ಜನಪರ ಮುಷ್ಕರಕ್ಕೆ ಶಾಸಕ ರಝಾಕ್ ಬೆಂಬಲ
Team Udayavani, Feb 26, 2017, 3:48 PM IST
ಬದಿಯಡ್ಕ: ಮಲೆನಾಡು ರಸ್ತೆಗಳ ಶೋಚನೀಯಾವಸ್ಥೆಯನ್ನು ಪರಿಹರಿಸಬೇಕೆಂದು ಜನಪರ ಸಮಿತಿ ನೇತೃತ್ವದಲ್ಲಿ ನಡೆಯುತ್ತಿ ರುವ ಚಳವಳಿ 14ನೇ ದಿನಕ್ಕೆ ಕಾಲಿಟ್ಟಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹಕ್ಕೆ ಬೆಂಬಲ ಘೋಷಿಸಿ ಮಂಜೇಶ್ವರ ಶಾಸಕ ಪಿ.ಬಿ. ಅಬ್ದುಲ್ ರಝಾಕ್ ಆಗಮಿಸಿದುದು ಸಮರ ಸಮಿತಿಯ ಉತ್ಸಾಹಕ್ಕೆ ಪುಷ್ಠಿ ನೀಡಿತು.
ನಡೆಯುತ್ತಿರುವ ಮುಷ್ಕರ ಸಂಚಾರ ಸ್ವಾತಂತ್ರಕ್ಕೆ ಬೇಕಾಗಿರುವ ನಾಯ್ಯವಾದ ಹೋರಾಟವಾಗಿದ್ದು, ಈ ವಿಷಯದಲ್ಲಿ ವಿಧಾನಸಭಾ ಒಳಗಡೆ ಮತ್ತು ಹೊರಗಡೆ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಅವರು ಮುಷ್ಕರ ನಿರತರಿಗೆ ಬೆಂಬಲ ಸೂಚಿಸಿ ತಿಳಿಸಿದರು.
ಜನಸಾಮಾನ್ಯರು ತಮ್ಮ ಅತ್ಯಗತ್ಯ ಮೂಲಸೌಕರ್ಯಗಳಿಗಾಗಿ ಪರಿತಪಿಸುವುದು ಮತ್ತು ಅದರ ನೆರವೇರಿಸುವಿಕೆಗೆ ಸರಕಾರಕ್ಕೆ ಕಾಡಿ ಬೇಡುವ ಪರಿಸ್ಥಿತಿ ಎದುರಾಗಿರುವುದು ಪ್ರಜಾಪ್ರಭುತ್ವದ ಅಣಕವೆಂದು ಅವರು ತಿಳಿಸಿದರು.
ಗಡಿನಾಡು ಕಾಸರಗೋಡಿನ ಅಭಿವೃದ್ಧಿಯಲ್ಲಿ ರಾಜ್ಯ ಸರಕಾರ ತಳೆಯುತ್ತಿರುವ ನಿರಂತರ ನಿರ್ಲಕ್ಷ್ಯ ಖೇದಕರವೆಂದು ಅವರು ತಿಳಿಸಿದರು. ಈ ನಿಟ್ಟಿನಲ್ಲಿ ಜನಸಾಮಾನ್ಯರೊಂದಿಗೆ ಜಿಲ್ಲೆಯ ಶಾಸಕರು ಪಕ್ಷ ಬೇಧ ಮರೆತು ಬೇಡಿಕೆ ಈಡೇರಿಕೆಗೆ ಹೋರಾಡಲು ಬದ್ಧವೆಂದು ಅವರು ಭರವಸೆ ನೀಡಿದರು.
ಹಿರಿಯ ಕಾಂಗ್ರೆಸ್ ಸದಸ್ಯ ಬಾಲಕೃಷ್ಣ ಮಾಸ್ತರ್ ವೋಕೂìಡ್ಲು, ಗ್ರಾ.ಪಂ. ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್, ಹಿರಿಯ ಪತ್ರಿಕಾ ವಿತರಕ ರಾಮಚಂದ್ರ ಚೆಟ್ಟಿಯಾರ್, ನಿವೃತ್ತ ಪ್ರಾಂಶುಪಾಲ ನಾರಾಯಣ ಭಟ್ ಮೈರ್ಕಳ, ಪುರಂದರ ನೆಟ್ಟಣಿಗೆ, ಬಾಲಕೃಷ್ಣ ಶೆಟ್ಟಿ, ಮುಷ್ಕರ ಸಮಿತಿ ಅಧ್ಯಕ್ಷ ಮಾಹಿನ್ ಕೇಳ್ಳೋಟ್, ಶ್ಯಾಮ್‌ಪ್ರಸಾದ್ ಮಾನ್ಯ, ಆನ್ವರ್ ಓಝೋನ್, ಆಶ್ರಫ್ ಮುನಿಯೂರು, ಬಿಎಸ್‌ಪಿಯ ವಿಜಯನ್, ರತ್ನಾಕರ ಓಡಂಗಲ್ಲು, ಪಿ.ಕೆ. ಗೋಪಾಲಕೃಷ್ಣ ಭಟ್, ಅವಿನಾಶ್ ರೈ, ಅಬ್ದುಲ್ ಲೇತಿಫ್, ಆಶ್ರಫ್ ಮೀಡಿಯಾ ಕ್ಲಾಸಿಕಲ್ಸ್ ಮೊದಲಾದವರು ಮಾತನಾಡಿದರು.
ಸತ್ಯಾಗ್ರಹ ನಿರತರಾದ ಜನಪರ ಸಮಿತಿಯ ನೌಶಾದ್ ಕಾಡಮನೆ ಹಾಗೂ ವ್ಯಾಪಾರಿ ಮುಂದಾಳು ಜಗನ್ನಾಥ ಆಳ್ವ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mukund MGM Realty: ಶೀಘ್ರದಲ್ಲೇ ಮತ್ತೆರಡು ಬ್ಯುಸಿನೆಸ್ ಸೆಂಟರ್ಗಳು ಪ್ರಾರಂಭ
Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ
ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ
Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ
Tulu Film: ರೂಪೇಶ್ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್ ಸ್ಟಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.