ಕರ್ಕಾಟಕ ಮಾಸದ ಒಂದು ತಿಂಗಳು ರಾಮಾಯಣ ಮಾಸಾಚರಣೆ
Team Udayavani, Jul 8, 2017, 2:50 AM IST
ಕುಂಬಳೆ: ಕರ್ಕಾಟಕ ಮಾಸದಲ್ಲಿ ರಾಮಾಯಣ ವನ್ನು ಮನೆಮನೆಗಳಲ್ಲಿ ಪಾರಾಯಣ ಮಾಡುತ್ತಿದ್ದ ಪರಂಪರೆ ನಮ್ಮದು. ಇಂದಿನ ಆಧುನಿಕ ಜೀವನದಲ್ಲಿ ನಿತ್ಯಾನುಷ್ಠಾನವನ್ನು ಮರೆತ ಪರಿಣಾಮವಾಗಿ ಶಾರೀರಿಕ ದುರ್ಬಲತೆ, ಮಾನಸಿಕ ಗೊಂದಲ ಇದರ ಪರಿಣಾಮ ಕುಟುಂಬ ಜೀವನದಲ್ಲಿ ನಿರಾಸಕ್ತಿ, ಖನ್ನತೆಯಿಂದ ಮನೆಗಳಲ್ಲಿ ಸುಖ, ಶಾಂತಿ, ನೆಮ್ಮದಿ ಇಲ್ಲದೆ ಹಣ ವಿದ್ಯೆ, ಅಧಿಕಾರ, ವಸ್ತ್ರ, ಒಡವೆ, ವಾಹನ, ಆಹಾರ, ಮಕ್ಕಳಿದ್ದರೂ ದುಃಖದಿಂದ ಜೀವನ ಬರಡಾಗಿರುತ್ತದೆ.
ಹಿಂದೆ ಮನೆಗಳಲ್ಲಿ ಇದ್ದ ನೆಮ್ಮದಿ ಈಗ ಇಲ್ಲದಿರಲು ಏನು ಕಾರಣ? ಅದಕ್ಕಾಗಿ ಜನ್ಮ ಜನ್ಮಾಂತರದ ಕರ್ಮ ದೋಷ ನಿವಾರಣೆ ಗಾಗಿ ರಾಮ ನಾಮ ಜಪ ಯಜ ಹಾಗೂ ರಾಮಾಯಣ ಪಾರಾಯಣವನ್ನು ಕರ್ಕಾಟಕ ಮಾಸದಲ್ಲಿ ಆಹಾರ ಪದ್ಧತಿ ಯೊಂದಿಗೆ ಆಚರಿಸುವುದರಿಂದ ಒಂದು ವರ್ಷಕ್ಕೆ ಬೇಕಾದ ಚೈತನ್ಯ ವೃದ್ಧಿಯಾಗಿ ಜೀವನದಲ್ಲಿ ಆನಂದವನ್ನು ಪಡೆಯಲು ರಾಮಾಯಣ ಮಾಸಾಚರಣೆಯನ್ನು ನಡೆಸಲಾಗುತ್ತದೆ.
ಈ ನಿಟ್ಟಿನಲ್ಲಿ ಕುಂಬಳೆ ಗೋಪಾಲಕೃಷ್ಣನ ಸನ್ನಿಧಿಯಿಂದ ಕೊಲ್ಯ ಮೂಕಾಂಬಿಕಾ ಸನ್ನಿಧಿ ವರೆಗೆ 32 ದಿನಗಳ ಪರ್ಯಂತ ಮಠ ಮಂದಿರ, ದೇವಸ್ಥಾನ ಕೇಂದ್ರೀಕರಿಸಿ ಪುತ್ರ ಕಾಮೇಷ್ಟಿಯಿಂದ ಶ್ರೀರಾಮ ಪಟ್ಟಾಬಿಷೇಕದವರೆಗೆ ಪ್ರತಿನಿತ್ಯ ಒಂದೂವರೆ ಗಂಟೆಗಳ ಕಾಲ ಒಂದೊಂದು ದಿನ ರಾಮಾಯಣದ ಒಂದೊಂದು ವಿಷಯಕ್ಕೆ ಸಂಬಂಧಿಸಿ ಸಂಜೆ 6 ರಿಂದ 7.30ರ ವರೆಗೆ ಹರಿಕಥಾ ಕಾಲಕ್ಷೇಪ ನಡೆಯಲಿದೆ.
ಉದ್ದೇಶ: ಆರೋಗ್ಯವಂತ ವ್ಯಕ್ತಿ ಸಮೃದ್ಧ ಮನೆ, ಲೋಕಾ ಸಮಸ್ತಾಃ ಸುಖೀನೋ ಭವಂತು ಜಗತ್ತಿನಲ್ಲಿ ಯಾರೂ ದುಃಖೀ ಗಳಾಗಬಾರದು. ನಮ್ಮ ದುಃಖಕ್ಕೆ ನಾವೇ ಕಾರಣರು ಎಂಬ ಸತ್ಯವನ್ನು ಮರೆತು ಬದುಕುತ್ತಿರುವ ನಮಗೆ ದುಃಖದ ಮೂಲ ಎಲ್ಲಿದೆ ಎಂಬ ಅರಿವಾಗಬೇಕು. ಅಂತಹ ಅರಿವನ್ನು ಪಡೆ ಯಲು ರಾಮಾವತಾರದ ಕಥೆಯು ಸಹಕಾರಿಯಾಗಿದೆ. ಶರೀರಕ್ಕೆ ಬೇಕಾದ ಆಸನ, ಜಪ, ಸತ್ಸಂಗ, ಆಹಾರ ಪದ್ಧತಿಗಳಿಂದ ವ್ಯಕ್ತಿಗಳು ಶಕ್ತಿವಂತನಾಗಿ ಆರೋಗ್ಯವಂತ ವ್ಯಕ್ತಿಗಳಿಂದ ಸಮೃದ್ಧ ಮನೆಗಳಾದಾಗ ಗ್ರಾಮ ವಿಕಾಸವಾಗಿ ದೇಶ ಅಭಿವೃದ್ಧಿಯನ್ನು ಕಾಣಬಹುದು. ಅದಕ್ಕಾಗಿ ರಾಮ ಸೀತೆಯರ ಗುಣವನ್ನು, ರಾಮನ ಆದರ್ಶ, ಗ್ರಾಮಾದರ್ಶ ಮನೆಗಳು ನಮ್ಮದಾಗಬೇಕು ಅನ್ನುವ ಉದ್ದೇಶದಿಂದ ರಾಮಾಯಣ ಪಾರಾಯಣ ಕಾರ್ಯಕ್ರಮ ನಡೆಯಲಿದೆ.
ಕಣಿಪುರ ದೇವಸ್ಥಾನದಲ್ಲಿ ರಾಮಾಯಣದ ಪುತ್ರಕಾಮೇಷ್ಟಿ ಯಿಂದ ಪ್ರಾರಂಭಗೊಂಡು ಶ್ರೀರಾಮ ಪಟ್ಟಾಭಿಷೇಕದವರೆಗೆ ಸಂಪೂರ್ಣ ರಾಮಾಯಣದ ಕಥೆಯನ್ನು ಆಧರಿಸಿದ ಹರಿಕಥಾ ಕಾರ್ಯಕ್ರಮ ಪ್ರತಿನಿತ್ಯ ಒಂದೊಂದು ಕ್ಷೇತ್ರದಲ್ಲಿ ತಿಂಗಳು ಪರ್ಯಂತ ಸಂಜೆ 6 ರಿಂದ 7.30ರ ವರೆಗೆ ನಡೆಯಲಿದೆ. ಜತೆಗೆ 108 ರಾಮನಾಮ ಜಪಯಜ್ಞ, ಸಾಮೂಹಿಕ ಪ್ರಾರ್ಥನೆ, ಕ್ಷೇತ್ರ ಪ್ರದಕ್ಷಿಣೆ ಸಭಾ ಕಾರ್ಯಕ್ರಮ ನಡೆಯಲಿದೆ. ಇದೀಗ ಈ ಕಾರ್ಯಕ್ರಮದ ಯಶಸ್ಸಿಗಾಗಿ ಕೊಂಡೆವೂರು ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನ ದೊಂದಿಗೆ 50ಕ್ಕಿಂತಲೂ ಅಧಿಕ ಜನರ ಸಮಿತಿಯನ್ನು ರಚಿಸಿ ಕಾರ್ಯಪ್ರವೃತ್ತವಾಗಿದೆ.
ಕರ್ಕಾಟಕ ಮಾಸದಲ್ಲಿ ರಾಮಾಯಣವನ್ನು ಪಾರಾಯಣ ಮಾಡುವುದರಿಂದ ಸಮಸ್ಯೆಗಳು ಪರಿಹಾರವಾಗುತ್ತವೆ. ಜತೆಗೆ ರಾಮನ ಆದರ್ಶ, ರಾಮ ರಾಜ್ಯದ ಕಲ್ಪನೆ, ಸುಭಿಕ್ಷ ಕಲ್ಯಾಣ ಯೋಜನೆ, ಇದೆಲ್ಲ ರಾಮಾಯಣ ಪಾರಾಯಣದಿಂದ ಸಾಧ್ಯ, ಇಂದಿನ ಆಧುನಿಕ ಸಂಸ್ಕೃತಿಯ ಮಧ್ಯೆ ನಮ್ಮ ಹಿರಿಯರು ಆಚರಣೆ ಮಾಡುತ್ತಿದ್ದ ಸಂಸ್ಕೃತಿಯನ್ನು ಜೀವಂತವಿರಿಸುವ ಪ್ರಯತ್ನದ ಭಾಗ ರಾಮಾಯಣ ಮಾಸಾಚರಣೆಯಾಗಿದೆ.
ಇಂತಹ ಅಭೂತಪೂರ್ವ ಕಾರ್ಯಕ್ರಮವನ್ನು ನಡೆಸುವವರು ಪುಂಡರೀಕಾಕ್ಷ ಯೋಗಾಚಾರ್ಯ ಬೆಳ್ಳೂರು. ಇವರು ಯಕ್ಷಗಾನ, ಭಜನೆ, ದೀಪ ಪೂಜೆ, ಧಾರ್ಮಿಕ ಬಾಷಣ, ಹರಿಕಥೆಯ ಮೂಲಕ ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರು. 18 ವರ್ಷ ಭಾರತೀ ವಿದ್ಯಾಪೀಠ ಬದಿಯಡ್ಕದಲ್ಲಿ ಯೋಗಾಚಾರ್ಯರಾಗಿದ್ದು, ಕೂಡ್ಲಿ ಮಟದ ವಾಲುಕೇಶ್ವರ ಸ್ವಾಮೀಜಿಯವರು ಕೀರ್ತನಾ ಪ್ರವೀಣ ಬಿರುದನ್ನು ನೀಡಿ ಹರಸಿರುತ್ತಾರೆ. ಪೇಜಾವರ ಸ್ವಾಮೀಜಿಯವರು ಉಡುಪಿಯಲ್ಲಿ ಹರಿಕಥೆಗೆ ಆಹ್ವಾನಿಸಿ ಹರಸಿದ್ದಾರೆ. 2017 ರಲ್ಲಿ ಕುಂಬಳೆ ಸೀಮೆಯ 21 ದೇವಸ್ಥಾನಾಗಳಿಗೆ ಪರಿಕ್ರಮ ಯಾತ್ರೆಯನ್ನು ನಡೆಸಿರುತ್ತಾರೆ. ಅಲ್ಲದೆ ಪುತ್ರಕಾಮೇಷ್ಟಿ ಯಾಗದ ನೇತೃತ್ವವನ್ನು ವಹಿಸಿರುವರು. ಪ್ರಸ್ತುತ ಮಂಜೇಶ್ವರದ ನೀರೊಳಿಕೆಯಲ್ಲಿ ಶ್ರೀ ಮಾತಾ ಸೇವಾಶ್ರಮವನ್ನು ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.