11 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌,ಇಡುಕ್ಕಿಯಲ್ಲಿ ಗುಡ್ಡ ಕುಸಿತ


Team Udayavani, Aug 19, 2018, 6:00 AM IST

rain1.jpg

ಕಾಸರಗೋಡು: ಪ್ರಕೃತಿಯ ಮುನಿಸಿಗೆ ತತ್ತರಿಸಿರುವ ಕೇರಳ ರಾಜ್ಯದ ನೆರೆ ಪೀಡಿತ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯ ಗಂಭೀರತೆಯನ್ನು ಮನನ ಮಾಡಿಕೊಂಡು ತುರ್ತು ಪರಿಹಾರವಾಗಿ 500 ಕೋಟಿ ರೂ. ಸಹಾಯ ಘೋಷಿಸಿದ್ದಾರೆ. 

ಮುಖ್ಯಮಂತ್ರಿ, ರಾಜ್ಯಪಾಲ ಮತ್ತು ಕೇಂದ್ರ ಸಚಿವ ಅಲೊ#àನ್ಸಾ ಕಣ್ಣಂತ್ತಾನಂ ಅವರೂ ಪ್ರಧಾನಿ ಜತೆಗಿದ್ದರು. ಬೆಳಗ್ಗೆ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ವೈಮಾನಿಕ ಸಮೀಕ್ಷೆ ವಿಳಂಬವಾಗಿ ಆರಂಭಿಸಲಾಯಿತು.

ಜಲಪ್ರಳಯದ ದುರಂತದ ಬಗ್ಗೆ ಅವಲೋಕನ ನಡೆಸಲು ಪ್ರಧಾನಿ ಆ.17 ರಂದು ರಾತ್ರಿ 10.50 ಕ್ಕೆ ವಿಶೇಷ ವಿಮಾನದಲ್ಲಿ ದಿಲ್ಲಿಯಿಂದ ಹೊರಟು ತಿರುವನಂತಪುರದಲ್ಲಿ ಬಂದಿಳಿದಿದ್ದರು. ರಾತ್ರಿ ತಿರುವನಂತಪುರದಲ್ಲೇ ಉಳಿದು ಕೊಂಡ ಪ್ರಧಾನಿ ಶನಿವಾರ ಬೆಳಗ್ಗೆ ರಾಜ್ಯಪಾಲ, ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಕಣ್ಣಂತ್ತಾನಂ ಅವರ ಜತೆ ತಿರುವನಂತಪುರದಲ್ಲಿ ಸ್ಥಿತಿಗತಿಗಳ ಬಗ್ಗೆ ಸಮಾಲೋಚನೆ ನಡೆಸಿದ ಬಳಿಕ ವಿಮಾನದಲ್ಲಿ ಅವರ ಜೊತೆಯಲ್ಲಿ ಕೊಚ್ಚಿಯಲ್ಲಿ ಬಂದಿಳಿದರು. 

ಅಲ್ಲಿಂದ ನೌಕಾ ಪಡೆಯ ವಿಶೇಷ ಹೆಲಿಕಾಪ್ಟರ್‌ನಲ್ಲಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಜತೆ ಪ್ರಳಯ ಪೀಡಿತ ಪ್ರದೇಶಗಳಿಗೆ ವೈಮಾನಿಕ ಸಮೀಕ್ಷೆ ನಡೆಸಲು ಮುಂದಾಗಿರುವಂತೆಯೇ ಪ್ರತಿಕೂಲ ಹವಾಮಾನದಿಂದ ವೈಮಾನಿಕ ಸಮೀಕ್ಷೆ ನಡೆಸುವುದು ಭದ್ರತೆಯ ದೃಷ್ಟಿಯಿಂದ ಕೈಬಿಡುವಂತೆ ನೌಕಾಪಡೆಯ ಉನ್ನತ ಅಧಿಕಾರಿಗಳು ವಿನಂತಿಸಿದರು.
 
ಆ ಹಿನ್ನೆಲೆಯಲ್ಲಿ ವೈಮಾನಿಕ ಸಮೀಕ್ಷೆಯನ್ನು ದಿಢೀರ್‌ ರದ್ದುಪಡಿಸುವ ತೀರ್ಮಾನ ಕೈಗೊಳ್ಳಲಾಯಿತಾದರೂ, ಕೆಲವು ಕ್ಷಣಗಳ ಬಳಿಕ ಈ ತೀರ್ಮಾನವನ್ನು ಬದಲಾಯಿಸಿಕೊಂಡು ವೈಮಾನಿಕ ಸಮೀಕ್ಷೆ ನಡೆಸಿದರು.

ತಗ್ಗಿದ ಮಳೆ ಬಿರುಸು
ರಾಜ್ಯದ ಹಲವು ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿಯಿಂದ ಮಳೆಯ ಬಿರುಸು ತಗ್ಗತೊಡಗಿದೆ. ಕೋಟ್ಟಯಂ, ತಿರುವನಂತಪುರ ಮತ್ತು ಚೆಂಗನ್ನೂರಿನಲ್ಲಿ ಭಾರೀ ಮಳೆಯಾಗುತ್ತಿದೆ. ಇಡುಕ್ಕಿ ಮತ್ತು ಮುಲ್ಲಪೆರಿಯಾರ್‌ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಕುಸಿಯತೊಡಗಿದ್ದು, ಇದರಿಂದ ನೆಮ್ಮದಿ ತಂದಿದೆ. ನೆರೆಯಿಂದ ಆವೃತ್ತವಾಗಿರುವ ಚಾಲಕುಡಿ ಸೇರಿದಂತೆ ಇತರ ಪ್ರದೇಶಗಳಲ್ಲಿ ನೆರೆ ನೀರು ತಗ್ಗತೊಡಗಿದೆ. ಪತ್ತನಂತಿಟ್ಟ ಜಿಲ್ಲೆಯಲ್ಲಿ ಹಲವು ಪ್ರದೇಶಗಳಲ್ಲಿ ನೆರೆ ನೀರು ಇನ್ನೂ ಮುಂದುವರಿದಿದೆ. ಪ್ರಳಯ ಪೀಡಿತ ಎಲ್ಲಾ ಜಿಲ್ಲೆಗಳಲ್ಲಿ ಸೇನಾ ಪಡೆ, ನೌಕಾಪಡೆ ಮತ್ತು ವ್ಯೋಮ ಸೇನಾ ಪಡೆಯ ಹಲವು ತುಕಡಿಗಳು ಆಹೋರಾತ್ರಿ ನಿರಂತರವಾಗಿ ರಕ್ಷಾ ಕಾರ್ಯಾಚರಣೆ ನಡೆಸುತ್ತಿದೆ.

ಮುಂಗಾರು ಮಳೆ ಆರಂಭವಾದಲ್ಲಿಂದ ಈ ವರೆಗೆ ಕೇರಳದಲ್ಲಿ 324 ಮಂದಿ ಬಲಿಯಾಗಿದ್ದಾರೆ. ನಾಲ್ಕು ಲಕ್ಷ ಜನರು ನಿರಾಶ್ರಿತರಾಗಿದ್ದಾರೆ. ಆ.17 ರಂದು 45 ಮಂದಿ ಸಾವಿಗೀಡಾಗಿದ್ದರು. 82,442 ಮಂದಿಯನ್ನು ರಕ್ಷಿಸಲಾಗಿದೆ. ರೈಲು, ಭೂಸಾರಿಗೆ ಮತ್ತು ವಿಮಾನ ಸೇವೆಯೂ ಅಸ್ತವ್ಯಸ್ತಗೊಂಡಿದೆ. ಮಂಗಳೂರಿನಿಂದ ಕಲ್ಲಿಕೋಟೆಯ ವರೆಗೆ ಮಾತ್ರವೇ ರೈಲು ಸಂಚಾರ ನಡೆಯುತ್ತಿದೆ. ಸಹಸ್ರಾರು ಮಂದಿ ತಮ್ಮ ಮನೆ ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ಕೃಷಿ ನಾಶ ನಷ್ಟವನ್ನು ಇನ್ನಷ್ಟೇ ಲೆಕ್ಕಹಾಕಬೇಕಾಗಿದೆ. ಇದೇ ಸಂದರ್ಭದಲ್ಲಿ ಪ್ರವಾಹ ಪೀಡಿತ ಕೇರಳಕ್ಕೆ ಆರ್ಥಿಕ ಸಹಾಯ ಹರಿದು ಬರುತ್ತಿದೆ.
ಪ್ರವಾಹದಿಂದ ಕೇರಳಕ್ಕೆ ಸಹಸ್ರಾರು ಕೋಟಿ ರೂ. ನಾಶನಷ್ಟ ಉಂಟಾಗಿದೆ. ಅದಕ್ಕೆ ಹೊಂದಿಕೊಂಡು ಕೇಂದ್ರ ಸರಕಾರ ಸಹಾಯ ಒದಗಿಸಬೇಕೆಂದು ಮುಖ್ಯಮಂತ್ರಿ ಪ್ರಧಾನಿಯವರನ್ನು ವಿನಂತಿಸಿದ್ದಾರೆ. ಅದರಂತೆ ತುರ್ತು ಪರಿಹಾರವಾಗಿ 500 ಕೋಟಿ ರೂ. ಪ್ರಧಾನಿ ನೆರವು ಘೋಷಿಸಿದ್ದಾರೆ. ಮಾತ್ರವಲ್ಲದೆ ಅಗತ್ಯದ ಸಹಾಯವನ್ನು ಮುಂದೆ ನೀಡಲಾಗುವುದೆಂದು ಪ್ರಧಾನಿ ಭರವಸೆ ನೀಡಿದ್ದಾರೆ.

ಇಡುಕ್ಕಿಯಲ್ಲಿ  : ನಾಲ್ವರ ಸಾವು
ಇಡುಕ್ಕಿ ಜಿಲ್ಲೆಯ ಎರಡು ಕಡೆಗಳಲ್ಲಿ ಉಂಟಾದ ಗುಡ್ಡೆ ಕುಸಿತದಿಂದ ನಾಲ್ವರು ಸಾವಿಗೀಡಾಗಿದ್ದಾರೆ. ಆ.17 ರಂದು ರಾತ್ರಿ ಚೆರುತೋಣಿಯಲ್ಲಿ ಸಂಭವಿಸಿದ ಗುಡ್ಡೆ ಕುಸಿತದಿಂದ ಒಂದೇ ಕುಟುಂಬದ ಮೂವರು ಸಹಿತ ನಾಲ್ವರು ಸಾವಿಗೀಡಾದರು. 15 ಮಂದಿ ಕೆಎಸ್‌ಆರ್‌ಟಿಸಿ ಬಸ್‌ ನೌಕರರು ಅದ್ಭುತಕರವಾಗಿ ಅಪಾಯದಿಂದ ಪಾರಾದರು. ಅಯ್ಯನ್‌ಕುನ್ನೇಲ್‌ ಮ್ಯಾಥ್ಯೂ ಮತ್ತು ಕುಟುಂಬ ಸದಸ್ಯರು ಸಾವಿಗೀಡಾದವರು.

ಕಟ್ಟಪ್ಪನ ವೆಳ್ಳಾಯಾಂಕುಡಿಯಲ್ಲಿ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಮುಂಜಾನೆ 1.15 ಕ್ಕೆ ಗುಡ್ಡೆ ಕುಸಿದರೂ 15 ಮಂದಿ ಕೆಎಸ್‌ಆರ್‌ಟಿಸಿ ನೌಕರರು ಯಾವುದೇ ಅಪಾಯವಿಲ್ಲದೆ ಪಾರಾದರು. ಬಸ್‌ಗಳು ಮಣ್ಣಿನಡಿಯಲ್ಲಿ ಸೇರಿಹೋಗಿದೆ. ಈ ಪ್ರದೇಶದ ಆರು ಕಡೆಗಳಲ್ಲಿ ಗುಡ್ಡೆ ಕುಸಿತ ಉಂಟಾಗಿದ್ದು, ಆರು ಕಟ್ಟಡಗಳು ಹಾನಿಗೀಡಾಯಿತು. ಈ ಪ್ರದೇಶದಲ್ಲಿರುವ ಕುಟುಂಬ ಗಳನ್ನು ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.

ಕಟ್ಟೆಚ್ಚರ 
ಕಾಸರಗೋಡು, ಕೊಲ್ಲಂ ಮತ್ತು ತಿರುವನಂತಪುರ ಜಿಲ್ಲೆಯ ಹೊರತು ಪಡಿಸಿ 11 ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಕೊಲ್ಲಂ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap ಮಂಜನಾಡಿ: ಬೈಕ್‌ಗೆ ಲಾರಿ ಢಿಕ್ಕಿ ಹೊಡೆದು ಓರ್ವ ಸಾವು

Road Mishap ಮಂಜನಾಡಿ: ಬೈಕ್‌ಗೆ ಲಾರಿ ಢಿಕ್ಕಿ ಹೊಡೆದು ಓರ್ವ ಸಾವು

Kasaragod: ತನಿಖೆಗೆ ಬಂದ ಪೊಲೀಸರಿಗೆ ಕಾರು ಢಿಕ್ಕಿ; ಆನ್‌ಲೈನ್‌ ವಂಚನೆ ಆರೋಪಿ ಪರಾರಿ

Kasaragod: ತನಿಖೆಗೆ ಬಂದ ಪೊಲೀಸರಿಗೆ ಕಾರು ಢಿಕ್ಕಿ; ಆನ್‌ಲೈನ್‌ ವಂಚನೆ ಆರೋಪಿ ಪರಾರಿ

Kasaragod ಪ್ರಸಾದ್‌ ನೇತ್ರಾಲಯ ಸೂಪರ್‌ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಆರಂಭ

Kasaragod ಪ್ರಸಾದ್‌ ನೇತ್ರಾಲಯ ಸೂಪರ್‌ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಆರಂಭ

Kasaragod: ಮನೆಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನ: ಬಂಧನ

Kasaragod: ಮನೆಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನ: ಬಂಧನ

Kasaragod: ವಾಯುಭಾರ ಕುಸಿತ; ಭಾರೀ ಮಳೆ ಸಾಧ್ಯತೆ 

Kasaragod: ವಾಯುಭಾರ ಕುಸಿತ; ಭಾರೀ ಮಳೆ ಸಾಧ್ಯತೆ 

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.