“ಧರ್ಮದಿಂದ ಆಧ್ಯಾತ್ಮಿಕತೆಯ ಸಂರಕ್ಷಣೆ’
Team Udayavani, Feb 21, 2019, 12:30 AM IST
ಕುಂಬಳೆ: ಧರ್ಮವೆಂಬ ನೆಟ್‌ವರ್ಕ್ ಮೂಲಕ ಆಧ್ಯಾತ್ಮಿಕತೆಯ ಸಂರಕ್ಷಣೆಯನ್ನು ಕೊಂಡೆವೂರಿನ ಶ್ರೀಗಳು ಶಿಸ್ತಿನಿಂದ ಮಾಡುತ್ತಿದ್ದು, ಸೋಮಯಾಗ ದಿಂದ ವಿಶ್ವಪರಿವರ್ತನೆಯ ಸಂದೇಶವನ್ನು ಸಮಾಜಕ್ಕೆನೀಡುತ್ತಿರುವರು. ಕಲ್ಲನ್ನು ಶಿಲ್ಪವಾಗಿಸುವ ಸಂಕಲ್ಪ ದೊಂದಿಗೆ ನಡೆಯುತ್ತಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದಿಂದ ಧರ್ಮ ಸಂಸ್ಕೃತಿಯ ಅನಾವರಣವಾಗಲಿದೆ.
ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಈ ಕಾಲಘಟ್ಟದಲ್ಲಿ ಯಾಗ ಯಜ್ಞಾದಿಗಳು ನಡೆಯಬೇಕಾದ ಅಗತ್ಯವಿದೆ. ಆ ಪುಣ್ಯದ ಕೆಲಸ ಕೊಂಡೆವೂರಿನ ಪವಿತ್ರ ನೆಲದಲ್ಲಿ ಸಂಪನ್ನಗೊಳ್ಳುತ್ತಿದೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾ ನಂದ ಸ್ವಾಮೀಜಿಯವರು ನುಡಿದರು.
ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯುತ್ತಿರುವ ವಿಶ್ವಜಿತ್ ಅತಿರಾತ್ರ ಸೋಮ ಯಾಗದ ಪ್ರಯುಕ್ತ ಬುಧವಾರ ಜರಗಿದ ಧರ್ಮ ಸಂದೇಶ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಮೂಡುಬಿದಿರೆ ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ, ತಾಳ್ಮೆ, ಪರಿಶ್ರಮ, ಸಾಧನೆಗಳಿಂದ ಯಜ್ಞಗಂಗೆಯನ್ನು ಕೇರಳಕ್ಕೆ ತಂದು ಭಗೀರಥ ಎಂಬ ಹೆಸರಿಗೆ ಕೊಂಡೆವೂರು ಪಾತ್ರವಾಗಿದೆ. ಇಲ್ಲಿ ನಡೆಯುತ್ತಿರುವ ಅತ್ಯಪೂರ್ವ ಸೋಮಯಾಗದ ಫಲದಿಂದ ಕೇರಳ ಮತ್ತೆ ದೇವರ ನಾಡೆನಿಸಿಕೊಳ್ಳಲಿ ಎಂದು ಅವರು ತಿಳಿಸಿದರು.
ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಉಪಸ್ಥಿತರಿದ್ದರು. ಡಾ| ಜಯಪ್ರಕಾಶ್‌ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ, ದಿನಕರ್ ಹೊಸಂಗಡಿ ನಿರೂಪಿಸಿ, ವಂದಿಸಿದರು.
ಗಗನಕ್ಕೆ ಚಿಮ್ಮಿದ ಪ್ರವಗ್ಯì ಅಗ್ನಿ ವೈಭವ
ಯಾಗದ ಪ್ರವಗ್ಯì ವಿಧಿ ವಿಶಿಷ್ಟವಾಗಿದೆ. ಒಟ್ಟು ಯಾಗ ಪ್ರಕ್ರಿಯೆಯಲ್ಲಿ 8 ಬಾರಿ ಆಚರಿಸಲ್ಪಡುವ ಈ ವಿಧಾನದಲ್ಲಿ ದಿನಕ್ಕೆ ಎರಡು ಬಾರಿಯಂತೆ ಕ್ರಮ ಅನುಸರಿಸಲಾಗುತ್ತಿದೆ. ಶೇ. 50 ಹುತ್ತದ ಮಣ್ಣು, ಶೇ. 15 ಹಂದಿ ತಿವಿದ ಮಣ್ಣು, ಶೇ. 35 ಆವೆ ಮಣ್ಣಿಗೆ ಆಡಿನ ಹಾಲು, ಗರಿಕೆ, ಸೋಮಲತೆ, ಗಂಡು ಆಡಿನ ರೋಮ, ಕೃಷ್ಣ ಮೃಗದ ರೋಮವನ್ನು ಸೇರಿಸಿ ತಯಾರಿಸಿದ ಮೂರು ಪಾತ್ರೆಗಳು ಬಳಸಲಾಗುವುದು. ಇದನ್ನು ಮಹಾವೀರ ಪಾತ್ರೆ ಎನ್ನುತ್ತಾರೆ. ಇದರಲ್ಲಿ ತಯಾರಿಸಿದ ಆಜ್ಯಗಳನ್ನು ಬಳಸಿ ನಡೆಸುವ ಯಾಗ ಪ್ರಕ್ರಿಯೆ ಪ್ರವಗ್ಯì ಎನಿಸಿಕೊಂಡಿದ್ದು, ಚತುರ್ವೇದಗಳ ಮಂತ್ರೋಚ್ಚಾರಗಳೊಂದಿಗೆ 20 ನಿಮಿಷಗಳ ವಿಧಿವಿಧಾನದಲ್ಲಿ ಮೂರು ಬಾರಿ ನ್ಪೋಟ ಸಂಭವಿಸಿ ಅಗ್ನಿಯ ಕೆನ್ನಾಲಿಗೆ 5-6 ಅಡಿ ಎತ್ತರಕ್ಕೆ ಚಿಮ್ಮಿತು. ಯಾಗ ಪರಿಸರದಲ್ಲಿ ಕಟ್ಟಿದ ಗಿಡ್ಡ ತಳಿಯ ಹಸುವಿನ ಹಾಲನ್ನು ಕರೆದು ಬಳಸಲಾಯಿತು.
ಅಗ್ನಿಹೋತ್ರಿಗಳ ಸಾನ್ನಿಧ್ಯ
ಸೋಮಯಾಗದ ಯಜಮಾನರಾದ ಮುಂಬಯಿ ರತ್ನಗಿರಿಯ ಅಗ್ನಿಹೋತ್ರಿಗಳಾದ ಅನಿರುದ್ಧ ವಾಜಪೇಯಿ ದಂಪತಿ ಸಾನ್ನಿಧ್ಯ ಮಹತ್ವ ಪಡೆದಿದೆ. ಭರತ ಖಂಡದಲ್ಲಿ ಒಟ್ಟು 26 ಅಗ್ನಿಹೋತ್ರಿಗಳು ಮಾತ್ರವಿದ್ದಾರೆ. ಕೊಂಡೆವೂರು ಶ್ರೀ ಕ್ಷೇತ್ರದ ಸೋಮಯಾಗಕ್ಕೆ ಅನಿರುದ್ಧ ವಾಜಪೇಯಿ ದಂಪತಿಯೇ ಯಜಮಾನತ್ವ ವಹಿಸಿದ್ದಾರೆ.
ಸೋಮಯಾಗ ಭೂಮಿಗೆ ಸೋಮರಾಜನ ಆಗಮನ!
ಬುಧವಾರ ಬೆಳಗ್ಗೆ ಪಾರಂಪರಿಕ ಜೋಡು ಎತ್ತಿನಗಾಡಿಯಲ್ಲಿ ಸೋಮರಾಜನನ್ನು ಯಾಗ ಭೂಮಿಗೆ ಕರೆತರುವ ವಿಶಿಷ್ಟ ಕಾರ್ಯಕ್ರಮ ನಡೆಯಿತು.
ಸೋಮಯಾಗದ ಪ್ರಧಾನ ದೇವತೆಯಾದ ಸೋಮರಾಜನ ಉಪಸ್ಥಿತಿಯಲ್ಲಿ ವಿಧಿವಿಧಾನ ಗಳು ಏರ್ಪಡುವುದು ಇದರ ಹಿನ್ನೆಲೆಯಾಗಿದೆ. ಸುಬ್ರಹ್ಮಣ್ಯ ನಾಮಕರಾದ ಋತ್ವಿಜರು ಸೋಮ ರಾಜರ ಪೋಷಾಕಿನಲ್ಲಿ ಜೋಡಿ ಎತ್ತುಗಳು ಎಳೆದ ಗಾಡಿಯಲ್ಲಿ ಋಕ್, ಯಜುರ್, ಸಾಮ ಹಾಗೂ ಅಥರ್ವ ವೇದೋಕ್ತ ಮಂತ್ರೋಚ್ಚಾರಗಳೊಂದಿಗೆ ಸ್ವಾಗತಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ
Kasaragod Crime News: ರಸ್ತೆಯಲ್ಲಿ ಬಿಯರ್ ಬಾಟ್ಲಿ ಒಡೆದ ಮೂವರ ಬಂಧನ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kasaragod: ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.