ಬಿಡುಗಡೆಗೆ ಕ್ರಮ: ಸಚಿವ ಮುರಳೀಧರನ್
ಇಂಡೋನೇಷ್ಯಾದಲ್ಲಿ ಸಿಲುಕಿರುವ ಭಾರತೀಯರು
Team Udayavani, Jul 20, 2019, 5:30 AM IST
ಕಾಸರಗೋಡು: ದಿಕ್ಕು ತಪ್ಪಿ ಇಂಡೋನೇಷ್ಯಾದ ಅಧಿಕಾರ ವ್ಯಾಪ್ತಿ ಗೊಳಪಟ್ಟ ಸಮುದ್ರ ತೀರ ಪ್ರವೇಶಿಸಿ ಅಲ್ಲಿನ ನೌಕಾಪಡೆಯ ವಶಕ್ಕೊಳಗಾಗಿ ಸಿಕ್ಕಿಬಿದ್ದಿರುವ ಕಾಸರಗೋಡಿನ ಇಬ್ಬರ ಸಹಿತ 22 ಮಂದಿ ಭಾರತೀಯರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ. ಮುರಳೀಧರನ್ ತಿಳಿಸಿದ್ದಾರೆ.
ಬಿಜೆಪಿಯ ಕಾಸರಗೋಡು ಜಿಲ್ಲಾ ಅಧ್ಯಕ್ಷ, ನ್ಯಾಯವಾದಿ ಕೆ. ಶ್ರೀಕಾಂತ್ ಈ ವಿಷಯವಾಗಿ ತುರ್ತಾಗಿ ಕೇಂದ್ರ ಸಚಿವರ ಗಮನಕ್ಕೆ ತಂದಿದ್ದು, ಹಡಗಿನಲ್ಲಿ ಸಿಲುಕಿರುವವರ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಆಂಗ್ಲೋ ಈಸ್ಟರ್ನ್ ಶಿಪಿಂಗ್ ಕಂಪೆನಿಗೆ ಸೇರಿದ ಎಸ್.ಜಿ. ಪೆಗಾಸಸ್ ಎಂಬ ಹೆಸರಿನ ಹಡಗು ಮಾರ್ಚ್‌ನಲ್ಲಿ ರಾಸಾಯನಿಕ ಪದಾರ್ಥಗಳನ್ನು ಹೇರಿಕೊಂಡು ಮುಂಬಯಿಯಿಂದ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿತ್ತು. ದಾರಿ ಮಧ್ಯೆ ಮಲಕ್ಕಾ ಪ್ರದೇಶಕ್ಕೆ ತಲುಪಿದಾಗ ಎಂಜಿನ್ ಕೆಟ್ಟು ದಿಕ್ಕು ಬದಲಾವಣೆಗೊಂಡು ಇಂಡೋ ನೇಷ್ಯಾದ ಸಮುದ್ರ ತೀರಕ್ಕೆ ಸಾಗಿತ್ತು, ಅಲ್ಲಿ ಲಂಗರು ಹಾಕಿ ನಿಲ್ಲಿಸಲಾಗಿತ್ತು. ಇಂಡೋನೇಷ್ಯಾ ನೌಕಾಪಡೆ ತನ್ನ ವ್ಯಾಪ್ತಿಗೊಳಪಟ್ಟ ಸಮುದ್ರ ಪ್ರವೇಶಿಸಿದ ಕಾರಣ ನೀಡಿ ಹಡಗನ್ನು ವಶಕ್ಕೆ ತೆಗೆದುಕೊಂಡು ಕೇಸು ದಾಖಲಿಸಿ, ಅಲ್ಲಿನ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ಹಡಗಿನಲ್ಲಿರುವ 22 ಭಾರತೀಯರು ಐದು ತಿಂಗಳಿಂದ ಹಡಗಿನಲ್ಲಿ ಉಳಿದುಕೊಂಡು ಏನು ಮಾಡಬೇಕೆಂದು ತಿಳಿಯದೆ ಅಂಗ ಲಾಚುವ ಸ್ಥಿತಿಗೆ ತಲುಪಿದ್ದಾರೆ.
ಹಡಗಿನಲ್ಲಿ ಇರುವವರನ್ನು ಸುರಕ್ಷಿತ ವಾಗಿ ಭಾರತಕ್ಕೆ ಹಿಂದಿರುಗುವಂತೆ ಮಾಡಲು ಇಂಡೋನೇಷ್ಯಾ ಸರಕಾರ ವನ್ನು ಸಂಪರ್ಕಿಸಿ ತುರ್ತಾಗಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ಹಡಗಿನಲ್ಲಿ ಉಪ್ಪಳ ಪಾರಕಟ್ಟೆಯ ಪಿ.ಕೆ. ಮೂಸಾ ಕುಂಞಿ, ಕುಂಬಳೆ ಆರಿಕ್ಕಾಡಿಯ ಕಲಂದರ್, ಪಾಲಾ^ಟ್‌ನ ಓರ್ವ ಸಹಿತ 22 ಮಂದಿ ಇದ್ದು, ಈಗಲೂ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.