ಜಂತುಹುಳು ನಿವಾರಣೆಗೆ ರಾಮಬಾಣ ಗೇರು

ವಿಟಮಿನ್‌ ಸಿ, ಬಿ1, ಬಿ3 ಹೊಂದಿರುವ ಹಣ್ಣು

Team Udayavani, Mar 28, 2019, 6:30 AM IST

geru-hannu

ವಿದ್ಯಾನಗರ: ಪ್ರಕೃತಿ ಕಾಲಕ್ಕನುಗುಣವಾಗಿ ಒಂದಲ್ಲಾ ಒಂದು ರೀತಿಯಲ್ಲಿ ಮಾನವನ ಅಗತ್ಯಗಳನ್ನು ಅರಿತು ಫಸಲನ್ನು ನೀಡುವುದರ ಮೂಲಕ ಆರೋಗ್ಯವಂತ ಬದುಕಿನ ಸೂತ್ರ ಪ್ರಕೃತಿಯ ಮಡಿಲಲ್ಲಿ ಅಡಕವಾಗಿದೆ ಎಂಬ ರಹಸ್ಯವನ್ನು ತೆರೆದಿಡುತ್ತಾ ಬಂದಿದೆ. ಕಾಲ ಎಷ್ಟೇ ಬದಲಾಗಲಿ, ಪ್ರಕೃತಿಯಲ್ಲಿ ಉಂಟಾಗುವ ಬದಲಾವಣೆಗಳು ಕಾಲಕ್ಕನುಸಾರವಾಗಿಯೇ ಉಂಟಾಗುತ್ತದೆ ಎನ್ನುವುದು ಸತ್ಯ. ಬೇಸಗೆ ಬಂದಾಗ ಮಾವು, ಹಲಸು, ಗೇರು ಮುಂತಾದ ಹಣ್ಣು ಹಂಪಲುಗಳು ಪ್ರಕೃತಿಯ ಸೊಬಗನ್ನು ಹೆಚ್ಚಿಸುತ್ತದೆ.

ಗೇರು ಹಣ್ಣು ಮತ್ತು ನಾವು
ಗೇರು ಹಣ್ಣು ತಿಂದರೆ ಆರೋಗ್ಯಕ್ಕೆ ಲಾಭ ಜಾಸ್ತಿ ಎನ್ನುವುದು ನಮ್ಮ ಹಿರಿಯರು ಕಂಡುಕೊಂಡ ಸತ್ಯ. ಹಸಿದ ಹೊಟ್ಟೆಗೆ ಆಹಾರವಾಗಿ ಬಳಸುತ್ತಿದ್ದ ಗೇರು ಸಾಮಾನ್ಯ ಜನರ ಪಾಲಿಗೆ ವರದಾನವಾಗಿತ್ತು. ಧಾರಾಳವಾಗಿ ಫಸಲು ಬಿಡುತ್ತಿದ್ದ ಗೇರು ಹಣ್ಣುಗಳನ್ನು ಗೋವುಗಳಿಗೆ ಆಹಾರವಾಗಿಯೂ ಉಪಯೋಗಿಸುತ್ತಿದ್ದರು.ಇಂದೂ ದೇಶದ ಹಲವಾರು ಕಡೆಗಳಲ್ಲಿ ಇದನ್ನು ಕಾಣಬಹುದು.

ಉಪಯೋಗಗಳು
ಅನಾಕಾರ್ದಿಕ್‌ ಎಂಬ ಆಮ್ಲವನ್ನು ಹೊಂದಿರುವ ಈ ಹಣ್ಣು ಬ್ಯಾಕ್ಟೀರಿಯಾ ನಿರೋಧಕ. ಆದುದರಿಂದ ಹೊಟ್ಟೆಯಲ್ಲಿನ ಜಂತುಗಳಿಗೆ ರಾಮಬಾಣವಾಗಿರುವ ಗೇರುಹಣ್ಣು ವಿಟಮಿನ್‌ ಸಿ, ಬಿ1, ಬಿ3 ಮಾತ್ರವಲ್ಲದೆ ಕ್ಯಾಲಿÏಯಂ, ಬೀಟಾ ಕ್ಯಾರೋಟಿನ್‌ ಅಂಶಗಳನ್ನೂ ಹೇರಳವಾಗಿ ಒಳಗೊಂಡಿದೆ. ಅತಿವೇಗವಾಗಿ ಗಾಯಗಳನ್ನು ಗುಣ ಮಾಡುವ ಗೇರುಹಣ್ಣು ಮೂಳೆ ಸವೆತ ನಿವಾರಣೆಗೂ ಉಪಯುಕ್ತ. ಕೆಂಪು ರಕ್ತಕಣಗಳನ್ನು ವೃದ್ಧಿಯಾಗಿಸಿ ಕಣ್ಣಿನ ಊತ, ಕಣ್ಣಿನ ಪೊರೆಯ ತೊಂದರೆಗಳನ್ನು ನೀಗಿಸುವ ಗೇರುಹಣ್ಣು ಸೇವಿಸುವುದರಿಂದ ಹƒದಯದ ಸ್ನಾಯುಗಳು ಬಲಿಷ್ಠವಾಗುತ್ತದೆ.

ಹಾಗೆಯೇ ಕ್ಯಾನ್ಸರ್‌ ಕೋಶಗಳು ಬೆಳೆಯದಂತೆ ತಡೆಯಬಲ್ಲ ಗುಣವನ್ನೂ ಹೊಂದಿರುವುದಾಗಿ ಇತ್ತೀಚೆಗಿನ ಸಂಶೋಧನೆಗಳಲ್ಲಿ ಸಾಭೀತಾಗಿರುವುದಾಗಿ ಹೇಳಲಾಗುತ್ತದೆ. ದೇಹಕ್ಕೆ ಬೇಕಾದ ಕಬ್ಬಿಣದ ಅಂಶವೂ ಧಾರಾಳವಾಗಿರುವ ಗೇರು ದೇಹದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂಬುವುದು ಬಲ್ಲವರ ಅಭಿಪ್ರಾಯ.

ಗೇರುಹಣ್ಣಿನ ವೈನ್‌
ಬಹಳ ಹಿಂದಿನಿಂದಲೇ ವೈನ್‌ ತಯಾರಿಗಾಗಿ ಬಳಸುವ ವಸ್ತುಗಳಲ್ಲಿ ಗೇರುಹಣ್ಣಿಗೂ ಪ್ರಮುಖ ಸ್ಥಾನವಿದೆ. ಹಣ್ಣನ್ನು ಹುಳಿ ಬರಿಸಿ, ಕುದಿಸಿ ಬಟ್ಟಿ ಇಳಿಸಿ ತೆಗೆದ ವೈನ್‌ ಆರೋಗ್ಯಕ್ಕೆ ಉತ್ತಮ ಹಾಗೂ ಹೊಟ್ಟೆ ಸಂಬಂ  ಕಾಯಿಲೆಗಳನ್ನು ನಿವಾರಿಸಿ, ಜೀರ್ಣಕ್ರೀಯೆ ಚೆನ್ನಾಗಿ ಆಗುವಂತೆ ಮಾಡುತ್ತದೆ. ಪ್ರಸ್ತುತ ಕಾಲಘಟ್ಟದಲ್ಲು ಗೇರುಹಣ್ಣಿನ ವೈನ್‌ ತನ್ನ ಪ್ರಾಧಾನ್ಯತೆಯನ್ನು ಉಳಿಸಿಕೊಂಡಿದೆ.

ಪೋರ್ಚುಗೀಸಿನಿಂದ ಭಾರತಕ್ಕೆ
ಬ್ರೆಜಿಲ್‌ನ ಮುಖ್ಯ ಬೆಳೆಯಾದ ಗೇರನ್ನು ಭಾರತಕ್ಕೆ ತಂದವರು ಪೋರ್ಚುಗೀಸರು ಎಂದು ಚರಿತ್ರೆ ಹೇಳುತ್ತದೆ. ಕರಾವಳಿ ತೀರದ ಗುಡ್ಡಗಾಡುಗಳಲ್ಲಿ ಮೆಲ್ಲ ಮೆಲ್ಲನೆ ಹರಡಿ ಹಬ್ಬಿಕೊಂಡ ಗೇರು ಹಣ್ಣು ಇಂದು ಭಾರತಕ್ಕೆ ಆದಾಯ ತರುತ್ತಿರುವ ಎರಡನೆ ಅತಿದೊಡ್ಡ ಬೆಳೆ. ಹಳ್ಳಿಗಳಲ್ಲಿ ಗೇರು ತೋಪುಗಳು ಈಗಲೂ ಕಾಣಬಹುದಾಗಿದೆ.

ಗೋಡಂಬಿಗೆ ಬೇಡಿಕೆ
ಗೇರು ಹಣ್ಣಿನಂತೆ ಗೇರುಬೀಜವೂ ಮಾರುಕಟ್ಟೆ ಯಲ್ಲಿ ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದೆ. ಆಹಾರ ಪದಾರ್ಥಗಳಲ್ಲಿ, ಸಿಹಿತಿನಿಸುಗಳಲ್ಲಿ ಧಾರಾಳ ವಾಗಿ ಉಪಯೋಗಿಸಲ್ಪಡುವ ಗೋಡಂಬಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಆರೋಗ್ಯಕ್ಕೆ ಒಳ್ಳೆಯ ಪುಷ್ಠಿ ನೀಡುವ ಗೋಡಂಬಿಗೆ ಮಾರುಕಟ್ಟೆಯಲ್ಲಿ ಕಿಲೋ ಒಂದಕ್ಕೆ 400ರಿಂದ600ರ ವರೆಗೆ ನೀಡಬೇಕಾಗುತ್ತದೆ.ಬೆಳೆಗಾರರಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಕಿಲೋ ಗ್ರಾಂಗೆ 125-140ರ ವರೆಗೂ ಧಾರಣೆ ಲಭಿಸುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ಗೋಡಂಬಿಗೆ ಹೆಚ್ಚಿನ ಬೆಲೆ ಇರುವುದರಿಂದ ರಫ್ತಿನಲ್ಲಿಯೂ ನಮ್ಮ ದೇಶ ಮುಂದಿದೆ.ರುಚಿಯಲ್ಲೂ ಗೋಡಂಬಿಯದು ಎತ್ತಿದ ಕೈ. ಹುರಿದು ಅಥವಾ ಹಸಿಯಾಗಿಯೇ ಸೇವಿಸ ಬಹುದಾದ ಗೋಡಂಬಿಯಿಂದ ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಅತಿಯಾದ ಬೇಡಿಕೆಯಿದೆ.

- ವಿದ್ಯಾಗಣೇಶ್‌ ಆಣಂಗೂರು

ಟಾಪ್ ನ್ಯೂಸ್

Horoscope: ಈ ರಾಶಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ

Horoscope: ಈ ರಾಶಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ

Karnataka: ವಿದ್ಯುತ್‌ ದರದಂತೆ ವರ್ಷವೂ ಬಸ್‌ ಯಾನ ದರ ಹೆಚ್ಚಳ?

CKM-darga

Dispute: ಚಿಕ್ಕಮಗಳೂರಲ್ಲಿ ತಾರಕಕ್ಕೇರಿದ ದರ್ಗಾ ವಿವಾದ: ಬಿಗು ಪರಿಸ್ಥಿತಿ

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟುUdupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi-DC

Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

1-qeqeqe

HMPV ಸೋಂಕಿಗೆ ಆತಂಕ ಬೇಡ: ಐಸಿಎಂಆರ್‌

canada

Facing Dissent: ಕೆನಡಾ ಪ್ರಧಾನಿ ಹುದ್ದೆಗೆ ಟ್ರುಡೋ ರಾಜೀನಾಮೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Horoscope: ಈ ರಾಶಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ

Horoscope: ಈ ರಾಶಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ

Karnataka: ವಿದ್ಯುತ್‌ ದರದಂತೆ ವರ್ಷವೂ ಬಸ್‌ ಯಾನ ದರ ಹೆಚ್ಚಳ?

CKM-darga

Dispute: ಚಿಕ್ಕಮಗಳೂರಲ್ಲಿ ತಾರಕಕ್ಕೇರಿದ ದರ್ಗಾ ವಿವಾದ: ಬಿಗು ಪರಿಸ್ಥಿತಿ

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟುUdupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi-DC

Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.