ಕೃಷಿಯಲ್ಲಿ ಸಂತೃಪ್ತಿ ಕಂಡ ರಾಮ-ರಹೀಮರು


Team Udayavani, Aug 17, 2017, 6:15 AM IST

kas-BIG.jpg

ಬದಿಯಡ್ಕ: ಸಿಂಹ ಮಾಸದ (ಸೋಣ) ಮೊದಲ ದಿನವನ್ನು (ಇಂದು) ಕೇರಳಾದ್ಯಂತ ಕೃಷಿಕರ ದಿನವನ್ನಾಗಿ ಆಚರಿಸಲಾಗುತ್ತದೆ. ಕೇರಳದಲ್ಲಿ ಈ ದಿನದಂದು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ, ಸಮ್ಮಾನಿಸಿ ಗೌರವಿಸಲಾಗುತ್ತದೆ. ಪ್ರತಿ ಪಂಚಾಯತ್‌ ಗಳಲ್ಲೂ ಶ್ರೇಷ್ಠ ಕೃಷಿಕ ಪ್ರಶಸ್ತಿಗಳನ್ನು ನೀಡಿ ಕೃಷಿಕರನ್ನು ಪ್ರೋತ್ಸಾಹಿಸುವ ಕಾರ್ಯವೂ ಜರಗುತ್ತದೆ. 

ಸಿಂಹ ಮಾಸವು ಪ್ರಕೃತಿಯು ಧ್ಯಾನ್ಯ, ಫ‌ಲ, ವಸ್ತು ಗಳಿಂದ ಮೈದುಂಬಿ ನಳನಳಿಸುವ ಸಮಯ.  ಪೈರು ತಲೆದೂಗುವ ಕಾಲ. ಬಿತ್ತಿದ ಬೀಜಗಳು ಗಿಡ ಬಳ್ಳಿಗಳಲ್ಲಿ ಫ‌ಸಲಾಗಿ ತುಂಬಿ ತುಳುಕುವ ಸಮಯ ಕೃಷಿಕರ ಮುಖದಲ್ಲಿ ಸಂತೃಪ್ತಿಯ ಭಾವ ನಲಿದಾಡುವುದನ್ನು ಈ ಸಮಯದಲ್ಲಿ ಕಾಣಬಹುದು.ಅವಿರತ ಪರಿಶ್ರಮಕ್ಕೆ, ಸುರಿಸಿದ ಬೆವರಿಗೆ ಭೂಮಿ ತಾಯಿಯು ಒಲಿದು ಪ್ರಸಾದಿಸಿದ ಧ್ಯಾನ್ಯಗಳು, ತರಕಾರಿಗಳು,ಫ‌ಲ ಪುಷ್ಪ ಗಳು ರೈತನಿಗೆ ಹೊಸ ಗೆಲುವನ್ನು ನೀಡುವ ಈ ಸಂದರ್ಭದಲ್ಲಿ ಅವರಿಗೆ ಸಿಗುವ ಗೌರವಾದರಗಳು ಪರಿಶ್ರಮಕ್ಕೆ ಸಿಗುವ ಮನ್ನಣೆ ಎನ್ನಬಹುದು.

ಈ ವಿಶೇಷ ದಿನದಂದು ಕೃಷಿಕ್ಷೇತ್ರದಲ್ಲಿ ಸಾಮರಸ್ಯದ ಬೀಜ ಬಿತ್ತಿ, ಸ್ನೇಹದ ನೀರೆರೆದು ನಗುಸೂಸುವ ಇಬ್ಬರು ರೈತರಿಗೆ ನೀಡುವ ಅಕ್ಷರಗಳ ಗೌರವ ಈ ಲೇಖನ.

ನಮ್ಮ ಭಾರತ ದೇಶವು ಜಾತ್ಯತೀತ ರಾಷ್ಟ್ರವಾಗಿದ್ದು ಸಂಸ್ಕೃತಿ ಹಾಗೂ ಸಂಪ್ರದಾಯದಿಂದ ಇಡೀ ಜಗತ್ತಿ ನಲ್ಲಿ ಹೆಸರುವಾಸಿಯಾಗಿದೆ. ನಮ್ಮದು ಕೃಷಿ ಪ್ರಧಾನ ರಾಷ್ಟ್ರ. ದೇಶದ ಬೆನ್ನೆಲುಬಾಗಿರುವ ಕೃಷಿ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಿ ದೇಶದ ಸಂಪತ್ತನ್ನು ಹೆಚ್ಚಿಸಿ ಆ ಮೂಲಕ ಭಾರತೀಯರ ಹಸಿವನ್ನು ನೀಗಿಸಲು ಸಾಧ್ಯವಾಗಿರುವುದು ಸಾರ್ವಕಾಲಿಕ ಸತ್ಯ. ಹಳ್ಳಿಗಳು ನಮ್ಮ ದೇಶದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹೀಗೆ ಹಳ್ಳಿಯ ಜನರಲ್ಲಿ ಸಾಮಾನ್ಯವಾಗಿ ಪ್ರೀತಿ ವಿಶ್ವಾಸ ಹಾಗೂ ಪರಸ್ಪರ ಹೊಂದಾಣಿಕೆ ಮತ್ತು ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳುವುದನ್ನು ಕಾಣಬಹುದು.ಸಾಮಾಜಿಕ ಸ್ಥಿತಿ ಗತಿಗಳು ಬದಲಾದರೂ, ಜನ ಸಾಮಾನ್ಯರ ಬದುಕಿನ ಮೇಲೆ ಪ್ರಭಾವ ಬೀರಿದರೂ ಸಾಮರಸ್ಯದ ಜೀವನವನ್ನು ಸಾಗಿಸುತ್ತಾ ಮಾದರಿ ಯಾಗಿ ಬದುಕುತ್ತಿರುವುದು ಕಂಡು ಬರುತ್ತದೆ. 

ಮಧೂರು ಪಂಚಾಯತ್‌ ವ್ಯಾಪ್ತಿಯ  ಕೃಷಿ ಭೂಮಿಯೊಂದರಲ್ಲಿ ಜತೆಯಾಗಿ ಕೆಲಸ ನಿರ್ವಹಿಸುತ್ತಿರುವ ನಾರಾಯಣ ಹಾಗೂ ಮೊಹಮ್ಮದ್‌ ಈ ಈರ್ವರೂ ಕೂಡ ಪ್ರತ್ಯೇಕವಾಗಿ ಮೊದಲು ಈ ಕಾಯಕದಲ್ಲಿ ತೊಡಗಿದ್ದರು. ಅನಂತರದ ದಿನಗಳಲ್ಲಿ ಕಾರಣಾಂತರಗಳಿಂದ ಈ ಕಾಯಕವನ್ನು ಕೈ ಬಿಡಬೇಕಾಗಿ ಬಂತು. ಈಗ ಈ ಇಬ್ಬರು ಕೃಷಿಕರು ಜತೆಯಾಗಿ ಮಧೂರು ಪ್ರದೇಶದಲ್ಲಿ ಕೃಷಿಯೋಗ್ಯ ಭೂಮಿಯನ್ನು ಗೇಣಿಗೆ ಪಡೆದು ಜತೆಯಾಗಿ ತರಕಾರಿ ಬೆಳೆಯುತ್ತಿದ್ದಾರೆ. ಸುಮಾರು ಎರಡು ಎಕರೆ ವಿಶಾಲವಾದ ಪ್ರದೇಶದಲ್ಲಿ ಬೆಂಡೆ, ತೊಂಡೆ, ಮುಳ್ಳುಸೌತೆ, ಹೀರೆಕಾಯಿ, ಹಾಗಲ ಕಾಯಿಯನ್ನು ಹಾಗೂ ಇನ್ನಿತರ ತರಕಾರಿಗಳನ್ನು ಬೆಳೆಸುತ್ತಾರೆ.
 
ಈ ವರ್ಷ ಮಳೆಯು ಅನುಕೂಲವಾಗಿದ್ದುದರಿಂದ ಉತ್ತಮ ಫ‌ಸಲು ಬಂದಿರುವುದಾಗಿ ಅವರು ಹೇಳು ತ್ತಾರೆ. ಈ ಪ್ರದೇಶದಲ್ಲಿ ಕೀಟಬಾಧೆೆಯೂ ಕಡಿಮೆ ಇರುವುದರಿಂದ ಹೆಚ್ಚು ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸಬೇಕಾಗಿ ಬರುವುದಿಲ್ಲ ಎಂಬುದು ಅವರ ಅನುಭವದ ಮಾತು ಇಲ್ಲಿ ಬೆಳೆದ ತರಕಾರಿಗಳನ್ನು ಗದ್ದೆಯಿಂದಲೇ ಜನರು ಕೊಂಡುಕೊಳ್ಳುತ್ತಾರೆ. ಮಿಕ್ಕು ಳಿದ ತರಕಾರಿಗಳನ್ನು ಸಮೀಪದಲ್ಲಿರುವ ಅಂಗಡಿಗಳಲ್ಲಿ ಮಾರಾಟಮಾಡಲಾಗುತ್ತದೆ. ಹಾಗಾಗಿ ಇವರು ಬೆಳೆದ ತರಕಾರಿ ಇನ್ನೂ ಕಾಸರಗೋಡು ಮಾರುಕಟ್ಟೆ ತಲುಪಿಲ್ಲ. ಕೃಷಿ ಇಲಾಖೆಯಿಂದ ಕೊಡಲ್ಪಡುವ ಗೊಬ್ಬರವನ್ನು ಹಾಗೂ ಕೋಳಿ ಗೊಬ್ಬರ ಮತ್ತು ಇತರ ಸಾವಯವ ಗೊಬ್ಬರಗಳನ್ನು ಮಾತ್ರ ಬಳಸಿ ಉತ್ತಮ ಮಟ್ಟದ ಫ‌ಸಲು ಪಡೆಯುತ್ತಿರುವುದು ಮಾದರಿಯಾಗಿದೆ.

ಶ್ರಮಿಸಿದರೆ ಏನನ್ನೂ ಸಾಧಿಸಬಹುದು ಎಂಬಂತೆ ಬರಡು ಬಂಜರು ನೆಲದಲ್ಲೂ ಹಸಿರಿನ ಚಿಗುರು ಮೂಡಿಸಬಹುದು. ಎಲ್ಲರೂ ಒಂದೇ ಎನ್ನುವ ಭಾವನೆಯಿಂದ ಬದುಕಲು ಕಲಿತಾಗ ಪ್ರತಿಯೊಬ್ಬ ಭಾರತೀ ಯನ ಮನೆಮನದಲ್ಲಿ ಶಾಂತಿ, ಸಮಾಧಾನ ಮನೆ ಮಾಡಿ ನಿಶ್ಚಿಂತೆಯ ಜೀವನ ನಡೆಸಲು ಸಾಧ್ಯ. ಆ ನೆಮ್ಮದಿಯ ನಗು, ಸಂತೃಪ್ತಿಯ ಭಾವ, ಸಂತಸದ ನೆರಳು ಈ ಇಬ್ಬರ ಮನೆಗಳಲ್ಲಿ ಕಾಣಬಹುದು. ಎರಡೂ ಮನೆಯವರೂ ಜತೆಯಾಗಿ ಕೃಷಿಕಾಯಕದಲ್ಲಿ ತೊಡಗಿಸಿಕೊಂಡು ಮಣ್ಣಿನ ಮಕ್ಕಳಿಗೆ ಜಾತಿ ಮತದ ಬೇಲಿಯಿಲ್ಲ ಎಂಬುದನ್ನು ಸಾಬೀತುಪಡಿಸಿ ದ್ದಾರೆ. ಎಲ್ಲರೂ ತಿನ್ನುವ ಅನ್ನ ಯಾವುದೇ ಜಾತಿ, ಮತ, ಭೇದವಿಲ್ಲದ ಮಣ್ಣಿನ ಮಕ್ಕಳ ಋಣ.

ಅಖೀಲೇಶ್‌ ನಗುಮುಗಂ

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

5

Kasaragod: ಚಂದ್ರಗಿರಿ ಸೇತುವೆಯಿಂದ ಹೊಳೆಗೆ ಹಾರಿದ ಯುವಕ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

10

Poonch; ಸೇನಾ ವಾಹನ ದುರಂತ: ಕೊಡಗಿನ ಯೋಧ ಚಿಂತಾಜನಕ

5-madikeri

ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.