ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ,ಕುಡಿಯುವನೀರು ವಿತರಣೆ
Team Udayavani, Jun 2, 2019, 12:46 PM IST
ಪೆರ್ಲ:ಪ್ರಚಂಡ ಗೆಲುವಿನೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮಂತ್ರಿ ಮಂಡಲದ ಸತ್ಯ ಪ್ರತಿಜ್ಞೆಯ ಸಂದರ್ಭದಲ್ಲಿ ಮೇ 30ರಂದು ಬಿಜೆಪಿ ಎಣ್ಮಕಜೆ ಪಂಚಾಯತ್ ಸಮಿತಿಯಿಂದ ಸ್ಥಳೀಯ ಪ್ರದೇಶಗಳಲ್ಲಿ ಕುಡಿ ನೀರಿನ ಕ್ಷಾಮ ಎದುರಿಸುವ ಕುಟುಂಬಗಳಿಗೆ ಉಚಿತ ಕುಡಿಯುವ ನೀರು ವಿತರಿಸಿ ಮಾದರಿ ಆಗಿದ್ದಾರೆ.
ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು,ಪಕ್ಷದ ಧ್ವಜವನ್ನು ಪಂ.ಸದಸ್ಯೆ ರೂಪವಾಣಿ ಆರ್.ಭಟ್.ಮತ್ತು ಉದಯ ಚೆಟ್ಟಿಯಾರ್ ಅವರಿಗೆ ಹಸ್ತಾಂತರಿಸಿ ಕುಡಿಯುವ ನೀರು ವಿತರಣೆಗೆ ಚಾಲನೆ ನೀಡಿದರು. ಸ್ಥಳೀಯ ಪಂಚಾಯತು ಆಡಳಿತದ ನಿರಾಸಕ್ತಿಯಿಂದ ಜನರು ಕುಡಿನೀರಿನ ಲಭ್ಯತೆ ಇಲ್ಲದೆ ಪರದಾಡುತ್ತಾರೆ.ಈ ಸಂದರ್ಭದಲ್ಲಿ ಬಿಜೆಪಿ ಜನ ಪ್ರತಿನಿಧಿಗಳು ಉಚಿತವಾಗಿ ಜಲ ವಿತರಿಸುವುದು ಉತ್ತಮ ಕಾರ್ಯ ಎಂದವರು ಹೇಳಿದರು.
ಪಂ.ಸಮಿತಿ ಪ್ರಧಾನ ಕಾರ್ಯದರ್ಶಿ ಪದ್ಮಶೇಖರ್ ನೇರೋಳು ನೇತೃತ್ವದಲ್ಲಿ ಗ್ರಾ.ಪಂ.ಸದಸ್ಯರಾದ ಸತೀಶ್ ಕುಲಾಲ್,ಮಮತಾ ರೈ,ಎಸ್‌ಟಿ ಮೋರ್ಚ ನೇತಾರ ಸುರೇಶ್ ವಾಣೀನಗರ ನೀರಿನ ವಿತರಣೆ ಆರಂಬಿಸಿದ್ದು ಮಳೆಗಾಲದ ತನಕ ವಿತರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.