ಮಂಜೇಶ್ವರ ಹೊಸಂಗಡಿಯಲ್ಲಿ ಪ್ರತಿಭಟನೆ
Team Udayavani, Jul 31, 2017, 6:50 AM IST
ಕುಂಬಳೆ: ತಿರುವನಂತಪುರದಲ್ಲಿ ಆರ್.ಎಸ್.ಎಸ್.ಕಾರ್ಯವಾಹ ರಾಜೇಶ್ ಅವರನ್ನು ಸಿಪಿಎಂ ಕೊಲೆಗೈದ ಕೃತ್ಯವನ್ನು ಖಂಡಿಸಿ ಮಂಜೇಶ್ವರ ಹೊಸಂಗಡಿಯಲ್ಲಿ ಸಂಘಪರಿವಾರದ ವತಿಯಿಂದ ಪ್ರತಿಭಟನೆ ನಡೆಯಿತು.
ಸ್ಥಳೀಯ ಗಣೇಶ ಮಂದಿರ ಬಳಿಯಿಂದ ಹೊರಟ ಮೆರವ ಣಿಗೆ ಹೊಸಂಗಡಿ ಪೇಟೆಯಲ್ಲಿ ಸಂಪನ್ನಗೊಂಡಿತು. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಎಂ. ಹರಿಶ್ಚಂದ್ರ ಮಂಜೇಶ್ವರ ಮಾತನಾಡಿ ರಾಜ್ಯ ಎಡರಂಗ ಸರಕಾರದ ಅಧಿಕಾರದದ ಮದದಲ್ಲಿ ಸಿಪಿಎಂ ಕೊಲೆ ರಾಜಕೀಯ ನಡೆಸುತ್ತಿದೆ. ಇದರಿಂದ ಆ ಪಕ್ಷದ ಅಧಃಪತನ ಆರಂಭಗೊಂಡಿದೆ ಎಂದರು. ನ್ಯಾಯವಾದಿ ನವೀನ್ ಬಡಾಜೆ, ಆದರ್ಶ್ ಬಿ.ಎಂ., ಪದ್ಮನಾಭ ಕಡಪ್ಪುರ, ಯಾದವ ಬಡಾಜೆ, ಅವಿನಾಶ್ ಮಂಜೇಶ್ವರ, ಭರತ್ ಕನಿಲ, ಸುರೇಶ್ ಶೆಟ್ಟಿ ಪರಂಕಿಲ, ಯಶ್‌ಪಾಲ್, ರಾಜೇಶ್ ತೂಮಿನಾಡು, ಭಾಸ್ಕರ ಬಿ.ಎಂ., ತಾರಾನಾಥ ಬಿ.ಎಂ., ಸಂತೋಷ್ ಅಡ್ಕ ನೇತೃತ್ವ ವಹಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.