ನೀರಾವರಿ ಪಂಪ್‌ಗೆ ವಿದ್ಯುತ್‌ ಕಡಿತ: ಕೃಷಿಕರಿಂದ ಪ್ರತಿಭಟನೆ


Team Udayavani, Mar 17, 2019, 4:08 AM IST

kumble.png

ಕುಂಬಳೆ: ಕಾಸರಗೋಡು ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಕ್ಷಾಮ ತಲೆದೋರಿದೆ. ಇದರ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಅವರು ಪರಿಹಾರ ಕ್ರಮಕ್ಕೆ ಮುಂದಾಗಿರುವ ಕ್ರಮದ ವಿರುದ್ಧ ಕೃಷಿಕರು ಪ್ರತಿಭಟನೆಗೆ ಇಳಿದಿದ್ದಾರೆ.

ಮಂಜೇಶ್ವರ ತಾಲೂಕಿನಲ್ಲಿ ಹರಿಯುವ ಹೊಳೆಗಳಾದ ಉಪ್ಪಳ, ಶಿರಿಯ,ಮೊಗ್ರಾಲ್‌ ಮೊದಲಾದೆಡೆಗಳಲ್ಲಿ ಕುಡಿಯುವ ನೀರಿಗೆ ಪಂಪಿಂಗ್‌ ನಡೆಸುವ ಸ್ಥಳದ 500 ಮೀ.ಪ್ರದೇಶದ ಕೆಳ ಮತ್ತು ಮೇಲಿನ ಭಾಗದಲ್ಲಿರುವ ಕೃಷಿ ನೀರಾವರಿ ಪಂಪ್‌ಗ್ಳ ವಿದ್ಯುತ್‌ ಸಂಪರ್ಕವನ್ನು ಕೂಡಲೇಕಡಿತಗೊಳಿಸಲು ಜಿಲ್ಲಾಧಿಕಾರಿಯವರು ಆಯಾ ವಿದ್ಯುತ್‌ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಿದ್ದರು.ಇದರಿಂದ ಕೃಷಿಕರ ಕಂಗಾಲಾಗಿದ್ದು ಹೋರಾಟಕ್ಕೆ ಇಳಿದಿರುವರು.

ಭಾರತೀಯ ಕಿಸಾನ್‌ ಸಂಘ ಮತ್ತು ರೈತ ಸಂಘದ ನೇತೃತ್ವದಲ್ಲಿ ಪೈವಳಿಕೆ ಕುರುಡಪದವು,ಕಳಾಯಿ ಮೊದಲಾದೆಡೆಗಳ ಕೃಷಿಕರು ಸಂಘಟಿತರಾಗಿ ಪೈವಳಿಕೆ ವಿದ್ಯುತ್‌ ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾದರು.
ಬಳಿಕ ಗ್ರಾಮ ಪಂಚಾಯತ್‌ ಕಚೇರಿಯಲ್ಲಿ ಜರಗಿದ ಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ, ಉಪಾಧ್ಯಕ್ಷರು, ಗ್ರಾಮ ಪಂಚಾಯತ್‌ ಸದಸ್ಯರು, ಜಿಲ್ಲಾ ಪಂಚಾಯತ್‌ ಸದಸ್ಯನ್ಯಾಯವಾದಿ ಶ್ರೀಕಾಂತ್‌,ಕಿಸಾನ್‌ ಸಂಘದ ಜಿಲ್ಲಾ ಕಾರ್ಯದರ್ಶಿ ಸದಾನಂದ ಕೊಮ್ಮಂಡ, ರೈತ ಸಂಘದ ನಾಯಕರಾದ ಶ್ರೀನಿವಾಸ ಭಂಡಾರಿ, ಮಹಾಬಲ ಶೆಟ್ಟಿ ಕರುವೋಳು,ಸದಾನಂದ ಕೋರಿಕ್ಕಾರ್‌,ಬಾಬು ವಾದ್ಯಪ್ಪಡು³,ಪ್ರಮುಖರಾದ ಎಂ.ಹರಿಶ್ಚಂದ್ರ,ಡಾ.ಜಯಪ್ರಕಾಶ್‌ ನಾರಾಯಣ್‌ ತೊಟ್ಟೆತೋ¤ಡಿ,ಕಯ್ನಾರು ಸುರೇಶ್‌ ಹೊಳ್ಳ,ಕಳ್ಳಿಗೆ ಕರುಣಾಕರ ಶೆಟ್ಟಿ,ಶಂಕರನಾರಾಯಣ ಭಟ್‌, ವಿನೋದ್‌ ಕೊಜಪ್ಪೆ,ಅಬ್ಟಾಸ್‌ ವಾದ್ಯಪ್ಪಡು³,ಹಮೀದ್‌ ವಾದ್ಯಪ್ಪಡು³, ಹಾರಿಸ್‌ ಪೈವಳಿಕೆ ಮುಂತಾದವರ ನೇತೃತ್ವದಲ್ಲಿ ಮಾತುಕತೆ ನಡೆಸಲಾಯಿತು.

ಬಳಿಕ ಜಿಲ್ಲಾಧಿಕಾರಿಗಳನ್ನು ಮೊಬೈಲ್‌ ಮೂಲಕ ನಾಯಕರು ಸಂಪರ್ಕಿಸಿ ಸಮಸ್ಯೆಯ ಗಂಬೀರತೆಯನ್ನು ತಿಳಿಸಿದಾಗ ಡಿ.ಸಿ.ಅವರು ವಿದ್ಯುತ್‌ ಮರು ಸಂಪರ್ಕಕ್ಕೆ ಒಪ್ಪಿಗೆ ನೀಡಿದರು.ಆ ಬಳಿಕ ವಿದ್ಯುತ್‌ ಇಲಾಖೆಯ ಕೃಷಿ ಭವನದ ಮತ್ತು ಜಲನಿಧಿ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕಡಿತಗೊಳಿಸಿದ ‌ 6 ಪಂಪ್‌ಗ್ಳಿಗೆ ವಿದ್ಯುತ್‌ ಸಂಪರ್ಕ ನೀಡಲಾಯಿತು.ಇದರಿಂದ ಕೃಷಿಕರು ಸಮಾಧಾನದ ನಿಟ್ಟುಸಿರು ಬಿಡುವಂತಾಯಿತು.

 ದುರುಪಯೋಗದ ಆರೋಪ 
ರಾಜ್ಯ ಸರಕಾರ ಕೃಷಿಕರಿಗೆ ನೀಡಿದ ಉಚಿತ ವಿದ್ಯುತ್‌ ಯೋಜನೆಯಂತೆ ಹೆಚ್ಚಿನ ಕೃಷಿಕರು ಇದರ ದುರುಪಯೋಗ ನಡೆಸುತ್ತಿರುವುದಾಗಿ ಜಿಲ್ಲಾಧಿಕಾರಿ ಆರೋಪಿಸುತ್ತಿರುವರು.ಹೊಳೆಗಳಲ್ಲಿ ಪರವಾನಿಗೆ ಪಡೆಯದೆ ಬಾವಿ ತೋಡಿ ಇದಕ್ಕೆ ಕಾಂಕೀÅಟ್‌ ರಿಂಗ್‌ ಹಾಕಿ ಮುಚ್ಚಿ ತೋಟಗಳಿಗೆ ಅನಿಯಂತ್ರಿತವಾಗಿ ನೀರು ಬಳಸುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಕಾಸರಗೋಡು ಜಿಲ್ಲೆಯಲ್ಲಿ ನೀರಿನ ಕ್ಷಾಮ ಉಂಟಾಗುತ್ತಿದೆ  ಕೆಲವು ಕೃಷಿಕರು ಹೊಳೆಯ ನೀರನ್ನು ನಿತ್ಯ ರಾತ್ರಿ ಹಗಲೆನ್ನದೆ ತೋಟಕ್ಕೆ ಹರಿಯಬಿಟ್ಟು ನೀರಿನ ಕ್ಷಾಮಕ್ಕೆ ಕಾರಣವಾಗಿದೆ.

ಅಲ್ಲದೆ ಕೆಲವು ಕಡೆಗಳಲ್ಲಿ ಕುಡಿಯುವ ನೀರನ್ನು ಕೃಷಿಗೆ ಮತ್ತು ಹೂದೋಟಗಳಿಗೆ ಹರಿಸುತ್ತಿರುವುದಾಗಿ ದೂರು ಬಂದಿದ್ದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಕ್ಷಾಮ ತೀವ್ರವಾಗಲಿದ್ದು ಅನಗತ್ಯ ನೀರು ಪೋಲು ಮಾಡುವವರ ವಿರದ್ಧ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವೆಂಬುದಾಗಿ ಜಿಲ್ಲಾಧಿಕಾರಿ ಡಾಓ ಸಜಿತ್‌ ಬಾಬು ಅವರು ಎಚ್ಚರಿಕೆ ನೀಡಿದ್ದಾರೆ. 

ಟಾಪ್ ನ್ಯೂಸ್

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

baby 2

Russia; 25ರ ವಿದ್ಯಾರ್ಥಿನಿ ಮಗು ಹೆತ್ತರೆ 81,000 ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಭಾಗದ ಅಪರಾಧ ಸುದ್ದಿಗಳು; ಕಳ್ಳನೋಟು ಸಹಿತ ವಶಕ್ಕೆ

Kasaragod ಭಾಗದ ಅಪರಾಧ ಸುದ್ದಿಗಳು; ಕಳ್ಳನೋಟು ಸಹಿತ ವಶಕ್ಕೆ

Untitled-1

Kasaragod Crime News: ಬೀದಿ ನಾಯಿಗೆ ಹೆದರಿ ಓಡಿದ ಬಾಲಕ ಬಾವಿಗೆ ಬಿದ್ದು ಸಾವು

2

Kasaragod: ಯುವತಿ ನಾಪತ್ತೆ; ದೂರು ದಾಖಲು

Bus Fare Hike: ಕರ್ನಾಟಕಕ್ಕೆ ಕೇರಳ ಸರಕಾರಿ ಬಸ್‌ ಟಿಕೆಟ್‌ ದರ ಏರಿಕೆ

Bus Fare Hike: ಕರ್ನಾಟಕಕ್ಕೆ ಕೇರಳ ಸರಕಾರಿ ಬಸ್‌ ಟಿಕೆಟ್‌ ದರ ಏರಿಕೆ

cr

ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.