ಕಳಪೆ ಕಾಮಗಾರಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಹೊಂಡ ಸೃಷ್ಟಿ
Team Udayavani, Jul 19, 2017, 5:00 AM IST
ಕುಂಬಳೆ: ತಲಪ್ಪಾಡಿ ಕಾಸರಗೋಡು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಲ್ಲಲ್ಲಿ ಹೊಂಡ ಸೃಷ್ಟಿಯಾಗುತ್ತಿದೆ. ಕೋಟಿಗಟ್ಟಲೆ ನಿಧಿ ವ್ಯಯಿಸಿದ ಮೆಕ್‌ಡಾಂ ಡಾಮರೀಕರಣ ಕಳಪೆ ಕಾಮಗಾರಿಯಿಂದಲಾಗಿ ರಸ್ತೆ ಬಿರುಕು ಬಿಡುತ್ತಿದೆ. ರಸ್ತೆಯ ಮೇಲ್ಪದರ ಎದ್ದು ರಸ್ತೆ ಕೆಡುತ್ತಿದೆ. ಕೆಲದಿನಗಳಿಂದ ವಿಪರೀತ ಮಳೆ ಸುರಿದ ಕಾರಣ ರಸ್ತೆಯಲ್ಲಿ ಹೊಂಡವಾಗಿದೆ ಎಂಬುದಾಗಿ ಇಲಾಖೆಯವರು ಮತ್ತು ಗುತ್ತಿಗೆದಾರರು ಇದೀಗ ಸಬೂಬು ನೀಡುತ್ತಿದ್ದರೂ ಕಳಪೆ ಕಾಮಗಾರಿಯಿಂದ ರಸ್ತೆ ಕೆಡುತ್ತಿದೆ ಎಂಬುದು ಸತ್ಯವಾಗಿದೆ.
ಸಾಕಷ್ಟು ಡಾಮರು ಮಿಶ್ರಣದ ಕೊರತೆ, ಸಕಾಲದಲ್ಲಿ ಕಾಮಗಾರಿ ಪೂರೈಸದೆ ಮಳೆ ಸುರಿಯುತ್ತಿರುವಾಗಲೇ ಕಾಮಗಾರಿ ನಡೆಸಿದ ಫಲದಿಂದ ರಸ್ತೆ ಬೇಗನೆ ಕೆಡಲು ಕಾರಣವಾಗಿದೆ. ದಿನದಿಂದ ದಿನಕ್ಕೆ ರಸ್ತೆಯಲ್ಲಿ ಹೊಂಡಗಳ ಸಂಖ್ಯೆ ಅಧಿಕವಾಗಿ ಸಂಚಾರಕ್ಕೆ ತೊಡಕಾಗಲಿದೆ. ಇನ್ನು ಈ ರಸ್ತೆಯ ಹೊಂಡ ಮುಚ್ಚಲು ಲಕ್ಷಗಟ್ಟಲೆ ನಿಧಿಯಲ್ಲಿ ಪೀಸ್ ವರ್ಕಿನ ಮೂಲಕ ಪ್ಯಾಚ್ ವರ್ಕ್ ಯೋಜನೆ ತಯಾರಿಸಿ ಮತ್ತೆ ಈ ರಸ್ತೆಯ ಹೊಂಡ ಮುಚ್ಚಲಿದೆ.
ಆದರೆ ಸರಕಾರದಿಂದ ಕೋಟಿಗಟ್ಟಲೆ ನಿಧಿ ಬಳಸಿದ ಆರಂಭದ ಕಾಮಗಾರಿಯ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಲು ಜನರಿಂದ ಮತ ಪಡೆದು ಚುನಾಯಿತರಾದ ಪ್ರತಿನಿಧಿಗಳಿಗೆ ಸಮಯ ಸಿಗುವುದಿಲ್ಲ. ಗುತ್ತಿಗೆದಾರರ ಕಾಂಚಾಣಕ್ಕೆ ಕೈ ಒಡ್ಡಿದ ಅಥವಾ ತಮ್ಮ ಪಕ್ಷಕ್ಕೆ ನಿಧಿ ಸಂಗ್ರಹಿದ ದಾಕ್ಷಿಣ್ಯದಲ್ಲಿ ಕರಾರುದಾರರ ಕಳಪೆ ಕಾಮಗಾರಿಗೆ ತಲೆಬಾಗಲೇ ಬೇಕಾಗುವುದು ಕೆಲ ಚುನಾಯಿತರಿಗೆ ಅನಿವಾರ್ಯವಾಗುವುದು. ಸಾರ್ವಜನಿಕರು ಕಾಮಗಾರಿ ಕಳಪೆಯಾಗಿದೆ ಎಂಬುದಾಗಿ ಇಲಾಖೆಯ ಉನ್ನತ ಅಧಿಕಾರಿಗಳಿಗಾಗಲಿ ವಿಜಿಲೆನ್ಸ್ ಇಲಾಖೆಗೆ ದೂರು ಸಲ್ಲಿಸಿದರೂ ಅಧಿಕಾರಿಗಳು ಕಳ್ಳರಿಗೆ ಬೆಳಕು ನೀಡುವ ಸಂಪ್ರದಾಯವೇ ಹೆಚ್ಚಾಗಿ ಇಲ್ಲಿ ನಡೆಯುವುದು.
ಗುತ್ತಿಗೆದಾರರ ಪರವಾದ ತೀರ್ಪಿನಿಂದ ಕಳಪೆ ಕಾಮಗಾರಿ ಸದಾ ಮುಂದುವರಿಯುವುದು. ಆದುದರಿಂದ ಇದೀಗ ಸಾರ್ವಜನಿಕರಿಂದ ದೂರು ವಿರಳವಾಗುತ್ತಿದೆ. ಇದರಿಂದಲಾಗಿ ವರ್ಷಂಪ್ರತಿ ಸರಕಾರದ ಅದೆಷ್ಟೋ ಕೋಟಿಗಟ್ಲೆ ರಾಷ್ಟ್ರೀಯ ನಿಧಿ ಪೋಲಾಗುವುದು. ಇದನ್ನು ಯಾವ ಸರಕಾರ ಅಧಿಕಾರಕ್ಕೇರಿದರೂ ತಡೆಯಲು ಸಾಧ್ಯವಾಗುತ್ತಿಲ್ಲ. ಜನರು ಇನ್ನಷ್ಟು ಜಾಗೃತರಾಗದಷ್ಟು ಕಾಲ ಕಳಪೆ ಕಾಮಗಾರಿಗೆ ಶಾಶ್ವತ ಪರಿಹಾರವೆಂಬುದಿಲ್ಲ.
ಚಿತ್ರ:ವಿದ್ಯಾ ಸ್ಟುಡಿಯೊ ಪೈವಳಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.