ವಿದ್ಯಾರ್ಥಿಗಳಲ್ಲಿ ರಂಗಾಸಕ್ತಿ ಬೆಳೆಸಿ : ಮೈಮ್ ರಮೇಶ್
Team Udayavani, Mar 13, 2017, 4:53 PM IST
ಮುಳ್ಳೇರಿಯ: ವಿದ್ಯಾರ್ಥಿ ಗಳಲ್ಲಿ ಅಭಿನಯ, ನಿರ್ದೇಶನ ಮೊದಲಾದ ರಂಗಭೂಮಿ ಬಗೆಗಿನ ಆಸಕ್ತಿ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕು. ಶಾಲೆ, ಕಾಲೇಜು ಗಳಲ್ಲಿ ಇದಕ್ಕೆ ಪೂರಕವಾದ ವಾತಾವರಣ ವಿರಬೇಕು. ಸರಕಾರ, ಶಿಕ್ಷಕರು ಹಾಗೂ ಹೆತ್ತವರು ರಂಗಭೂಮಿಯನ್ನು ಬಳಸಿಕೊಂಡು ಶಿಕ್ಷಣವನ್ನು ನೀಡುವ ಸಾಧ್ಯತೆಗಳ ಕುರಿತು ಮುಕ್ತವಾಗಿ ಯೋಚಿಸಬೇಕು ಎಂದು ಖ್ಯಾತ ನಿರ್ದೇಶಕ, ರಂಗಾಯಣ ಮೈಸೂರಿನ ಮೈಮ್ ರಮೇಶ್ ಅವರು ಹೇಳಿದರು.
ಮುಳ್ಳೇರಿಯದ ಸರಕಾರಿ ಪ್ರೌಢ ಶಾಲೆಯಲ್ಲಿ ರಂಗ ಕುಟೀರ ಕಾಸರ ಗೋಡು ಸಂಸ್ಥೆಯ ಹವ್ಯಾಸಿ ಕಲಾವಿದ ರಿಂದ ಮುಸ್ಸಂಜೆಯಲ್ಲಿ ನಡೆದ ಘಟನೆ ಎಂಬ ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ಅಲೆಯ ಆಧುನಿಕ ನಾಟಕ ಗಳನ್ನು ನಿರ್ಮಿಸಲು, ನಿರ್ದೇಶಿಸಲು ಹಾಗೂ ಅಭಿನಯಿಸಲು ಸಾಕಷ್ಟು ಪ್ರತಿಭೆ, ಪರಿಶ್ರಮಗಳ ಅಗತ್ಯವಿದೆ, ಇವುಗಳನ್ನು ಆಸ್ವಾದಿ ಸಲು ಪ್ರೇಕ್ಷಕರಿಗೂ ಸಿದ್ಧತೆ ಬೇಕಾಗುತ್ತದೆ. ಟಿ.ವಿ.ಸೀರಿಯಲ್ ಹಾಗೂ ಕಮರ್ಷಿಯಲ್ ಸಿನಿಮಾಗಳು ಉತ್ತಮ ಅಭಿರುಚಿ ಬೆಳೆಸುವ ಬದಲು ಜನರ ಮನಸ್ಸನ್ನು ಸಂಕುಚಿತಗೊಳಿಸು ತ್ತವೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ| ನರೇಶ್ ಮುಳ್ಳೇರಿಯಾ ಅವರು ಮಾತನಾಡಿ, ನಾಟಕದಂತಹ ಸಾಂಸ್ಕೃತಿಕ ಚಟುವಟಿಕೆಗಳು ಅಂತರಂಗದ ವಿಕಾಸಕ್ಕೆ ಕಾರಣವಾಗುತ್ತವೆೆ. ಜನಪರವಾದ ವಿಚಾರಗಳನ್ನು ಜನರಿಗೆ ತಲುಪಿಸಲು ರಂಗಭೂಮಿಯಿಂದ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಡಯಟ್‌ನ ಅಧ್ಯಾಪಕ ಯತೀಶ್ ಕುಮಾರ್ ರೈ ಅಧ್ಯಾಪಕರಲ್ಲಿ ರಂಗ ಭೂಮಿಯ ಅಭಿರುಚಿಯನ್ನು ಬೆಳೆಸುವ ಯೋಜನೆಯನ್ನು ವಿವರಿಸಿದರು.
ರಂಗಕರ್ಮಿಗಳಾದ ಮುರಹರಿ ಪಿ, ಅಶೋಕ್ ಮುಳ್ಳೇರಿಯಾ, ಉಮೇಶ್ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು. ಉದಯ ಸಾರಂಗ್ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 2017ನೇ ಸಾಲಿನ ಕಣ್ಣೂರು ವಿ.ವಿ. ಕಲೋತ್ಸವದ ನಾಟಕ ಸ್ಪರ್ಧೆಯಲ್ಲಿ ಉತ್ತಮ ನಟ, ನಟಿ ಪ್ರಶಸ್ತಿ ಗಳಿಸಿದ ಶರಣ್ ರಾಜ್ ಕಾಟುಕುಕ್ಕೆ ಹಾಗೂ ಸಿ.ಎನ್. ಸಹನಾ ಶೆಟ್ಟಿ ಅವರಿಗೆ ಗೌರವಾರ್ಪಣೆ ನಡೆಯಿತು. ಮೈಮ್ ರಮೇಶ್ ಅವರನ್ನು ಸಮ್ಮಾನಿಸಲಾಯಿತು.
ನಾಟಕ ಪ್ರದರ್ಶನ : ಬಳಿಕ ಕರ್ನಾಟಕ ನಾಟಕ ಅಕಾಡೆಮಿ ಇದರ ಸಹಯೋಗದೊಂದಿಗೆ ರಂಗಕುಟೀರದ ಹವ್ಯಾಸಿ ಕಲಾವಿದರಿಂದ ಉಮೇಶ್ ಸಾಲಿಯಾನ್ ನಿರ್ಮಿಸಿದ ಮೈಮ್ ರಮೇಶ್ ನಿರ್ದೇಶಿಸಿದ ಎಂ.ಎಸ್.ಕೆ. ಪ್ರಭು ರಚನೆಯ ಮುಸ್ಸಂಜೆಯಲ್ಲಿ ನಡೆದ ಘಟನೆ ಎಂಬ ನಾಟಕ ಪ್ರದರ್ಶನ ಯಶಸ್ವಿಯಾಗಿ ಜರಗಿತು. ಪೃಥ್ವೀರಾಜ್ ಶೆಟ್ಟಿ, ಕಿರಣ್ ಕಲಾಂಜಲಿ, ಶಶಿಧರ ಎದುರ್ತೋಡು, ಅಶೋಕ ಕೊಡ್ಲಮೊಗರು, ಭಾರತಿ ಬಾಬು ಮೊದಲಾದವರು ಪಾತ್ರ ವಹಿಸಿದರು. ದಿವಾಕರ ಅಶೋಕ ನಗರ ಮತ್ತು ಅಶೋಕ ಮುಳ್ಳೇರಿಯ ಬೆಳಕು ನೀಡಿದರು. ಮುರಹರಿ ಪಿ., ಕಿರಣ್ ಕಲಾಂಜಲಿ ರಂಗಸಜ್ಜಿಕೆಯನ್ನು ನಿರ್ವಹಿಸಿದರು. ರಂಜಿತ್ ನೆಟ್ಟಣಿಗೆ ಸಂಗೀತವಿತ್ತರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.