Kasaragod ಸಮುದ್ರದಲ್ಲಿ ಅಲೆಗಳ ಸೆಳೆತಕ್ಕೆ ಒಳಗಾದ 20 ಮಕ್ಕಳ ರಕ್ಷಣೆ
Team Udayavani, Dec 4, 2023, 10:59 PM IST
ಕಾಸರಗೋಡು: ಕಾಸರಗೋಡು ಕಡಪ್ಪುರದಲ್ಲಿ ಸ್ನಾನಕ್ಕಿಳಿದ ಇಪ್ಪತ್ತರಷ್ಟು ಮಕ್ಕಳು ಭಾರೀ ಅಲೆಗೆ ಸಿಲುಕಿ ಆಳ ಸಮುದ್ರಕ್ಕೆ ಒಯ್ಯಲ್ಪಟ್ಟಿದ್ದು, ವಿಷಯ ತಿಳಿದು ಮೀನು ಕಾರ್ಮಿಕರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮಕ್ಕಳನ್ನು ಅಪಾಯದಿಂದ ರಕ್ಷಿಸಲಾಗಿದೆ.
ಸೋಮವಾರ ಬೆಳಗ್ಗೆ ಕಾಸರಗೋಡು ಕಡಪ್ಪುರದ ಬಳಿ ಅಯ್ಯಪ್ಪ ದೀಪೋತ್ಸವ ಕ್ಕೆಂದು ಬಂದ 12, 13 ಮತ್ತು 14 ರ ಹರೆಯದ ಸುಮಾರು 20ರಷ್ಟು ಮಕ್ಕಳು ಸಮುದ್ರ ಕಿನಾರೆಗೆ ಬಂದು ಮೀನು ಕಾರ್ಮಿಕರು ಬಳಸುವ ಕ್ಯಾನ್ಗಳನ್ನು ದೇಹಕ್ಕೆ ಕಟ್ಟಿಕೊಂಡು ಸಮುದ್ರಕ್ಕಿಳಿದಿದ್ದರು. ಆದರೆ ಅದೇ ಹೊತ್ತಿನಲ್ಲಿ ಅಪ್ಪಳಿಸಿದ ಅಲೆ ಮಕ್ಕಳನ್ನು ಎಳೆದೊಯ್ದಿದೆ.
ಮಕ್ಕಳು ಸಮುದ್ರದಲ್ಲಿ ಮುಳುಗುತ್ತಿ ರುವುದನ್ನು ಕಂಡ ಮೀನು ಕಾರ್ಮಿಕ ರಾದ ಬಾಬು, ಪುಷ್ಪಾಕರನ್, ಚಿತ್ರಕಾರನ್, ಹರೀಶ್ ತತ್ಕ್ಷಣ ಸಮುದ್ರಕ್ಕೆ ಹಾರಿ ಹರಸಾಹಸದಿಂದ ಮಕ್ಕಳನ್ನು ದಡಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು.
ಇದರಿಂದ ಸಂಭವನೀಯ ದುರಂತ ತಪ್ಪಿತು. ವಿಷಯ ತಿಳಿದು ಪೊಲೀಸ್ ಹಾಗೂ ಅಗ್ನಿಶಾಮಕ ದಳ ಮತ್ತುು ಸ್ಥಳೀಯರು ಸಮುದ್ರ ಕಿನಾರೆಗೆ ತಲುಪಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.