ಪಯ್ಯನ್ನೂರು ವಿಧಾನಸಭೆ ಗ್ರಾಮಗಳಲ್ಲಿ ಕುಂಟಾರು ರವೀಶ ತಂತ್ರಿ ಪ್ರಚಾರ
Team Udayavani, Apr 14, 2019, 6:30 AM IST
ಬದಿಯಡ್ಕ : ಪಯ್ಯನ್ನೂರು ವಿಧಾನಸಭೆ ಕ್ಷೇತ್ರಗಳ ಗ್ರಾಮ ಗ್ರಾಮಗಳಲ್ಲಿ ಮತಗಳನ್ನು ತನ್ನದಾಗಿಸಲು ಎನ್‌ಡಿಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಮತಯಾಚನೆ ನಡೆಸಿದರು. ಪಯ್ಯನ್ನೂರಿನ ಓಲಯಂಪಾಡಿ , ಕಾಟುಕ್ಕಾರಂ, ಪೆರುವಬಾ ಮುಂತಾದ ಸ್ಥಳಗಳಲ್ಲಿ ರವೀಶ ತಂತ್ರಿ ಕುಂಟಾರು ಅವರಿಗೆ ಅಭೂತಪೂರ್ವ ಸ್ವಾಗತ ಲಭಿಸಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಐದು ವರ್ಷಗಳ ಕಾಲ ಜನಕ್ಷೇಮ ಯೋಜನೆಗಳ ಅನುಷ್ಠಾನದ ಬಗ್ಗೆ ಜನರಿಗೆ ತಿಳಿಯಪಡಿಸುತ್ತಲೇ ಮತಯಾಚನೆ ನಡೆಸಿದರು.
ಮಾತಮಂಗಲಕ್ಕೆ ತಲುಪಿದ ಅಭ್ಯರ್ಥಿಯನ್ನು ನಾಸಿಕ್ ಬ್ಯಾಂಡ್‌ಗಳೊಂದಿಗೆ ಅನೇಕ ಕಾರ್ಯಕರ್ತರು ಘೋಷಣೆಯೊಂದಿಗೆ ನಗರ ಪ್ರದಕ್ಷಿಣೆ ನಡೆಸಿ ಬಳಿಕ ಉದ್ಘಾಟನಾ ವೇದಿಕೆಗೆ ಕರೆ ತರಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಕೆ. ಜಯಪ್ರಕಾಶ್ ಪರ್ಯಟನೆ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ನಾನಾ ಕೇಂದ್ರಗಳಲ್ಲಿ ಸ್ವಾಗತ ನೀಡಲಾಯಿತು.
ಪೆರುವಾಬ ಮುತ್ತಪ್ಪನ್ ಕ್ಷೇತ್ರಕ್ಕೆ ತಲುಪಿದ ರವೀಶ ತಂತ್ರಿ ಅನುಗ್ರಹ ಪಡೆದುಕೊಂಡರು. ಶ್ರೀ ನಾರಾಯಣ ಗುರು ಕ್ಷೇತ್ರ ಪ್ರತಿಷ್ಠಾ ದಿನ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಧ್ಯಾಹ್ನ ನಾನಾ ಪ್ರದೇಶಗಳಲ್ಲಿ ಪರ್ಯಾಟನೆ ನಡೆಸಿ ಮತ ಯಾಚನೆ ನಡೆಸಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಪ್ರಮೀಳಾ ಸಿ.ನಾಯ್ಕ , ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ರಮೇಶ್, ಪಯ್ಯನ್ನೂರು ಮಂಡಲ ಅಧ್ಯಕ್ಷ ರಮೇಶನ್ ಮಾಸ್ತರ್, ರಾಜ್ಯ ಕೌನ್ಸಿಲ್ ಸದಸ್ಯರಾದ ಎ.ಕೆ.ರಾಜ ಗೋಪಾಲನ್, ಪ್ರಭಾಕರ ಕಡನ್ನಪಳ್ಳಿ, ಎಂ.ವಿ. ರವೀಂದ್ರನ್, ಕಣ್ಣೂರು ಜಿಲ್ಲಾ ಸಮಿತಿ ಸದಸ್ಯೆ ಎಂ. ಸರೋಜಿನಿ, ಮಂಡಲ ಪ್ರಧಾನ ಕಾರ್ಯದರ್ಶಿ ಗಂಗಾಧರನ್ ಕಾಳಿಶ್ವರಂ, ಎ.ಕೆ. ಮುರಳಿ, ಬಿಡಿಜೆಎಸ್ ಜಿಲ್ಲಾ ಉಪಾಧ್ಯಕ್ಷ ಪಿ.ಆರ್ ಸುನಿಲ್, ಬಿಜೆಪಿ ಪಯ್ಯನ್ನೂರು ಮಂಡಲ ಕಾರ್ಯದರ್ಶಿ ಪ್ರಸನ್ನಾ, ಪ್ರಿಯಾ, ಯುವಮೋರ್ಚಾ ರಾಜ್ಯ ಉಪಾಧ್ಯಕ್ಷ ಬಿಜು, ರಾಜ್ಯ ಸಮಿತಿ ಸದಸ್ಯರಾದ ಟಿ.ವಿ.ಶ್ರೀಕುಮಾರ್ ಮಾಸ್ತರ್, ವಿ.ಸಜಿತ ಟೀಚರ್, ಕಣ್ಣೂರು ಜಿಲ್ಲಾ ಉಪಾಧ್ಯಕ್ಷ ರೂಪೇಶ್, ಕೇರಳ ಕಾಂಗ್ರೆಸ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಜೇಕಬ್ ಕನ್ನಾಟ್ ಮತ್ತಿತರರು ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.