ಮಧ್ಯಸ್ಥಿಕೆಗೆ ಸಿಎಂ ಸಿದ್ದರಾಮಯ್ಯರಿಗೆ ಮನವಿ
Team Udayavani, Jul 10, 2017, 3:45 AM IST
ಕಡ್ಡಾಯ ಮಲಯಾಳದಿಂದ ಕಾಸರಗೋಡಿನ ಕನ್ನಡಿಗರು ಅತಂತ್ರ
ಮಂಜೇಶ್ವರ: ಕೇರಳ ಸರಕಾರದ ಕಡ್ಡಾಯ ಮಲೆಯಾಳ ಅಧ್ಯಾದೇಶದಿಂದ ಕಾಸರಗೋಡಿನ ಕನ್ನಡಿಗರು ಅನ್ಯಾಯಕ್ಕೊಳಗಾಗುತ್ತಿದ್ದು, ಪ್ರಸ್ತುತ ಅಧ್ಯಾದೇಶದಿಂದ ಕಾಸರಗೋಡು ಜಿಲ್ಲೆಯನ್ನು ಹೊರತುಪಡಿಸಲು ಕೇರಳ ಸರಕಾರಕ್ಕೆ ಒತ್ತಡ ಹೇರುವಂತೆ ಆಗ್ರಹಿಸಿ ಕಾಸರಗೋಡು ಜಿ. ಪಂ.ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿಯನ್ನು ಸಲ್ಲಿಸಿದರು.
ಶುಕ್ರವಾರ ಮಂಗಳೂರಿಗೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಅತಿಥಿ ಗೃಹದಲ್ಲಿ ಭೇಟಿ ಮಾಡಿದ ಅವರು ಕಾಸರಗೋಡಿನ ಕನ್ನಡಿಗರು ಎದುರಿಸುತ್ತಿರುವ ಸವಾಲು ಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಶಾಸಕರಾದ ಅಭಯಚಂದ್ರ ಜೈನ್, ಮೇಯರ್ ಕವಿತಾ ಸನಿಲ್, ಟಿ.ಎಂ. ಶಹೀದ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಸತ್ತಾತ್ಮಕ ರಾಷ್ಟ್ರವಾದ ಸ್ವತಂತ್ರ ಭಾರತದಲ್ಲಿ ಭಾಷಾವಾರು ಪ್ರಾಂತ್ಯ ವಿಂಗಡನೆ ಸಂದರ್ಭದಲ್ಲಿ ಕಾಸರಗೋಡು ಪ್ರದೇಶ ಅನ್ಯಾಯವಾಗಿ ಕೇರಳಕ್ಕೆ ಸೇರ್ಪಡೆಗೊಂಡಿತು. ಆ ಬಳಿಕ ಕನ್ನಡಿಗರು ನಿರಂತರ ಶೋಷಣೆ ಗೊಳಗಾಗುತ್ತಿದ್ದಾರೆ. ಇದೀಗ ಕೇರಳ ಸರಕಾರ ಕಡ್ಡಾಯ ಮಲಯಾಳ ಅಧ್ಯಾದೇಶವನ್ನು ಜ್ಯಾರಿಗೆ ತರುವ ಮೂಲಕ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕರ ಮೇಲೆ ತೂಗುಗತ್ತಿಯನ್ನಿರಿಸಿದೆ. ಆ ಮೂಲಕ ಭಾಷಾ ಅಲ್ಪಸಂಖ್ಯಾಕರ ಸಾಂವಿಧಾನಿಕ ಹಕ್ಕು ಸವಲತ್ತುಗಳನ್ನು ಕಸಿಯತೊಡಗಿದೆ. ಕೇರಳ ಸರಕಾರ ಜಾರಿಗೆ ತಂದ ಭಾಷಾ ಮಸೂದೆ ಹಾಗೂ ಮಲಯಾಳ ಕಡ್ಡಾಯ ಅಧ್ಯಾದೇಶದಿಂದಾಗಿ ಇಲ್ಲಿನ ಕನ್ನಡ ಶಾಲೆಗಳಲ್ಲಿ ಕನ್ನಡ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಲೆಯಾಳಂ ಕಲಿಯಲೇ ಬೇಕಾದ ಅನಿವಾರ್ಯ ಸೃಷ್ಟಿಗೊಂಡಿದೆ.
ಈ ಮೂಲಕ ಭಾಷಾ ಅಲ್ಪಸಂಖ್ಯಾಕ ಕನ್ನಡಿಗರ ಮೇಲೆ ಬಲವಂತ ವಾಗಿ ಮಲಯಾಳ ಹೇರಿಕೆ ಮಾಡಲಾಗುತ್ತಿರು ವುದು ಖಂಡನೀಯ. ಈಗಾಗಲೇ ಕೇರಳ ರಾಜ್ಯ ಸರಕಾರದ ಈ ಸಂವಿಧಾನ ವಿರೋಧಿ ನಿಲುವಿನ ವಿರುದ್ಧ ಇಲ್ಲಿನ ಕನ್ನಡಿಗರು ತೀವ್ರ ಹೋರಾಟ ನಡೆಸುತ್ತಿದ್ದಾರೆ. ಕಾಸರ ಗೋಡು ಜಿಲ್ಲಾ ಪಂಚಾಯತ್ ಕೂಡಾ ಈ ಬಗ್ಗೆ ನಿರ್ಣಯವನ್ನು ಕೈಗೊಂಡು ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕ ಕನ್ನಡಿಗರ ಹಕ್ಕು ಸಂರಕ್ಷಿಸಿ ಭಾಷಾ ಮಸೂದೆ ಜಾರಿಗೊಳಿಸುವಂತೆ ಸರಕಾರಕ್ಕೆ ಮನವಿ ಮಾಡಿದೆ.
ಭಾಷಾವಾರು ಪ್ರಾಂತ ರಚನೆ ರೂಪುಗೊಂಡಂದಿನಿಂದ ಇಲ್ಲಿಯ ತನಕ ಕನ್ನಡ ಭಾಷೆಯನ್ನೇ ಕಲಿಯುತ್ತಿದ್ದ ಈ ಪ್ರದೇಶದ ಜನತೆ ಇದೀಗ ಕಡ್ಡಾಯ ಮಲ ಯಾಳ ಅಧ್ಯಾದೇಶದಿಂದಾಗಿ ಹೆಚ್ಚುವರಿ ಭಾಷೆ ಯೊಂದನ್ನು ಕಲಿಯಲೇ ಬೇಕಾಗಿದೆ. ಇದು ಭವಿಷ್ಯ ದಲ್ಲಿ ಕನ್ನಡ ವನ್ನು ಸಂಪೂರ್ಣ ನೀಷೇಧಿಸುವ ತಂತ್ರದ ಭಾಗವಾಗಿದೆಯೆಂಬುದರಲ್ಲಿ ಸಂದೇಹವಿಲ್ಲ ಎಂದು ಹರ್ಷಾದ್ ಸಲ್ಲಿಸಿದ ಮನವಿಯಲ್ಲಿ ಉಲ್ಲೇಖೀಸಿದ್ದಾರೆ.
ಮಾತೃ ಭಾಷೆಯಲ್ಲೇ ಶಿಕ್ಷಣ ಪಡೆಯುವುದು, ಉದ್ಯೋಗ ಪಡೆಯು ವುದು ಭಾಷಾ ಅಲ್ಪಸಂಖ್ಯಾತರ ಸಂವಿಧಾನದತ್ತ ಅವಕಾಶ. ಸಂವಿಧಾನದ ಕಲಂ 350 ಎ ಪ್ರಕಾರ ಭಾಷಾ ಅಲ್ಪಸಂಖ್ಯಾಕರಿಗೆ ಪ್ರಾಥಮಿಕ ಹಂತದಲ್ಲೇ ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆಯುವಂತೆ ರಕ್ಷಣೆ ಮತ್ತು ಸೌಲಭ್ಯ ಒದಗಿಸಬೇಕು. 350 ಬಿ (1)ರ ರಾಷ್ಟ್ರಪತಿಯವರು ಭಾಷಾ ಅಲ್ಪಸಂಖ್ಯಾಕರ ಹಿತರಕ್ಷಣೆಗಾಗಿ ವಿಶೇಷ ಅಧಿಕಾರಿಯನ್ನು ನೇಮಿಸಬೇಕು. 350 ಬಿ (2)ರ ಪ್ರಕಾರ ಭಾಷಾ ಅಲ್ಪಸಂಖ್ಯಾಕರ ಹಿತರಕ್ಷಣೆ ಬಗ್ಗೆ ಕಾಲಾನುಕಾಲದಲ್ಲಿ ವರದಿ ಸಿದ್ಧಪಡಿಸಿ ಸರಕಾರಕ್ಕೆ ವರದಿ ಸಲ್ಲಿಸಬೇಕು. ಇದಕ್ಕೆ ಪೂರಕವಾಗಿ ಕೇರಳ ಸರಕಾರ ಕಾಸರಗೋಡಿನ ಕನ್ನಡಿಗರನ್ನು ಭಾಷಾ ಅಲ್ಪಸಂಖ್ಯಾಕರೆಂದು ಮಾನ್ಯ ಮಾಡಿ ಸಂವಿಧಾನಬದ್ಧ ಸವಲತ್ತುಗಳನ್ನು ಒದಗಿಸಬೇಕಾದುದು ಕೇರಳ ಸರಕಾರದ ಕರ್ತವ್ಯವೆಂದು ಮನವಿಯಲ್ಲಿ ಉಲ್ಲೇಖೀಸಲಾಗಿದೆ.
2012-13ನೇ ಶೆ„ಕ್ಷಣಿಕ ವರ್ಷ ದಲ್ಲಿ ಕಾಸರಗೋಡು ಜಿಲ್ಲೆಯ ಹೊಸದುರ್ಗ ಸರಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಮಾಧ್ಯಮ ವಿಭಾಗ ಸಮಾಜಶಾಸ್ತ್ರ ವಿಷಯವನ್ನು ಬೋಧಿಸಲು ಕನ್ನಡ ಭಾಷೆಯ ಗಂಧಗಾಳಿಯೇ ಇಲ್ಲದ ಮಲಯಾಳಿ ಶಿಕ್ಷಕಿಯನ್ನು ನೇಮಿಸಲಾಗಿತ್ತು. ಭಾಷಾ ಅಲ್ಪಸಂಖ್ಯಾಕರಿಗೆ ಕನ್ನಡದಲ್ಲೇ ಶಿಕ್ಷಣ ನೀಡಬೇಕು ಎಂಬ ಸಂವಿಧಾನದ ಕಲಂ 350 (ಎ) ಸ್ಪಷ್ಟ ಉಲ್ಲಂಘನೆ. ಇದರ ವಿರುದ್ಧ ಕನ್ನಡಿಗರು ಧ್ವನಿ ಎತ್ತಿದ್ದಾರೆ. ಕನ್ನಡ ಭಾಷಾ ಜ್ಞಾನವನ್ನು ಸಂದರ್ಶನ ಸಮಯದಲ್ಲಿ ಪರೀಕ್ಷಿಸುವಾಗ ರಾಜಕೀಯ ಪ್ರಭಾವದಿಂದಲೋ, ಮೀಸಲಾತಿ ಕಾರಣದಿಂದಲೋ ಕನ್ನಡ ಜ್ಞಾನ ಇಲ್ಲದವರೂ ‘ಕನ್ನಡ ತಿಳಿದಿದೆ’ ಎಂದು ನೇಮಕಗೊಳ್ಳುತ್ತಾರೆ. ಇದು ವಂಚನೆ ಯಾಗಿದೆ. ಈ ವಂಚನೆ ನಿರಂತರವಾಗಿದೆ.
ಕಾಸರಗೋಡಿನ ಕನ್ನಡಿಗರ ಮೇಲಿನ ಮಲತಾಯಿ ಧೋರಣೆ ವಿರುದ್ಧ ಕನ್ನಡಿಗರ ಹೋರಾಟಕ್ಕೆ ತಾವು ಬೆಂಬಲ ಸೂಚಿಸುವಂತೆಯೂ ಇಲ್ಲಿನ ಕನ್ನಡಿಗರ ಹಿತರಕ್ಷಣೆಗಾಗಿ ಪ್ರಯತ್ನಿಸಿ, ಶತಮಾನಗಳಿಂದ ಜನ ಜೀವನದಲ್ಲಿ ವ್ಯಾವಹಾರಿಕವಾಗಿ ಹರಿದು ಬಂದಿರುವ ಕನ್ನಡ ಭಾಷೆ, ಸಂಸ್ಕೃತಿ ಕಲೆ, ಸಂಪ್ರದಾಯಗಳನ್ನು ಸಂರಕ್ಷಿಸುವಂ ತೆಯೂ. ಸರಕಾರದಿಂದ ಹೇರಲಾದ ಕಡ್ಡಾಯ ಮಲಯಾಳ ಕಲಿಕೆಯಿಂದ ಕಾಸರಗೋಡಿನ ಕನ್ನಡಿಗರನ್ನು ಹೊರತು ಪಡಿಸುವ ಆದೇಶವನ್ನು ಹೊರಡಿಸಲು ಕೇರಳ ಸರಕಾರಕ್ಕೆ ತೀವ್ರ ಒತ್ತಡ ಹೇರುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ವಾಹನ ಅಪಘಾತಕ್ಕೀಡಾದ ವ್ಯಕ್ತಿ ಸಾವು
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ: ಡಿ. 28 ರಂದು ಕೋರ್ಟ್ ತೀರ್ಪು
Madikeri: ರಾಜ್ಯದಲ್ಲೇ ಮೊಟ್ಟಮೊದಲ ಮೂಳೆ ದಾನ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ
Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್
Kasaragod; ಯುವಕನ ಕೊಲೆ: 6 ಮಂದಿಗೆ ಜೀವಾವಧಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.