“ಬ್ರಹ್ಮಕಲಶೋತ್ಸವ ನಾಡಿನ ಪ್ರಗತಿಯ ದ್ಯೋತಕ’
Team Udayavani, Jan 20, 2019, 1:00 AM IST
ಮಂಜೇಶ್ವರ: ಬ್ರಹ್ಮಕಲಶೋ ತ್ಸವಗಳು ನಾಡಿನ ಪ್ರಗತಿಯ ದ್ಯೋàತಕವಾಗಿದ್ದು, ದೇವ ಹಾಗೂ ದೈವಾರಾಧನೆಯಿಂದ ನಮ್ಮ ಈಗಿನ ಜನ್ಮಕ್ಕೆ ಮಾತ್ರವಲ್ಲ ಹಿಂದಿನ ಹಾಗೂ ಮುಂದಿನ ಜನ್ಮಕ್ಕೂ, ಜನಾಂಗಕ್ಕೂ ಸತ್ಕಿàರ್ತಿ ಲಭಿಸಲು ಸಾಧ್ಯವೆಂದು ಉದ್ಯಾವರ ಮಾಡ ಅರಸು ಮಂಜಿಷ್ಣಾರು ದೈವಗಳ ಕ್ಷೇತ್ರದ ಅಣ್ಣ ದೈವದ ಪಾತ್ರಿ ರಾಜ ಬೆಳ್ಚಾಪ್ಪಾಡ ಅವರು ನುಡಿದರು.
ಅವರು ಬೆಜ್ಜ ಧೂಮಾವತಿ ಬಂಟ ದೈವಗಳ ಕ್ಷೇತ್ರದ ಶ್ರೀ ದೈವಗಳ ಭಂಡಾರ ಮನೆಯ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವದಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕೃಷ್ಣ ಪೂಜಾರಿ ದೇರಂಬಳ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ಜಿಲ್ಲಾ ಅಧ್ಯಕ್ಷೆ ಮೀರಾ ಆಳ್ವ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಕೌಡೂರು ಬೀಡು ಮಾರಪ್ಪ ಭಂಡಾರಿ, ಮೀಂಜ ಗ್ರಾಮ ಪಂಚಾಯತ್ ಸದಸ್ಯೆ ಕುಸುಮ ಮೋಹನ್ ಶುಭಾಶಂಸನೆಗೈದರು.
ಸಮ್ಮಾನ
ಭಂಡಾರ ಮನೆಯ ನಿರ್ಮಾಣದ ಕಾಷ್ಠ ಶಿಲ್ಪಿ ಬಾಬುರಾಜ ಆಚಾರ್ಯ ಕಡಂಬಾರು ಹಾಗೂ ಕಲ್ಲಿನ ಕೆಲಸ (ಮೇಸ್ತ್ರಿ)ವನ್ನು ಪೂರೈಸಿದ ಬಾಲಕೃಷ್ಣ ಶೆಟ್ಟಿ ಕಡಂಬಾರು ಅವರನ್ನು ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅನನ್ಯ ಪ್ರಾರ್ಥನೆ ಹಾಡಿದರು. ದುರ್ಗಾ ಮಾತೃ ಮಂಡಳಿ ಬೆಜ್ಜದ ಅಧ್ಯಕ್ಷೆ ಶೋಭಾ ಸ್ವಾಗತಿಸಿ, ಶಶಿ ಕುಮಾರ್ ಕುಳೂರು ಕಾರ್ಯಕ್ರಮ ನಿರೂಪಿಸಿ, ಚಂದ್ರಹಾಸ ಶೆಟ್ಟಿ ಬೆಜ್ಜ ವಂದಿಸಿದರು.
ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರಿಂದ ಬಂಜಿಗ್ ಹಾಕೋಡಿc ನಾಟಕ ಪ್ರದರ್ಶನಗೊಂಡಿತು. ಹೊಸಂಗಡಿ ಅಯ್ಯಪ್ಪ ಕ್ಷೇತ್ರದಿಂದ ವಾದ್ಯಘೋಷ ಗಳೊಂದಿಗೆ, ಸಂಘ ಸಂಸ್ಥೆ, ಮಠ, ಮಂದಿರಗಳ ಸಹಕಾರದೊಂದಿಗೆ, ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಹರಿದು ಬಂತು. ತಂತ್ರಿವರ್ಯರ ಆಗಮನದೊಂದಿಗೆ ಪೂರ್ಣಕುಂಭ ಸ್ವಾಗತ, ವಿವಿಧ ವೇದಿಕೆ ಕಾರ್ಯಕ್ರಮಗಳು ನಡೆಯಿತು.
ದೈವಿಕ ಮಹತ್ವವನ್ನು ಪಾಲಿಸುವುದು ಕರ್ತವ್ಯ
ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ, ದೈವಗಳ ಆರಾಧನೆ ಪ್ರಾಚೀನ ಕಾಲದಿಂದಲೇ ಆಚರಿಸುತ್ತಾ ಬಂದಿರುವ ಆಚರಣೆ. ಅವುಗಳ ಆಚರಣೆಯ ಪದ್ಧತಿ ಉಳಿದವುಗಳಿಗಿಂತ ಭಿನ್ನವಾಗಿದೆ. ಸನಾತನ ಧರ್ಮದ ಸಂಸ್ಕಾರ ಹಾಗೂ ಆಚರಣೆಗಳು ಸದಾ ಸನ್ಮಾರ್ಗದೆಡೆಗೆ ನಮ್ಮನ್ನು ಮುನ್ನಡೆಸುತ್ತವೆ. ಇದು ಪುರಾಣ ಇತಿಹಾಸಗಳಲ್ಲಿಯೂ ಉಲ್ಲೇಖನಿಯವಾಗಿರುವುದು ಕಂಡು ಬರುತ್ತದೆ. ಆದ್ದರಿಂದ ಪ್ರತಿ ಆಚರಣೆಗಳಲ್ಲೂ ದೈವಿಕ ಮಹತ್ವವನ್ನು ಪಾಲಿಸುವುದು ಕರ್ತವ್ಯ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.