ವಿದ್ಯಾರ್ಥಿಗಳಿಂದ ಮಾದಕ ದ್ರವ್ಯ ವಿರುದ್ಧ ರಾಲಿ
Team Udayavani, Jul 2, 2017, 3:45 AM IST
ಮುಳ್ಳೇರಿಯ: ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರುದ್ಧ ಅಡೂರು ಸರಕಾರಿ ಹಿರಿಯ ಪ್ರೌಢ ಶಾಲೆಯ ವಿದ್ಯಾರ್ಥಿ ಗಳು ಮಾದಕ ದ್ರವ್ಯ ವಿರುದ್ಧ ರಾಲಿಯನ್ನು ಹಮ್ಮಿ ಕೊಂಡಿದ್ದರು. ಶಾಲೆಯ ಸುತ್ತುಮುತ್ತಲು ಮಾದಕ ದ್ರವ್ಯ ವಿರುದ್ಧ ಸಂದೇಶವನ್ನು ಹರಡಲು ಕಿರು ಲೇಖನಗಳನ್ನು ವಿತರಿಸಿದರು. ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಸಂಘಟಿಸಿದ ಕಾರ್ಯಕ್ರಮದಲ್ಲಿ ಶಾಲೆಯ ಪೊಲೀಸ್ ಕೆಡೆಟ್‌ಗಳು, ಜೂಸYರ್ ರೆಡ್‌ಕ್ರಾಸ್‌ನ ಸ್ವಯಂ ಸೇವಕರು, ವಿಜ್ಞಾನ, ಸಮಾಜ ವಿಜ್ಞಾನ, ಆರೋಗ್ಯ ಕ್ಲಬ್ ಕಾರ್ಯಕರ್ತರು ಭಾಗವಹಿಸಿದರು.
ಶಾಲಾ ಸಭಾಂಗಣದಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ ಆದೂರು ಪೊಲೀಸ್ ಠಾಣೆಯ ಎಡಿಶನಲ್ ಸಬ್‌ಇನ್‌ಸ್ಪೆಕ್ಟರ್ ಎಂ.ರಾಜನ್ ಮಾದಕ ದ್ರವ್ಯ ವಿರುದ್ಧ ಪ್ರತಿಜ್ಞಾ ವಿಧಿಯನ್ನು ನಿರ್ವಹಿಸಿದರು. ರಾಲಿಯಲ್ಲಿ ಫ್ಲ್ಯಾಗ್ ಆಪ್ ನೆರವೇರಿಸಿದರು. ಮಾದಕ ದ್ರವ್ಯಗಳ ಕೆಡುಕನ್ನು ವಿವರಿಸುವ ಕರಳ್ ಎಂಬ ಮಲೆಯಾಳ ಕಿರುಚಲನಚಿತ್ರವನ್ನು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರದರ್ಶಿಸಲಾಯಿತು.
ಮುಖ್ಯ ಶಿಕ್ಷಕರಾದ ಅನೀಸ್ ಜಿ. ಮಾಸನ್ ಅಧ್ಯಕ್ಷತೆ ವಹಿಸಿದ್ದರು. ಸ್ಟಾಫ್ ಸೆಕ್ರೆಟರಿ ಡಿ. ರಾಮಣ್ಣ ಸ್ವಾಗತಿಸಿದರು. ಜೆ.ಆರ್.ಸಿ. ಕೊರ್ಡಿನೇಟರ್ ಎ.ರಾಜರಾಮ ವಂದಿಸಿದರು. ಸಿವಿಲ್ ಪೊಲೀಸ್ ಅಧಿಕಾರಿಗಳಾದ ಜಯಪ್ರಕಾಶ್, ಭಾಸ್ಕ ರನ್, ಎಸ್.ಪಿ.ಸಿ. ಸಿ.ಪಿ.ಒ.ಗಳಾದ ಎ.ಗಂಗಾಧರನ್, ಶಾರದಾ, ಅಧ್ಯಾಪಕರಾದ ಎ.ಎಂ.ಅಬ್ದುಲ್ ಸಲಾಂ, ವಿ.ಆರ್.ಶೀಲಾ, ಪಿ. ಇಬ್ರಾಹಿಂ ಖಲೀಲ್, ಸಂತೋಷ ಕುಮಾರ್, ಎಸ್.ಕೆ. ಅನ್ನಪೂರ್ಣಾ, ಎಂ. ಶಬ್‌ನ, ಎಂ ಸುನಿತಾ, ಪಿ.ಪಿ. ಧನಿಲ್, ಎ. ರಫೀಕ್, ಎ. ಶಾಖೀರಾ, ಪಿ.ವಿ. ಸ್ಮಿತ್, ಎ.ಎ. ಖಮರುನ್ನೀಸಾ, ಕೆ. ಸಂಧ್ಯಾ, ಸಿ. ರಮ್ಯ, ವಿದ್ಯಾರ್ಥಿಗಳಾದ ಎಸ್.ಮಂಜೂಷಾ, ಎ.ಎಸ್. ಶಾನಿಬಾ, ಋಷಿಕೇಶ್, ಸುರಾಜ್, ರಜಿನಾ, ನೌಫಲ್, ಅನಘಾ, ಆದಿರಾ, ಮೊದಲಾದವರು ನೇತೃತ್ವ ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.