಿಂಗ್‌ನ ಅಗತ್ಯ ಹಾಗೂ ಚಾಲಕರ ಸಹಕಾರದ ಮಹತ್ವವನ್ನು ವಿವರಿಸಿದರು. ವಾಹನ ಚಲಾವಣೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ವೇಗ ನಿಯಂತ್ರಣದ ಕುರಿತಾದ ಮಾಹಿತಿಯನ್ನು ನೀಡಿದರು. ಆ ಬಳಿಕ ನಡೆದ ಕಾರ್ಯಕ್ರಮದಲ್ಲಿ ಯುವಜನಾಂಗ ಎದುರಿಸುವ ಸಮಸ್ಯೆಗಳು ಹಾಗೂ ಮಾಧ್ಯಮಗಳ ಸ್ವಾಧೀನತೆಯು ಎಂಬ ವಿಷಯದ ಕುರಿತು ಚರ್ಚೆ ನಡೆಯಿತು. ಈ ಚರ್ಚೆಯಲ್ಲಿ ಶ್ರೀನಾಥ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.
ಮೊಬೈಲ್ ಮೊದಲಾದ ಇಲೆಕ್ಟ್ರೋನಿಕ್ ಮಾಧ್ಯಮಗಳ ದುರುಪಯೋಗ ಹಾಗೂ ಅಪ್ರಾಪ್ತರಲ್ಲಿ ಅದು ಸೃಷ್ಟಿಸುವ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಸೈಬರ್ ಮತ್ತು ಇತರ ಮೋಸದ ಜಾಲದ ಬಗ್ಗೆ ಮಕ್ಕಳಲ್ಲಿ ಎಚ್ಚರ ಮೂಡಿಸಲಾಯಿತು. ಯುವಜನರು ಎದುರಿಸುವ ಖನ್ನತೆ ಹಾಗೂ ಮಾನಸಿಕ ವಿಭ್ರಾಂತಿಯಿಂದ ಹೇಗೆ ದೂರ ಉಳಿಯಬಹುದು ಇಲ್ಲವೇ ಹೊರಬರಬಹುದು ಎಂಬ ವಿಷಯದ ಕುರಿತು ಡಾ| ಕೃಷ್ಣ ಹಾಗೂ ಡಾ| ಸುನಿಲ್ ಮಾಹಿತಿ ನೀಡಿದರು. ಮಕ್ಕಳಲ್ಲಿ ಉಂಟಾಗುವ ಮಾನಸಿಕ ತೊಂದರೆಗಳು, ಖನ್ನತೆ, ಸ್ವಭಾವ ರೂಪೀಕರಣದ ಮೇಲೆ ಇದರಿಂದಾಗುವ ಪರಿಣಾಮಗಳ ಕುರಿತು ಸ್ಪಷ್ಟ ಮಾಹಿತಿಯನ್ನು ನೀಡಲಾಯಿತು.
ಚುರುಕಿನ ಡಾಗ್ ಸ್ಕ್ವಾಡ್
ಕಾಸರಗೋಡು ಡಾಗ್ ಸ್ಕ್ವಾಡ್ ನ ನಾಲ್ಕು ಪೊಲೀಸ್ ನಾಯಿಗಳ ಉಪ ಸ್ಥಿತಿಯು ಶಿಬಿರಾರ್ಥಿಗಳಿಗೆ ನೂತನ ಅನುಭವ ನೀಡಿತು. ಕೇರಳ ರಾಜ್ಯ ಚಿನ್ನದ ಪದಕ ವಿಜೇತ ಬಸ್ಸಿ, ರೂನಿಗಳೆಂಬ ನಾಯಿಗಳ ಅನ್ವೇಷಣಾ ರೀತಿಗಳು, ಅಪರಾಧಿಗಳನ್ನು ಗುರುತಿಸುವಲ್ಲಿ ತೋರುವ ಜಾಣ್ಮೆ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿತು. ನಾಯಿಗಳ ಪೆರೇಡ್ ಕೂಡ ಕುತೂಹಲಕಾರಿಯಾಗಿತ್ತು. ಒಟ್ಟಿನಲ್ಲಿ ಮಾಹಿತಿ ಪೂರ್ಣ ಹಾಗೂ ಸ್ಮರಣೀಯ ಶಿಬಿರವಾಗಿ ಸರ್ಗ ಕಾಹಳಂ-2018 ಮುಂದುವರಿಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.