ಸಿರಿಬಾಗಿಲು ಪ್ರತಿಷ್ಠಾನದ ‘ರಂಗಪ್ರಸಂಗ 5’ ಯಶಸ್ವೀ ಕಾರ್ಯಕ್ರಮ
Team Udayavani, Jul 19, 2017, 4:20 AM IST
ಸಿರಿಬಾಗಿಲು: ಸಿರಿ ಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೊಡು ಸಂಸ್ಥೆಯು ನಡೆಸಿಕೊಂಡು ಬರುತ್ತಿರುವ ರಂಗ ಪ್ರಸಂಗ ಸರಣಿ ಕಾರ್ಯಕ್ರಮದ ಐದನೇ ಕಾರ್ಯಕ್ರಮ ‘ರಂಗಪ್ರಸಂಗ 5’ ಶ್ರೀ ರಾಮ ಕಲಾಸಂಘ ಕೋಣನ ಕುಂಟೆ ಹಾಗೂ ಶ್ರೀ ಪಾಂಚಜನ್ಯ ಯಕ್ಷಗಾನ ಕಲಾಸಂಘ ನೇರಳಕಟ್ಟೆ ಸಂಸ್ಥೆಗಳ ಸಹಕಾರಗೊಂದಿಗೆ ಬೆಂಗಳೂರಿನ ಕೋಣನಕುಂಟೆ ಜೆ.ಪಿ. ನಗರದ ಶ್ರೀ ಲಕ್ಷ್ಮೀ ನರಸಿಂಹ ಧಾರ್ಮಿಕ ಸಭಾಂಗಣದಲ್ಲಿ ಯಶಸ್ವಿಯಾಗಿ ಜರಗಿತು. ರಂಗಪ್ರಸಂಗ ಉದ್ಘಾಟನಾ ಸಮಾರಂಭದಲ್ಲಿ ಕಿಶೋರ್ ಹೊಳ್ಳ, ಚಿದಾನಂದ ಕಾಮತ್ ಚೇವಾರು, ಸುಬ್ರಹ್ಮಣ್ಯ ಭಟ್ ಪರೆಂಗೋಡು, ಸುಬ್ರಹ್ಮಣ್ಯ ಭಟ್ ಪೆರುವೋಡಿ, ರಾಜಗೋಪಾಲ ಕನ್ಯಾನ ಭಾಗವಹಿಸಿದ್ದರು. ಸಿರಿಬಾಗಿಲು ಪ್ರತಿಷ್ಠಾನದ ರಾಮಕೃಷ್ಣ ಮಯ್ಯ ಸಿರಿಬಾಗಿಲು ಸ್ವಾಗತಿಸಿ, ರವಿಶಂಕರ ಭಟ್ ವಳಕುಂಜ ಪ್ರಾಸ್ತಾವಿಕ ನುಡಿಗಳನ್ನಾಡಿ ಗುರುರಾಜ ಹೊಳ್ಳ ಬಾಯಾರು ನಿರೂಪಿಸಿ, ವಂದಿಸಿದರು.
ರಂಗಪ್ರಸಂಗದ ಭಾಗವಾಗಿ ಮರೆಯಾಗುತ್ತಿರುವ ಪೂರ್ವರಂಗದ ಭಾಗಗಳನ್ನು ಪ್ರದರ್ಶಿಸಿ ದಾಖಲೀಕರಣ ಗೈಯ್ಯಲಾಯಿತು. ಅದರಂತೆ ನಿತ್ಯವೇಷ, ಷಣ್ಮುಖ ಸುಬ್ರಾಯ, ಅರ್ಧನಾರೀಶ್ವರ, ಚಪ್ಪರಮಂಚ, ಹನುಮಂತನ ಒಡ್ಡೋಲಗ ಮೊದಲಾದ ಅಪರೂಪದ ವೇಶಗಳನ್ನು ಆಡಿ ತೋರಿಸಲಾಯಿತು. ಬಳಿಕ ‘ಶ್ರೀರಾಮ ಕಲಾಸಂಘ ಕೋಣನ ಕುಂಟೆ’ ಇದರ ಹನ್ನೊಂದನೇ ರ್ವಾಕೋತ್ಸವದ ಪ್ರಯುಕ್ತ ‘ಶ್ರೀ ಪಾಂಚಜನ್ಯ ಯಕ್ಷಗಾನ ಕಲಾಸಂಘ ನೇರಳಕಟ್ಟೆ ಇವರಿಂದ ಪಾರಿಜಾತ-ನರಕಾಸುರ-ರಕ್ತರಾತ್ರಿ ಎಂಬ ಯಕ್ಷಗಾನ ಬಯಲಾಟ ಜರಗಿತು. ಸಮಾರಂಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಅವರನ್ನು ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.