ರೈಲು ಮಾರ್ಗ ವಿರೋಧಿಸುವವರ ವಿರುದ್ಧ ಹೋರಾಟ : ಎಚ್ಚರಿಕೆ


Team Udayavani, Mar 17, 2018, 11:30 AM IST

OKKALIGA-16-3.jpg

ಮಡಿಕೇರಿ: ಕೊಡಗಿನಲ್ಲಿ ರೈಲು ಮಾರ್ಗ ಮತ್ತು ಹೆದ್ದಾರಿ ವಿಸ್ತರಣೆ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸುವವರ ಅಭಿವೃದ್ಧಿ ವಿರೋಧಿ ಮನೋಸ್ಥಿತಿಯ ಪರಿಸರವ್ಯಾದಿಗಳು ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಒಕ್ಕಲಿಗರ ಸಂಘ, ಯೋಜನೆಗಳಿಗೆ ತಡೆಯೊಡ್ಡುವವರ ವಿರುದ್ಧ ತೀವ್ರ ರೀತಿಯ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಜಿಲ್ಲಾ ಒಕ್ಕಲಿಗರ ಸಂಘಧ ಅಧ್ಯಕ್ಷ ಎಸ್‌.ಎಂ.ಚೆಂಗಪ್ಪ ಮಾತನಾಡಿ, ಕೊಡಗಿಗೆ ರೈಲು ಮಾರ್ಗ ಬರುವುದನ್ನುಶೇಕಡಾ 90ಕ್ಕೂ ಹೆಚ್ಚುಜನ ಸ್ವಾಗತಿಸುತ್ತಿದ್ದಾರೆ. ಆದರೆ ಪರಿಸರವಾದಿಗಳು ಹಾಗೂ ಅವರೊಂದಿಗೆ ಕೈಜೋಡಿಸಿರುವ ಕೆಲವರು ವಿನಾಕಾರಣ ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು. ರೈಲ್ವೆ ಯೋಜನೆ ಪರ ಇರುವವರೊಂದಿಗೆ ಚರ್ಚೆ ನಡೆಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸಂಘ ಕಾರ್ಯ ನಿರ್ವಹಿಸಲಿದೆ. ರೈಲು ಯೋಜನೆ ಬೇಕು ಎನ್ನುವವರು ನಮ್ಮೊಡನೆ ಕೈ ಜೋಡಿಸಲಿ ಎಂದು ಮನವಿ ಮಾಡಿದರು.

ಸಂಘದ ನಿರ್ದೇಶಕ ವಿ.ಪಿ.ಶಶಿಧರ್‌ ಮಾತನಾಡಿ, ರೈಲು ಮಾರ್ಗವನ್ನು ವಿರೋಧಿಸುತ್ತಿರುವ ಪರಿಸರವ್ಯಾದಿಗಳಿಗೆ ಜಿಲ್ಲೆಯ ಜನ ಬಲ ತುಂಬಲು ಮುಂದಾದರೆ ಮುಂದೊಂದು ದಿನ ಜನತೆಯೇ ತಮ್ಮ ಬಲವನ್ನು ಕಳೆದುಕೊಳ್ಳಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಜನತೆ ಪರಿಸರವ್ಯಾದಿಗಳಷಡ್ಯಂತ್ರಕ್ಕೆಬಲಿಯಾಗಬಾರದು ಎಂದರು.  ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಪರಿಸರವಾದಿಗಳು ಮಾಡಿದರೆ ಇದರ ವಿರುದ್ಧ ಬೃಹತ್‌ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ತಲ್ಚೆàರಿ-ಮೈಸೂರು ರೈಲು ಮಾರ್ಗದ ಯೋಜನೆ ವಿಚಾರದಲ್ಲಿ ದಕ್ಷಿಣ ಕೊಡಗಿನ ಜನರ ಭಾವನೆಗೆ ಗೌರವ ನೀಡುವುದಾಗಿ ಸ್ಪಷ್ಟಪಡಿಸಿದ ಅವರು, ಕುಶಾಲನಗರದವರೆಗೂ ರೈಲು ಮಾರ್ಗ ಬೇಡ ಎನ್ನುವವರ ಸಂಖ್ಯೆ ಹುಟ್ಟಿಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಕೊಡಗಿನ ಅಭಿವೃದ್ಧಿಗೆ ಯಾವ ಯೋಜನೆ ತಂದರೂ ಬೇಡ ಎನ್ನುವವರ ದೊಡ್ಡ ಪರಂಪರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆೆ. ರೈಲು, ಹೆದ್ದಾರಿ ಸೇರಿದಂತೆ ಎಲ್ಲಾ ಅಭಿವೃದ್ಧಿ ಯೋಜನೆಗಳಿಗೂ ವಿರೋಧ ವ್ಯಕ್ತವಾಗುತ್ತಿದೆ. ಕೊಡಗು ಜಿಲ್ಲೆಗೆ ರೈಲು ಮಾರ್ಗವೇ ಬೇಡ ಎನ್ನುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟು ಮಾಡಲಾಗುತ್ತಿದೆ ಎಂದು ಶಶಿಧರ್‌ ಆರೋಪಿಸಿದರು. 

ರೈಲು ಮಾರ್ಗದ ಬೇಡಿಕೆ ಗುಂಡೂರಾವ್‌ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲದಿಂದಲೂ ಕೇಳಿ ಬರುತ್ತಿದೆ. ರೈಲುಮಾರ್ಗಕ್ಕೆ ಕುಶಾಲನಗರದವರೆಗೂ ಸರ್ವೇ ಕಾರ್ಯವು ನಡೆದಿತ್ತು. ಕೊಡಗಿಗೆ ರೈಲ್ವೆ ಮಾರ್ಗವಾದರೆ ಆದರಿಂದ ಪ್ರವಾಸೋದ್ಯಮಕ್ಕೂಹೆಚ್ಚಿನ ಅನುಕೂಲವಾಗಲಿದೆ. ಆದರೆ ರೈಲು ಮಾರ್ಗವನ್ನು ವಿರೋಧಿಸುವ ಮೂಲಕ ಕೊಡಗನ್ನು ಅಪಖ್ಯಾತಿಗೆ ಗುರಿ ಮಾಡಲಾಗುತ್ತಿದೆ ಎಂದು ಶಶಿಧರ್‌ ಟೀಕಿಸಿದರು. ಕೆಲವು ಪರಿಸರವ್ಯಾದಿಗಳು ಕುಶಾಲನಗರದವರೆಗೂರೈಲು ಮಾರ್ಗ ಬೇಡ ಎಂದು ಹೋರಾಟ ನಡೆಸುತ್ತಿದ್ದಾರೆ. ಇಲ್ಲಿ ಸ್ಥಳೀಯರೇ ರೈಲು ಮಾರ್ಗವನ್ನು ಸ್ವಾಗತಿಸುವಾಗ ಪರಿಸರವಾದಿಗಳು ರೈಲು ಮಾರ್ಗ ವಿರೋಧಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ರೈಲು ಮಾರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ಸಮಾನ ಮನಸ್ಕರೊಂದಿಗೆ ಚರ್ಚೆ ನಡೆಸಿಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಕಾರ್ಯವನ್ನು ಕೂಡ ಮಾಡಲಾಗುತ್ತದೆ.ರೈಲು ಮಾರ್ಗವನ್ನು ತಡೆಯುವ ಹುನ್ನಾರವನ್ನು ಪರಿಸರವಾದಿಗಳು ಮುನ್ನಡೆಸಿದ್ದೇ ಆದರೆ ಹೋರಾಟದ ಕಿಚ್ಚು ಹೆಚ್ಚಾಗುತ್ತದೆ ಎಂದರು.  ರೈಲುಮಾರ್ಗ ಬರುವ ಮೊದಲೇ ಕಾವೇರಿ ನದಿ ಮತ್ತು ಮರ ಹನನದ ಕಾರಣ ನೀಡಿ ರೈಲ್ವೆ ಮಾರ್ಗವನ್ನುವಿರೋಧಿಸುವುದು ಸೂಕ್ತವಲ್ಲ. ಪರಿಸರವನ್ನು ಉಳಿಸಲು ಪರಿಸರವಾದಿಗಳು ವೈಜ್ಞಾನಿಕ ಚಿಂತನೆ ಮಾಡಲಿ. ಪರಿಸರಕ್ಕೆ ಹಾನಿಯಾಗದಂತೆಯೋಜನೆ ರೂಪಿಸಲು ಇಂದಿನ ಅಭಿವೃದ್ಧಿಯ ಯುಗದಲ್ಲಿ ಸಾಕಷ್ಟು ವ್ಯವಸ್ಥೆಗಳಿವೆ ಎಂದು ವಿ.ಪಿ.ಶಶಿಧರ್‌ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ವಿ.ಪಿ.ಸುರೇಶ್‌, ಶಿವಯ್ಯ, ನಿರ್ದೇಶಕ ಪೊನ್ನಪ್ಪ ಹಾಗೂ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ‌ ಎ.ಆರ್‌.ಮುತ್ತಣ್ಣ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ACT

Manjeshwar: ಬಂಧಿತರ ಪೈಕಿ ಓರ್ವ 15 ಪ್ರಕರಣಗಳಲ್ಲಿ ಆರೋಪಿ

POlice

Kumbla: ಪ್ರಾಣ ಲೆಕ್ಕಿಸದೆ ಹೊಳೆಗೆ ಹಾರಿ ಆರೋಪಿಯನ್ನು ಬಂಧಿಸಿದ ಪೊಲೀಸರು

Beete-Wood

Madikeri: ಬೀಟಿ ಮರ ಸಾಗಾಟ: ಸೊತ್ತು ಸಹಿತ ಓರ್ವನ ಬಂಧನ

ssa

Kasaragod: ಎಡನೀರು ಶ್ರೀಗಳ ಕಾರಿಗೆ ಹಾನಿ; ಇಬ್ಬರ ವಿರುದ್ಧ ಕೇಸು ದಾಖಲು

17

Kasargod: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಮತ್ತೆ ಕಲ್ಲು ತೂರಾಟ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.