ಲೇಔಟ್ ಸಮಸ್ಯೆ ಪರಿಹಾರಕ್ಕೆ ಸರಕಾರದ ಮೇಲೆ ಒತ್ತಡ : ಭರವಸೆ
Team Udayavani, Mar 26, 2018, 10:50 AM IST
ಮಡಿಕೆೇರಿ: ಲೇಔಟ್ ಅನುಮೋದನೆ ಮೂಲಕವೆ ಮನೆ ನಿರ್ಮಿಸಬೇಕೆನ್ನುವ ಸರಕಾರದ ನೂತನ ಆದೇಶ ಮಡಿಕೇರಿ ನಗರದ ಜನತೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಿ ನಿಯಮವನ್ನು ಸಡಿಲಗೊಳಿಸಲು ಮನವಿ ಮಾಡಲಾಗುವುದೆಂದು ನಗರಸಭೆಯ ಅಧ್ಯಕ್ಷರಾದ ಕೂಡಕಂಡಿ ಕಾವೇರಮ್ಮ ಸೋಮಣ್ಣ ಹಾಗೂ ಮೂಡಾ ಅಧ್ಯಕ್ಷರಾದ ಎ.ಸಿ.ಚುಮ್ಮಿ ದೇವಯ್ಯ ಭರವಸೆ ನೀಡಿದ್ದಾರೆ. ಕೊಡಗು ಪ್ರಸ್‌ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ನಗರಸಭೆ ಪ್ರತಿನಿಧಿಗಳು ಹಾಗೂ ಮೂಡಾ ಅಧ್ಯಕ್ಷರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೂಡಾಕ್ಕೆ ಸರಕಾರದಿಂದ ಬಂದಿರುವ ಹೊಸ ಆದೇಶದ ಬಗ್ಗೆ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಗಮನ ಸೆಳೆೆದರು. ನಗರದಲ್ಲಿ ಬ್ರಿಟೀಷರ ಕಾಲದಿಂದಲು ವಾಸವಿರುವ ನಿವಾಸಿಗಳಿಗೆ ಸರ್ಕಾರದ ಸಿಂಗಲ್ ಲೇಜೌಟ್ ಪ್ಲಾನ್‌ನಿಂದ ಗೊಂದಲ ಸೃಷ್ಟಿಯಾಗಿದೆ. ಈ ಆದೇಶದಂತೆ ಯಾರೇ ಮನೆ ನಿರ್ಮಿಸುವುದಾದರು ಲೇಜೌಟ್ ಅನುಮೋದನೆ ಪಡೆಯಬೇಕು. ಒಂದು ವೇಳೆ ಲೇಜೌಟ್ ಇಲ್ಲದೆ ಹೋದಲ್ಲಿ ಸ್ವಂತ ನಿವೇಶನವನ್ನು ಸಿಂಗಲ್ ಲೇಜೌಟ್ ಪ್ಲಾನ್‌ಗೆ ಅಳವಡಿಸಿ ಅನುಮೋದನೆ ಪಡೆಯಬೇಕು. ಆದರೆ, 4 ರಿಂದ 5 ಸೆಂಟ್ ಜಾಗ ಹೊಂದಿರುವ ಮತ್ತು ಬ್ರಿಟೀಷರ ಕಾಲದಿಂದ ವಾಸವಿರುವವರಿಗೆ ಸರ್ಕಾರದ ಆದೇಶದಂತೆ ನಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪ್ರಕಾಶ್ ಅವರು ತಿಳಿಸಿದರು.
ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ.ಎಸ್.ರಮೇಶ್ ಅವರು ಮಾತನಾಡಿ, ಸರ್ಕಾರದ ಈ ಆದೇಶದಿಂದಾಗಿ ಯಾರೂ ಮನೆ ನಿರ್ಮಿಸಿಕೊಳ್ಳಲಾಗದ ಸಂಕಷ್ಟದಲ್ಲಿದ್ದು, 500ಕ್ಕೂ ಹೆಚ್ಚು ಮನೆಗಳು ನಿರ್ಮಾಣವಾಗದೆ ಬಾಕಿ ಉಳಿದಿದೆಯೆಂದು ವಿಷಾದ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಮೂಡಾ ಅಧ್ಯಕ್ಷ ಎ.ಸಿ. ಚುಮ್ಮಿ ದೇವಯ್ಯ, ಈ ಆದೇಶ ಇಡೀ ರಾಜ್ಯಕ್ಕೆ ಅನ್ವಯವಾಗುತ್ತಿದ್ದು, ಗುಡ್ಡಗಾಡು ಪ್ರದೇಶವಾದ ಕೊಡಗಿನಲ್ಲಿ ಇದು ಸಮಸ್ಯೆಯಾಗಿ ಪರಿಣಮಿಸಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆೆಯುವ ಅಗತ್ಯವಿದೆ ಎಂದರು.
ಬೆಳಗಾವಿ ಅಧಿವೇಶನದಲ್ಲಿ ಶಾಸಕ ಕೆ.ಜಿ.ಬೋಪಯ್ಯ ಅವರು ಕೇಳಿದ ಪ್ರಶ್ನೆಗೆ ಸಂಬಂಧಿಸಿದ ಸಚಿವರು, ಮಡಿಕೇರಿಯಲ್ಲಿ ಮನೆ ನಿರ್ಮಾಣಕ್ಕೆ 11 ಅರ್ಜಿಗಳು ಮಾತ್ರ ಬಂದಿದ್ದು, ಈ ಅರ್ಜಿಗಳನ್ನು ತಿರಸ್ಕರಿಸಲಾಗಿದೆಯೆಂದು ಮಾಹಿತಿಯನ್ನು ನೀಡಿದ್ದರು ಎಂದು ಚುಮ್ಮಿ ದೇವಯ್ಯ ತಿಳಿಸಿದರು. ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ಲೇಜೌಟ್ ಗೊಂದಲದ ಬಗ್ಗೆ ಸರ್ಕಾರದ ಗಮನ ಸೆಳೆೆದು ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಇದೇ ಸಂದರ್ಭ ಮಾತನಾಡಿದ ಚುಮ್ಮಿ ದೇವಯ್ಯ, ಮೂಡಾದ ಮೂಲಕ ಲೇಜೌಟ್ ಅನುಮೋದನೆ ಪಡೆದ ನಿವೇಶನಗಳನ್ನು ಮಾತ್ರ ಸಾರ್ವಜನಿಕರು ಖರೀದಿಸುವಂತೆ ಸಲಹೆ ನೀಡಿದರು. ಕೆಲವು ಕಡೆ ಅನುಮೋದನೆ ಇಲ್ಲದೆ ಲೇ ಜೌಟ್‌ಗಳಲ್ಲಿ ಏನೂ ಅರಿಯದವರು ನಿವೇಶನ ಖರೀದಿಸಿದ್ದು, ಮುಂದಿನ ದಿನಗಳಲ್ಲಿ ಇದು ಸಂಕಷ್ಟಕ್ಕೆ ಎಡೆಮಾಡಿಕೊಡಲಿದೆ ಎಂದು ಅವರು ತಿಳಿಸಿದರು.
ನಗರಸಭೆಯಲ್ಲಿ ನಡೆದಿರುವ ಕಂದಾಯ ಸಂಗ್ರಹದಲ್ಲಿನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ನಗರಸಭೆಯ ಎಸ್‌ಡಿಪಿಐ ಸದಸ್ಯ ಅಮಿನ್ ಮೊಹಿಸಿನ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿನ ಅಭಿವೃದ್ಧಿಯ ಹಿನ್ನಡೆಗೆ ಹೊಂದಾಣಿಕೆಯ ಕೊರತೆಯೆ ಕಾರಣವೆಂದು ಕೆ.ಎಸ್. ರಮೇಶ್ ಅಭಿಪ್ರಾಯಪಟ್ಟರು. ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್‌ನ ಬಂಡಾಯ ಸದಸ್ಯ ಕೆ.ಎಂ. ಗಣೇಶ್ ಮಾತನಾಡಿ, ನಗರಸಭೆೆಗೆ ಸರ್ಕಾರದ ಕೊಡುಗೆ ಶೂನ್ಯವೆಂದು ಆರೋಪಿಸಿದರು. ಯಾವುದೇ ಸರ್ಕಾರ ಬಂದರು ಪ್ರತಿ ವರ್ಷ ನೀಡುವ ಅನುದಾನವನ್ನು ನೀಡುತ್ತದೆ. ವಿಶೇಷವಾಗಿ ಈ ಸರ್ಕಾರ ಏನೂ ನೀಡಿಲ್ಲವೆಂದು ಟೀಕಿಸಿ, ತಾನು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿರುವ ಹಿನ್ನೆಲೆಯಲ್ಲಿ ಅಧ್ಯಕ್ಷರು ತನ್ನ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ತನ್ನ ವಾರ್ಡ್‌ನ ಕೆಲಸ ಕಾರ್ಯಗಳಿಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿದರು.
ಟೀಕೆಗೆ ಉತ್ತರಿಸಿದ ಕಾವೇರಮ್ಮ ಸೋಮಣ್ಣ, ಕಾನೂನು ಬದ್ಧವಾಗಿ ಕಾರ್ಯಗಳು ಸುಸೂತ್ರ ವಾಗಿ ನಡೆಯುತ್ತಿದೆ. ಬೆಳಗ್ಗೆ 5.30ಕ್ಕೆ ನಗರ ಸಭೆಯ ಕಾರ್ಯಗಳಿಗೆ ಹಾಜರಾಗುವ ನಾನು ರಾತ್ರಿ 7.30ರವರೆಗು ಕರ್ತವ್ಯ ನಿರತಳಾಗಿರುತ್ತೇನೆ. ಯಾರಿಗೂ ಅಂಜುವುದಿಲ್ಲವೆಂದು ತಿಳಿಸಿದ ಕಾವೇರಮ್ಮ ಸೋಮಣ್ಣ, ಫಾರಂ ನಂ.3 ಗೊಂದಲವನ್ನು ನಿವಾರಿಸುವ ಭರವಸೆ ನೀಡಿದರು.ಕೊಡಗು ಪ್ರಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ
Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ
Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ
Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.