ಪೋಸೋಟು ಮಹಲ್ ಯೂತ್ ವಿಂಗ್: ಸಾಮೂಹಿಕ ಮುಂಜಿ ಸಮಾರಂಭ
Team Udayavani, Apr 15, 2019, 6:30 AM IST
ಬದಿಯಡ್ಕ : ಪೋಸೋಟು ಕಹಲ್ ಯೂತ್ ವಿಂಗ್ ಸಂಘಟನೆಯು ಪೋಸೋಟಿನಲ್ಲಿರುವ ಮಂತ್ರಿ ಮಹಲ್‌ನಲ್ಲಿ 61 ಮಕ್ಕಳ ಉಚಿತ ಸಾಮೂಹಿಕ ಮುಂಜಿ ಸುನ್ನತ್ ಮಾಡಿತ್ತು. ಮಕ್ಕಳನ್ನು ಹೊಸ ಉಡುಪುಗಳನ್ನು ಧರಿಸಿ ಜುಮಾ ನಮಾಜಿಗೆ ಕೊಂಡೊಯ್ಯುವ ಕಾರ್ಯಕ್ರ ಮವನ್ನು ಹಮ್ಮಿಕೊಳ್ಳಲಾಯಿತು. ಮುಂದಿನ ದಿನಗಳಲ್ಲಿ ನಿರ್ಗತಿಕ ಕುಟುಂಬದ ಐದು ಹೆಣ್ಣು ಮಕ್ಕಳನ್ನು ಸಂಘಟನೆಯ ಖರ್ಚಿನಲ್ಲಿ ಉಚಿತವಾಗಿ ಮದುವೆ ಮಾಡಿಕೊಡುವ ಉದ್ದೇಶವನ್ನು ಕೂಡಾ ಈ ಸಂಘಟನೆ ಇಟ್ಟುಕೊಂಡಿರುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಪೋಸೋಟಿನಲ್ಲಿರುವ ಮಂದ್ರಿ ಮಹಲ್‌ನಿಂದ ಮುಂಜಿಯಾದ ಮಕ್ಕಳನ್ನು ಘೋಷ ಯಾತ್ರೆಯ ಮೂಲಕ ಪೋಸೋಟು ಜುಮಾ ಮಸೀದಿಗೆ ಕರೆತರಲಾಯಿತು. ಇದಕ್ಕೆ ಸಂಘಟನೆಯ ಅಧ್ಯಕ್ಷ ಮಂತ್ರಿ ಸಿದ್ದೀಖ್ ಪೋಸೋಟು, ಪ್ರಧಾನ ಕಾರ್ಯದರ್ಶಿ ಬಿ.ಎಂ. ಮನ್ಸೂರ್, ಪದಾಧಿಕಾರಿಗಳಾದ ಪಿ.ಕೆ. ಕುಂಞಿ ಮೋನು, ಆಸಿಫ್ ಪಿಡಿಪಿ, ಸಮದ್ ಬಿ.ಎಂ., ಇಸ್ಮಾಯಿಲ್ ಎ.ಎಂ., ಸಿರಾಜ್ ಬಿ.ಎಸ್., ಸಿದ್ದೀಖ್ ಇಸ್ಮಾಯಿಲ್, ಮುನೀರ್ ಎಂ.ಎಸ್., ಮೊದಲಾದವರು ಮುಂದಾಳತ್ವ ನೀಡಿದರು.
ಜಿಮಾ ನಮಾಜಿನ ಬಳಿಕ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೋಸೋಟು ಜಮಾಹತ್‌ನ ಮುದರಿಸ್ ಸಯ್ಯದ್ ಜಿಫ್ರಿ ಝೈನುಲ್ ಆಬಿದೀನ್ ತಂಙಲ್, ಖತೀಬ್, ಶೆರೀಫ್ ಆಶ್ರಫಿ, ಮಜೀದ್ ಬಾಖವಿ, ಜಮಾಹತ್ ಅಧ್ಯಕ್ಷ ಆರ್ ಕೆ ಬಾವ ಹಾಜಿ, ಬ್ಲೋಕ್ ಪಂ. ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಎಸ್.ಎಂ. ಬಶೀರ್, ವಾರ್ಡ್ ಸದಸ್ಯರಾದ ಬಶೀರ್, ಅಬ್ದುಲ್ಲ ಗುಡ್ಡಕ್ಕೇರಿ ಮೊದಲಾದವರು ಶುಭವನ್ನು ಹಾರೈಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರಿಗೂ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.